Skip to main content

Posts

Showing posts with the label Jaggery with Bang was old traditional methods of western ghats

Blog number 1049.ಹಿಸ್ಸೆ ಪಂಚಾಯಿತಿ ಬರಖಾಸ್ತು ಮಾಡಿದ ಭಂಗಿ ಬೆಲ್ಲ..... ಜೀವಮಾನದಲ್ಲೇ ಮರೆಯದ ಘಟನೆ.

#ಸಸ್ಯಗಳಲ್ಲಿ_ಏನಿದೆ_ಏನಿಲ್ಲ. #ಪ್ರಾಚೀನ_ಭಾರತದಲ್ಲಿ_ತಂಬಾಕು_ಇರಲಿಲ್ಲ #ಭಂಗಿ_ಸೊಪ್ಪು_ಮಾತ್ರ_ಬಳಕೆಯಲ್ಲಿತ್ತು. #ಚಿಲುಮೆ_ಸೇದುವ_ರಾಮರಸ_ಕುಡಿಯುವ_ಪದ್ಧತಿ_ಇತ್ತು. #ಮಲೆನಾಡಿನಲ್ಲಿ_ಆಲೆಮನೆಯಲ್ಲಿ_ಭಂಗಿ_ಸೊಪ್ಪಿನ_ಬೆಲ್ಲ_ಮಾಡುವ_ಪದ್ದತಿಯೂ_ಇತ್ತು. #ಹಿಸ್ಸಪಂಚಾಯಿತಿಯಲ್ಲಿ_ಭಂಗಿ_ಬೆಲ್ಲ_ತಿಂದ_ನನ್ನ_ಪಜೀತಿ_ಪ್ರಸಂಗ.    ಮುಸ್ಲಿಂ ಸಹೋದರರ ಆಸ್ತಿ ಹಿಸ್ಸೆಯ ಪಂಚಾಯ್ತಿಗೆ ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯನಾದ ನಾನು ಮುಖ್ಯ ಪ೦ಚಾಯಿತಿದಾರನಾಗಿ ಸಹೃದಯದ ಆ ಕುಟುಂಬದವರು ಆಹ್ವಾನಿಸಿದ್ದರು.   ಇವರಿಗೂ ಇವರ ತಾಯಿಗೂ ನನ್ನ ಮೇಲೆ ಆ ಕಾಲದಲ್ಲಿ ನಂಬಿಕೆ ಇತ್ತು.    ಈ ಕುಟುಂಬದ ಇವರ ತಂದೆ ಮತ್ತು ಸಹೋದರರ ಹಿಸ್ಸೆ ಪಂಚಾಯತಿ ನಾನೇ ಮಾಡಿದ್ದೆ ಆ ನಂತರ ಈ ಪಂಚಾಯಿತಿ ಆದ್ದರಿಂದ ಇವರ ಆಸ್ತಿ ಮತ್ತು ಈ ಸಹೋದರರ ಮನಸ್ಥಿತಿ ನನಗೆ ಚೆನ್ನಾಗಿ ಗೊತ್ತಿದ್ದರಿಂದ ನನಗೆ ಈ ಹಿಸ್ಸೆ ಪ೦ಚಾಯತನಲ್ಲಿ ಪ್ರಮುಖ ಸ್ಥಾನವಾಗಿತ್ತು.    ಬಿದನೂರು ನಗರದ ಬುಡನ್ ಸಾಹೇಬರ ಕುಟುಂಬ ಆನಂದಪುರಂಗೆ ಬಂದಿದ್ದು ಟಿಪ್ಪು ಸುಲ್ತಾನ್ ಕೆಳದಿ ಸಾಮ್ರಾಜ್ಯ ವಶ ಪಡಿಸಿಕೊಂಡಾಗ ಆನಂದಪುರಂ ಕೋಟೆಯ ನಿರ್ವಹಣೆಗೆ ಬಂದ ಯೋದರ ಕುಟುಂಬ ಇವರದ್ದು ಬಿದನೂರು ನಗರದ ದುಬಾರಪೇಟೆ ಇವರ ಮೂಲ.   ನಗರದ ಬುಡನ್ ಸಾಬರು ಆ ಕಾಲದಲ್ಲಿ ದೊಡ್ಡ ಜಮೀನ್ದಾರರು ಅವರಿಗೆ ಶೇಖ್ ಹಸನ್ ಸಾಬ್, ಶೇಖ್ ಮೈದೀನ್ ಸಾಬ್ ಮತ್ತು ಶೇಖ್ ಮಹಮ...