4239. ಶಿವಮೊಗ್ಗ_ಜಿಲ್ಲೆಯ_ತೀರ್ಥಹಳ್ಳಿ_ತಾಲ್ಲೂಕು_ಬರಪಟ್ಟಿಯಲ್ಲಿ#ಆದರೆ_ಮಲೆನಾಡಿನ_ಸಾಗರ_ಮತ್ತು_ಹೊಸನಗರ_ತಾಲ್ಲೂಕು_ಸೇರಿಲ್ಲ_ಯಾಕೆ?...
ಶಿವಮೊಗ್ಗ_ಜಿಲ್ಲೆಯ_ತೀರ್ಥಹಳ್ಳಿ_ತಾಲ್ಲೂಕು_ಬರಪಟ್ಟಿಯಲ್ಲಿ #ಆದರೆ_ಮಲೆನಾಡಿನ_ಸಾಗರ_ಮತ್ತು_ಹೊಸನಗರ_ತಾಲ್ಲೂಕು_ಸೇರಿಲ್ಲ_ಯಾಕೆ?... ಈ ವರ್ಷ ಎಲ್ ನೀನೋ ಪರಿಣಾಮದಿಂದ ತೀವ್ರ ಬರಗಾಲ ಉಂಟಾಗಿದೆ, ಮಲೆನಾಡಿನಲ್ಲೂ ಬರಗಾಲದ ಛಾಯೆ ಆವರಿಸಿದೆ, ಇದರಿಂದ ಅನೇಕ ತಾಲ್ಲೂಕು ಬರಗಾಲದ ಪಟ್ಟಿಗೆ ಸೇರಿದೆ. ತೀರ್ಥಹಳ್ಳಿ ತಾಲ್ಲೂಕು ಬರ ಪಟ್ಟಿಯಲ್ಲಿ ಸೇರಿದ್ದಕ್ಕಾಗಿ ಆ ತಾಲ್ಲೂಕಿನ ಅವರ ಪಕ್ಷದ ಮುಖಂಡರನ್ನ ಕೊಂಡಾಡುವುದಾಗಲಿ ಅಥವ ಸಾಗರ ಮತ್ತು ಹೊಸನಗರ ತಾಲೂಕು ಈ ಪಟ್ಟಿಯಲ್ಲಿ ಸೇರಿಲ್ಲ ಎಂದು ಈ ಕ್ಷೇತ್ರದ ಶಾಸಕರನ್ನ ದೂರುವುದಾಗಲಿ ಸರಿಯಲ್ಲ. ಬರ ಪಟ್ಟಿಯಲ್ಲಿ ಒಂದು ತಾಲ್ಲೂಕು ಸೇರಲು ಅದಕ್ಕೆ ಆದ ನಿಗದಿತ ಮಾನದಂಡವಿದೆ ಯಾವುದೇ ಶಾಸಕರು ಅಥವ ಮಂತ್ರಿಗಳ ಶಿಪಾರಸ್ಸು ಇದರಲ್ಲಿ ನಡೆಯುವುದಿಲ್ಲ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕು ಬರ ಪಟ್ಟಿಯಲ್ಲಿ ಸಾದಾರಣ ಬರಗಾಲದ ತಾಲ್ಲೂಕು ಎಂದು ಸೇರಿದೆ ಆದರೆ ಇದೇ ಜಿಲ್ಲೆಯ ಮಲೆನಾಡಿನ ಸಾಗರ ಮತ್ತು ಹೊಸನಗರ ತಾಲೂಕು ಸೇರಿಲ್ಲ ಯಾಕೆ?... ಈ ಬರ ಪಟ್ಟಿಯಲ್ಲಿ ಸೇರಿದರೆ ಏನು ಲಾಭ ಎಂಬ ಮಾಹಿತಿ ಈ ಲೇಖನದಲ್ಲಿದೆ ಓದಿ. ಕೇಂದ್ರ ಸರ್ಕಾರದ ಬರ ನಿರ್ವಹಣಾ ಕೈಪಿಡಿ (Manual for Drought Management) ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (KSNDMC) ವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆ ಬರ ಪರಿಸ್ಥಿತಿಯನ್ನು ವರ್ಗೀಕರಿಸಲಾಗುತ್...