#ಕಸ್ತೂರಿರಂಗನ್ ವರದಿ ಜಾರಿ ಆಗಬೇಕೆ? ಬೇಡವೆ? # ಚಚೆ೯ ಎಲ್ಲಾ ಕಡೆ ನಡೆಯುತ್ತಿದೆ ಮುಖ್ಯಮಂತ್ರಿ ಯಡೂರಪ್ಪನವರು ಈ ವರದಿ ಜಾರಿ ಬೇಡ ಅನ್ನುತ್ತಿದ್ದಾರೆ, ಪರಿಸರವಾದಿಗಳು ಜಾರಿ ಆಗದಿದ್ದರೆ ಪರಿಸರ ಉಳಿಯುವುದಿಲ್ಲ ಎನ್ನುತ್ತಿದ್ದಾರೆ, ದೂರದ ಬಯಲು ಪ್ರದೇಶದವರೂ ಜಾರಿ ಆಗಲಿ ಅಂತಿದ್ದಾರೆ ಆದರೆ ಕಸ್ತೂರಿ ರಂಗನ್ ವರದಿಯಲ್ಲಿ ಶಿವಮೊಗ್ಗ ಜಿಲ್ಲೆಯ ಅತಿ ಹೆಚ್ಚು ಗ್ರಾಮಗಳು ಸಾಗರ ಹೊಸನಗರ ತೀಥ೯ಹಳ್ಳಿ ತಾಲ್ಲೂಕ್ ಗಳಲ್ಲಿ ಸೇರಿದೆ ಆದರೆ ಈ ಭಾಗದವರಿಗೆ ಅದರ ಅರಿವು ಇಲ್ಲ, ಪರಿಣಾಮದ ಬಗ್ಗೆ ಗೊತ್ತೆ ಇಲ್ಲ ಇದೊ೦ದು ವಿಷಾದನೀಯ ವಿಚಾರ. ಜನಸಾಮಾನ್ಯರಿರಲಿ ಈ ಬಾಗದ ಜನಪ್ರತಿನಿದಿಗಳಲ್ಲಿ ಕೂಡ ಕಸ್ತೂರಿ ರಂಗನ್ ವರದಿ ಮಾಹಿತಿ ಕೊರತೆ ಇದೆ. ಕಸ್ತೂರಿ ರಂಗನ್ ವರದಿ ಜಾರಿ ಆಗಬೇಕು ಎನ್ನುವ ಪರಿಸರವಾದಿಗಳಲ್ಲಿ ಇರುವಷ್ಟು ಸ್ಪಷ್ಟತೆ ಕಸ್ತೂರಿ ರಂಗನ್ ಜಾರಿ ಆಗುವುದು ಬೇಡ ಎನ್ನುವವರಲ್ಲಿ ಇಲ್ಲ. ಪರಿಸರ ಉಳಿಯಬೇಕು ಆದರೆ ಈ ಮಲೆನಾಡ ಪರಿಸರದ ಜನ ಸಾಮಾನ್ಯರ, ಕೃಷಿಕರ ಮೇಲೆ ಈ ವರದಿಯ ತಕ್ಷಣ ಪರಿಣಾಮ ಏನು ಮತ್ತು ದೀಘಾ೯ ವದಿ ಕಾಲದಲ್ಲಿ ಆಗುವ ಅನುಕೂಲ ಅಥವ ಅನಾನುಕೂಲದ ಬಗ್ಗೆ ಯಾರಿಗೂ ಯಾವುದೇ ಮಾಹಿತಿ ಇದ್ದ೦ತಿಲ್ಲ. ಈ ಬಗ್ಗೆ ಕೊಪ್ಪದ ವಿದ್ಯಾವಂತ ಮಲೆನಾಡ ಯುವ ಕೃಷಿಕರ ಬಳಗ ಮOಡಾಳೆ ಗ್ರೂಪ್ ಕಸ್ತೂರಿ ರಂಗನ್ ವರದಿಯ ಜನ ಜಾಗೃತಿ ಕೆಲಸ ಪ್ರಾರಂಬಿಸಿದೆ ಪರಿಸರ ಉಳಿಯಲಿ ಇದರ ಜೊತೆ ಸ್ಥಳಿಯ ಕೃಷಿ ಕೂಡ ಉಳಿಯಬ...