Skip to main content

Posts

Showing posts with the label Engraver Writing instruments on Metal surface

Blog number 1354. ಲೋಹದ ವಸ್ತು ಮತ್ತು ಪಾತ್ರೆಗಳ ಮೇಲೆ ಅಕ್ಷರ ಕೊರೆಯುವ ಎನ್ ಗ್ರೇವರ್ ಆ ಕಾಲದಲ್ಲಿ ಒಂದು ವಿಸ್ಮಯ ಯಂತ್ರವಾಗಿತ್ತು.

https://youtu.be/Dekt3ylz9Zo #ಕ್ಷುಲ್ಲಕವಾದ ಆದರೆ ಬಾಲ್ಯದಿಂದ ಕಾಡುವ ಕೆಲವು ಆಸೆಗಳು. #ಬುದ್ದಿ_ಬಂದ_50_ ವರ್ಷದ_ನಂತರ_ಈಡೇರಿತು #ಪಾತ್ರೆ_ಅಂಗಡಿಯಲ್ಲಿ_ಪಾತ್ರೆಗೆ_ಹೆಸರು_ಬರೆಯುವ_ ಎನ್ ಗ್ರೇವರ್ #ಇದೊಂದು_ವಿಸ್ಮಯ_ಪೆನ್_ಅನ್ನಿಸಿತ್ತು.     ನಾವೆಲ್ಲ 1970 ರಲ್ಲಿ ಒಂದನೇ ಕ್ಲಾಸಿಗೆ ಸೇರುವಾಗ ನಿದಾನವಾಗಿ ಸ್ಟೀಲ್ ಪಾತ್ರೆಗಳು ಪ್ರಾರಂಭ ಆಗಿತ್ತು, ಆಗ ಈಗಿನಂತೆ ತರಹೇವಾರಿ ಮೌಲ್ಡ್ ಇರಲಿಲ್ಲ ಒಂದೇ ರೀತಿಯ ಡಿಸೈನ್ ನ ತಟ್ಟೆ-ಲೋಟ - ತಂಬಿಗೆ ನಂತರ ಅಡಿಗೆ ಪಾತ್ರೆಗಳು ಬಂದರೂ ಗ್ರಾಮೀಣ ಪ್ರದೇಶದಲ್ಲಿ ಅದರ ಬಳಕೆ ಕಡಿಮೆ ಕಾರಣ ಸೌದೆ ಒಲೆಯ ಮೇಲೆ ಸ್ಟೀಲ್ ಪಾತ್ರೆ ಇಟ್ಟರೆ ಅದರ ಬುಡ ಸುಟ್ಟು ಕಪ್ಪಗಾಗುವುದು ಆಗಿನ ಕಾಲದ ಗೃಹಿಣಿಯರಿಗೆ ಇಷ್ಟವಿಲ್ಲದ ವಿಚಾರ ಆಗಿತ್ತು.    ಇದರ ಮದ್ಯದಲ್ಲಿ ಕಬ್ಬಿಣದ ಪಾತ್ರೆಗಳಿಗೆ ಸ್ಟೀಲ್ ಗಿಲೀಟು ಹಾಕಿ ಹಳ್ಳಿಗಳಲ್ಲಿ ರಾತ್ರೋ ರಾತ್ರಿ ಮಾರಾಟ ಮಾಡಿ ಮೋಸ ಮಾಡುವ ವ್ಯಾಪಾರಿಗಳೂ ಬರುತ್ತಿದ್ದರು.    ಕಂಚು - ಹಿತ್ತಾಳೆ ಪಾತ್ರ ಬಳಸುತ್ತ ಇದ್ದವರು ತಕ್ಷಣ ಅಲ್ಯೂಮಿನಿಯಂ ಅಥವ ಸ್ಟೀಲ್ ಪಾತ್ರೆಗೆ ಬದಲಾಗುತ್ತಿರಲಿಲ್ಲ ಆದರೆ ಆ ಕಾಲದ ಗೃಹಿಣಿಯರಿಗೆ ಅಡಿಗೆ ಮನೆಯಲ್ಲಿ ಸ್ಟೀಲ್ ಪಾತ್ರೆಗೆ ಬದಲಾಗಿ ಆಧುನಿಕ ನಾರಿ ಎಂಬ ಹೆಸರು ಗಳಿಸುವ ತವಕ ಇರುತ್ತಿತ್ತು.    ಆಗೆಲ್ಲ ಸಾಗರದಲ್ಲಿ ಒಂದೆರೆಡು ಸ್ಟೀಲ್ ಪಾತ್ರೆ ಅಂಗಡಿ ಮಾತ್ರ ಇತ್ತು ಅವುಗಳಿಗೆ ಬಿಡು...