#ಕಸ್ತೂರಿರಂಗನ್ ವರದಿ ಜಾರಿ ಆಗಬೇಕೆ? ಬೇಡವೆ? #
ಚಚೆ೯ ಎಲ್ಲಾ ಕಡೆ ನಡೆಯುತ್ತಿದೆ ಮುಖ್ಯಮಂತ್ರಿ ಯಡೂರಪ್ಪನವರು ಈ ವರದಿ ಜಾರಿ ಬೇಡ ಅನ್ನುತ್ತಿದ್ದಾರೆ, ಪರಿಸರವಾದಿಗಳು ಜಾರಿ ಆಗದಿದ್ದರೆ ಪರಿಸರ ಉಳಿಯುವುದಿಲ್ಲ ಎನ್ನುತ್ತಿದ್ದಾರೆ, ದೂರದ ಬಯಲು ಪ್ರದೇಶದವರೂ ಜಾರಿ ಆಗಲಿ ಅಂತಿದ್ದಾರೆ ಆದರೆ ಕಸ್ತೂರಿ ರಂಗನ್ ವರದಿಯಲ್ಲಿ ಶಿವಮೊಗ್ಗ ಜಿಲ್ಲೆಯ ಅತಿ ಹೆಚ್ಚು ಗ್ರಾಮಗಳು ಸಾಗರ ಹೊಸನಗರ ತೀಥ೯ಹಳ್ಳಿ ತಾಲ್ಲೂಕ್ ಗಳಲ್ಲಿ ಸೇರಿದೆ ಆದರೆ ಈ ಭಾಗದವರಿಗೆ ಅದರ ಅರಿವು ಇಲ್ಲ, ಪರಿಣಾಮದ ಬಗ್ಗೆ ಗೊತ್ತೆ ಇಲ್ಲ ಇದೊ೦ದು ವಿಷಾದನೀಯ ವಿಚಾರ.
ಜನಸಾಮಾನ್ಯರಿರಲಿ ಈ ಬಾಗದ ಜನಪ್ರತಿನಿದಿಗಳಲ್ಲಿ ಕೂಡ ಕಸ್ತೂರಿ ರಂಗನ್ ವರದಿ ಮಾಹಿತಿ ಕೊರತೆ ಇದೆ.
ಕಸ್ತೂರಿ ರಂಗನ್ ವರದಿ ಜಾರಿ ಆಗಬೇಕು ಎನ್ನುವ ಪರಿಸರವಾದಿಗಳಲ್ಲಿ ಇರುವಷ್ಟು ಸ್ಪಷ್ಟತೆ ಕಸ್ತೂರಿ ರಂಗನ್ ಜಾರಿ ಆಗುವುದು ಬೇಡ ಎನ್ನುವವರಲ್ಲಿ ಇಲ್ಲ.
ಪರಿಸರ ಉಳಿಯಬೇಕು ಆದರೆ ಈ ಮಲೆನಾಡ ಪರಿಸರದ ಜನ ಸಾಮಾನ್ಯರ, ಕೃಷಿಕರ ಮೇಲೆ ಈ ವರದಿಯ ತಕ್ಷಣ ಪರಿಣಾಮ ಏನು ಮತ್ತು ದೀಘಾ೯ ವದಿ ಕಾಲದಲ್ಲಿ ಆಗುವ ಅನುಕೂಲ ಅಥವ ಅನಾನುಕೂಲದ ಬಗ್ಗೆ ಯಾರಿಗೂ ಯಾವುದೇ ಮಾಹಿತಿ ಇದ್ದ೦ತಿಲ್ಲ.
ಈ ಬಗ್ಗೆ ಕೊಪ್ಪದ ವಿದ್ಯಾವಂತ ಮಲೆನಾಡ ಯುವ ಕೃಷಿಕರ ಬಳಗ ಮOಡಾಳೆ ಗ್ರೂಪ್ ಕಸ್ತೂರಿ ರಂಗನ್ ವರದಿಯ ಜನ ಜಾಗೃತಿ ಕೆಲಸ ಪ್ರಾರಂಬಿಸಿದೆ ಪರಿಸರ ಉಳಿಯಲಿ ಇದರ ಜೊತೆ ಸ್ಥಳಿಯ ಕೃಷಿ ಕೂಡ ಉಳಿಯಬೇಕು, ಕೃಷಿಕರ ಜೀವನದ ಮೇಲೆ ತೂಗುಕತ್ತಿ ಆಗದ೦ತೆ ಈ ವರದಿಯ ಚಚೆ೯ ಆಗಲಿ, ಮಾಪಾ೯ಡಾಗಲಿ ಎಂದು ಬಯಸಿದ್ದಾರೆ ಇದರ ಮೊದಲ ಹಂತವಾಗಿ FB ಗೆಳೆಯ ದಿಗOತ್ ಬಿOಬೈಲ್ ಅನುವಾದಿಸಿದ ಕಸ್ತೂರಿ ರಂಗನ್ ವರದಿಯ ಕೈಪಿಡಿ ಮುದ್ರಿಸಿ ಪ್ರಕಟಿಸಿದ್ದಾರೆ ಇದರಲ್ಲಿ ಶಿವಮೊಗ್ಗ ಜಿಲ್ಲೆಯ ಯಾವ ಯಾವ ಗ್ರಾಮಗಳು ಈ ವರದಿಯಲ್ಲಿ ಸೇರಿದೆ ಎಂದು ಪ್ರಕಟಿಸಿದ್ದಾರೆ.
ಈಗಾಗಲೇ ಹಸಿರು ನ್ಯಾಯ ಪೀಠ ಇದರ ಜಾರಿಗೆ ಚಾಟಿ ಬೀಸಿದೆ, ಮುಂದೇನಾಗುತ್ತದೆ ಗೊತ್ತಿಲ್ಲ ಈ ವರದಿಯ ಪ್ರದೇಶದ ನಾವೆಲ್ಲ ಇದರ ಮಾಹಿತಿಯ ಕನಿಷ್ಟ ಮಾಹಿತಿಯೂ ಪಡೆಯದಿದ್ದರೆ? ಹಾಗಾಗಿ 50 ಈ ಪುಸ್ತಕ ಖರೀದಿಸಿ ಮಾಹಿತಿ ಅವಶ್ಯವಾಗಿ ತಿಳಿದುಕೊಳ್ಳಬೇಕಾದವರಿಗೆ ತಲುಪಿಸಿದ್ದೇನೆ.
ಪುಸ್ತಕ ಬೇಕಾದವರು ಅವರನ್ನ ಸಂಪಕಿ೯ಸ ಬಹುದು.
ಹಳ್ಳಿಗಳಲ್ಲಿ ಕ್ರಿಕೆಟ್, ರಾಜ್ಯೋತ್ಸವ, ಗಣಪತಿ ಹಬ್ಬ ಇತ್ಯಾದಿ ಆಚರಿಸುವ ಯುವ ಪಡೆ ಮಲೆನಾಡಿನ ನಮ್ಮ ಅಸ್ತಿತ್ವದ ಪ್ರಶ್ನೆ ಇರುವ ಕಸ್ತೂರಿ ರಂಗನ್ ವರದಿ ಬಗ್ಗೆ ಸಮಗ್ರ ಅಧ್ಯಯನ ಜನಜಾಗೃತಿಗೂ ಮುಂದಾಗಬೇಕಾಗಿದೆ.
ದಿಗಂತ್ ಬಿOಬೈಲ್ ಮತ್ತು ಮಂಡಾಳೆ ಗ್ರೂಪಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಕೆ. ಆರುಣ್ ಪ್ರಸಾದ್
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ
ಆನಂದಪುರಂ
ಒಂದಿಷ್ಟು ದಿನಗಳ ಹಿಂದೆ ಹೇಳಿದ್ದೆ ಕಸ್ತೂರಿ ರಂಗನ್ ವರದಿಯ ಕುರಿತಾಗಿ ಪುಸ್ತಕ ಮಾಡ್ತೀನೆಂದು, ಸಿದ್ಧವಾಗಿವೆ.
ಹೊಗೆಯಾಡುತ್ತಿದ್ದ ಕಸ್ತೂರಿ ರಂಗನ್ ವರದಿ ದಿಗ್ಗನೆದ್ದುಕೂತಿದೆ, ವರದಿ ಜಾರಿಯಾಗದಿದ್ದರೆ ಅಧಿಕಾರಿಗಳ ಸಂಬಳಕ್ಕೆ ಕತ್ತರಿ ಹಾಕುವುದಾಗಿ ಹಸಿರುಪೀಠ ಎಚ್ಚರಿಕೆ ನೀಡಿದೆ. ವಿರೋಧವೋ, ಪರವೋ ವರದಿಯ ಕುರಿತಾಗಿ ನಮಗೆಷ್ಟು ತಿಳಿದಿದೆ ಎನ್ನುವುದೇ ಪ್ರಶ್ನೆ. ಧರ್ಮ ಜಾತಿಗಳ ಹೆಸರಲ್ಲಿ ರಾಜಕೀಯ ಮಾಡುವವರಿಗೆ ಇವೆಲ್ಲ ಬೇಕಿಲ್ಲದ ವಿಚಾರ, ಆದರೆ ನಮ್ಮ ಬದುಕಿಗಾಗಿ ಹೋರಾಟ ನಡೆಸುತ್ತಿರುವ ಮಲೆನಾಡಿಗರಿಗೆ ಅಸ್ತಿತ್ವದ ಪ್ರಶ್ನೆ. ಪುಸ್ತಕ ಹೊರಬಂದು ಹಲವು ದಿನಗಳ ಕಳೆದು ಪುಸ್ತಕಗಳು ಹಲವು ಕಡೆ ತಲುಪಿಯಾಗಿದೆ. ಆದರೆ ನಾನಿಲ್ಲಿಯವರೆಗೆ ನನ್ನ ಫೇಸ್ಬುಕ್ ವಾಲ್ನಲ್ಲಿ ಬರೆದುಕೊಂಡಿರಲಿಲ್ಲ, ಈ ವಿಷಯದಲ್ಲಿ ಹೆಸರುಮಾಡಬೇಕೆನ್ನುವ ಅಸ್ಥೆ ನನದಲ್ಲ, ಬದಲಾಗಿ ಮಲೆನಾಡಿಗನಾಗಿ ಮಲೆನಾಡ ಜನರ ಜೊತೆನಿಲ್ಲಬೇಕೆಂಬ ಕಳಕಳಿಯಷ್ಟೆ.
ತೋಟ ಗದ್ದೆಗಳಲ್ಲಿ ಹತ್ತು ಹಲವು ಕಾಯಿಲೆಗಳು, ಕಾರ್ಮಿಕರ ಸಮಸ್ಯೆ, ಸೂಕ್ತ ಮೂಲಭೂತ ಸೌಕರ್ಯಗಳ ಕೊರತೆ ಈಗಲೂ ಮಲೆನಾಡ ಹಳ್ಳಿಗಳಲ್ಲಿ ಕಾಡುತ್ತಿರುವ ಈ ಸಮಯದಲ್ಲಿ ಕೃಷಿ ಜೀವನ ಸವಾಲಾಗಿ ಪರಿಣಮಿಸಿದೆ. ಈಗ ಮತ್ತದೇ ಕೃಷಿಕ ವರ್ಗದ ಮೇಲೆ ಬರೆಯೆಳೆಯುವಂತೆ ಹಲವಾರು ಯೋಜನೆಗಳು, ವರದಿಗಳು ಹತ್ತಿಕೂತರೆ ಮಲೆನಾಡಿಗರ ಬದುಕೇನಾಗಬಹುದು ಯೋಚಿಸಿ,
ಧರ್ಮ ಜಾತಿ ಪಂಥ ಪಕ್ಷಗಳ ಯೋಚನೆ ಬದಿಗಿಟ್ಟು ವರದಿಯ ಕುರಿತಾಗಿ ಮಲೆನಾಡಿನ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡೋಣ ಸ್ನೇಹಿತರೆ, ವರದಿಯ ಶಿಫಾರಸ್ಸುಗಳಲ್ಲಿ ಏನಿದೆ, ವರದಿಗೆ ವಿರೋಧ ನಾವೇಕೆ ಮಾಡಬೇಕು, ವರದಿ ಜಾರಿಯಾಗದಿದ್ದರೆ ಏನಾಗುವುದು ಇವೆಲ್ಲವನ್ನು ಆದಷ್ಟು ಜನರಿಗೆ ತಲುಪುವ ಹಾಗೆ ಬರೆದಿದ್ದೇನೆ. ನಮ್ಮ ಮಂಡಾಳೆ ಗ್ರೂಪ್ ಜೊತೆನಿಂತು ಹಣ ಹಾಕುವುದರೊಂದಿಗೆ ಎಲ್ಲ ರೀತಿಯಲ್ಲೂ ಪ್ರೋತ್ಸಾಹ ಕೊಟ್ಟಿದ್ದಾರೆ. ಪುಸ್ತಕ ಬೇಕಾದಲ್ಲಿ 9483095615 ಈ ನಂಬರಿಗೆ ವ್ಯಾಟ್ಸಪ್ ಮಾಡಿ, ಮೆಸೆಂಜರ್ ಅಲ್ಲಿ ಮೆಸೇಜ್ ಹಾಕಿ, ಬೆಲೆ ಹೆಚ್ಚೇನಿಲ್ಲ, ಯಾವುದೇ ಲಾಭದ ನಿರೀಕ್ಷೆಯಿಲ್ಲದೆ ಕೇವಲ 30 ರೂಪಾಯಿಯಷ್ಟೆ. ನನ್ನ ಜನಗಳಿಗೆ ಮಾಹಿತಿ ತಲುಪಿ ಎಲ್ಲರೂ ಪ್ರಶ್ನಿಸುವಂತಾಗಬೇಕು ಎನ್ನುವುದಷ್ಟೆ.
ಬರೀ ವ್ಯಾಟ್ಸಪ್ ಫೇಸ್ಬುಕ್ ಗಳಿಗೆ ನಮ್ಮ ಕೃತಿಕಾರ್ಯಗಳು ಸೀಮಿತವಾಗುವುದು ಬೇಡ, ಮಲೆನಾಡಿನಲ್ಲಿ ಹುಟ್ಟಿದ್ದೇವೆ ನಮ್ಮ ಭೂಮಿ ನಮಗಾಗಿ ಉಳಿಸಿಕೊಳ್ಳಲು ನಮ್ಮಿಂದಾದ ಪ್ರಯತ್ನ ಮಾಡೋಣ.
◆ದಿಗಂತ್ ಬಿಂಬೈಲ್.
"Save West Ghat"
ಶಿವಮೊಗ್ಗ: ಪಶ್ಚಿಮಘಟ್ಟದಲ್ಲಿ ಮತ್ತೆ ತಳಮಳ ಉಂಟಾಗಿದೆ. ದಟ್ಟ ಕಾಡೊಳಗೆ ವಾಸಿಸುವ ಜನ ಮತ್ತೊಮ್ಮೆ y ಸಿಲುಕಲಿದ್ದಾರೆ. ಡಾ.ಕಸ್ತೂರಿ ರಂಗನ್ ಅಧ್ಯಕ್ಷತೆಯ ಹೈಲೆವೆಲ್ ವರ್ಕಿಂಗ್ ಗ್ರೂಪ್ (ಎಚ್‌ಎಲ್‌ಡಬ್ಲ್ಯುಜಿ) ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಗೆ ಪಶ್ಚಿಮಘಟ್ಟದ ಜೀವವೈವಿಧ್ಯತೆ ಸಂರಕ್ಷಣೆ ಬಗ್ಗೆ ನೀಡಿರುವ ವರದಿಯ ಆಧಾರದ ಮೇಲೆ ಶಿವಮೊಗ್ಗ ಜಿಲ್ಲೆಯ 470 ಗ್ರಾಮಗಳನ್ನು `ಇಕೊ ಸೆನ್ಸಿಟೀವ್ ಏರಿಯಾ' ಎಂದು ಕೇಂದ್ರ ಸರ್ಕಾರ ಘೋಷಿಸಿದೆ.
ಇನ್ನು ಮುಂದೆ ಈ ಘೋಷಿತ ಪ್ರದೇಶ ಇಕೋ ಸೆನ್ಸಿಟೀವ್ ಏರಿಯಾಕ್ಕೆ ಒಳಪಟ್ಟು ನಿರ್ಬಂದಿತ ಪ್ರದೇಶವಾಗಲಿದೆ. ಈ ವರದಿ ಶಿಫಾರಸ್ಸಿನಂತೆ ಮುಂದಿನ ೫ ವರ್ಷಗಳಲ್ಲಿ ಇಕೋ ಸೆನ್ಸಿಟಿವ್ ಏರಿಯಾ ಅರಣ್ಯ ಪ್ರದೇಶ ಪ್ರದೇಶ ಸ್ವಾಭಾವಿಕವಾಗಿ ಅಭಿವೃದ್ಧಿ ಹೊಂದುವಂತೆ ಪ್ರಯತ್ನಿಸಬೇಕು. ಸಿಮೆಂಟ್, ಕಲ್ಲುಗಳು, ಯಾವುದೇ ರಾಸಾಯನಿಕ ಉಪಯೋಗಿಸಲು, ಜನವಸತಿ ನಿರ್ಮಿಸಲು ಅವಕಾಶವಿಲ್ಲ. ಹೀಗಾಗಿ ಪಶ್ಚಿಮಘಟ್ಟ ತಪ್ಪಲಿನಲ್ಲಿ ವಾಸಿಸುವರು ತಮ್ಮ ಜೀವನ ಶೈಲಿ, ಬದುಕಿನ ಶೈಲಿಯನ್ನು ಬದಲಿಸಿಕೊಳ್ಳುವುದು ಅನಿವಾರ್‍ಯವಾಗಲಿದೆ.
ಈಗಾಗಲೇ ಹಲವಾರು ಸರ್ಕಾರಿ ಯೋಜನೆಗಳ ಹೆಸರಿನಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಪಶ್ಚಿಮಘಟ್ಟದ ಮಲೆನಾಡಿನ ಜನರು ಇದೀಗ ಹೊಸ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಕೇಂದ್ರ ಸರ್ಕಾರ ಘೋಷಿಸಿರುವ ಜಿಲ್ಲೆಯ ಗ್ರಾಮಗಳ ಪಟ್ಟಿ ಈ ರೀತಿಯಿದೆ.
ಹೊಸನಗರ ತಾಲೂಕು:
ನಂದ್ರಿ, ದೊಡ್ಡಬಿಲಗೋಡು, ಅಲವಳ್ಳಿ, ಹುಲುಸಲೆ ಮಳವಳ್ಳಿ, ಹೊಲಗೋಡು, ಅಮಚಿ, ತೋಟದಕೊಪ್ಪ, ಹರಿದ್ರಾವತಿ, ಹೆಚ್. ಹುಣಸವಳ್ಳಿ, ಮೆಣಸೆ, ಮೊಸಲೂರು, ನೆಲಗಳಲೆ, ಕಾನಗೋಡು, ಗುಬ್ಬಿಗ, ಮೇಲಿನ ಸಂಪಳ್ಳಿ, ಚೂರ್ಡ, ಬಸವಾಪುರ, ಮಜೆವಾನ, ನೇರಳಮನೆ, ಬಸವಾಪುರ, ಬೆನವಳ್ಳಿ, ಹರಸಾಳು, ಸಿದ್ಲಿಪುರ, ವೀರಭದ್ರಾಪುರ, ಕಚಗೆಬಲು, ಕಲಶೆಟ್ಟಿಕೊಪ್ಪ, ಕುಕ್ಕಳಲೆ, ಕೊಸಕೊಪ್ಪ, ಜೇನಿ, ಬಿಳ್ಕಿ, ಅಂದಗೋಳಿ, ಹಿರೇಮೈತಿ, ಹಳೇತೋಟ, ಹಾರೋಹಿತ್ಲು, ಕಲ್ಕೊಪ್ಪ, ಕೋಟೆಶಿರೂರು, ಮಳವಳ್ಳಿ, ಹೆಬ್ಬಲಿಗೆ, ಪುಣಜೆ, ನೀಲಕಂಠನತೋಟ, ತಮಡಿಕೊಪ್ಪ, ಅರಗೋಡಿ, ಮಳಲಿ, ಕೆಸವೆ, ಹೆಚ್. ಹೊನ್ನೇಕೊಪ್ಪ, ಕಾರಗೋಡು, ಕಾರಿಗ, ಮಸಗಲ್ಲಿ, ಹಾರಂಬಳ್ಳಿ, ದುಮ್ಮ, ಕೊಲವಳ್ಳಿ, ಕಾಳಿಕಾಪುರ, ಮೂಗುಡ್ತಿ, ಮುಳಗದ್ದೆ, ಕುಸಗುಂಡಿ, ಕಳಸೆ, ತಲಕಾ, ಮುತ್ತೂರು, ಗುಬ್ಬಗಾ , ಕಲ್ಕೊಪ್ಪ, ಯಲಗಲ್ಲು, ಆಡಗೋಡಿ, ಕಲ್ಲೂರು, ಕಗಚಿ, ಕರಿಗೆರಸು, ಬೇಳೂರು, ನಾಗೋಡಿ, ಹುಲಿಗದ್ದೆ, ಮಂಜಗಳಲೆ, ಕೆ. ಕುನ್ನೂರು, ಹೆಬ್ಬುರುಳಿ, ಹೊಸೂರು, ಬಿದರಹಳ್ಳಿ, ಬೆಟ್ಟಳ್ಳಿ, ಕೆ. ಕುನ್ನೂರು, ಮಸಗನಿ, ಶಕವಳ್ಳಿ, ಎಲ್. ಗುಡ್ಡೇಕೊಪ್ಪ, ವಡಹೊಸಳ್ಳಿ, ಅಮೃತಾ, ಮಳಲಿಕೊಪ್ಪ, ಸಾವಂತೂರು, ಅರಮನೆಕೊಪ್ಪ, ಕಮಚಿ, ಬಿಳೆಕೊಪ್ಪ, ಹೆಚ್. ಹೊನ್ನೇಕೊಪ್ಪ, ಹಿರೇಯೋಗಿ, ಕಟ್ಟಿನಹೊಳೆ, ದೋಬಲು, ಮತ್ತಿಕೈ, ಬ್ರಾಹ್ಮಣತರುವೆ, ಕೋಡೂರು, ನೆಲ್ಲುಂಡೆ, ತ್ರಿಣಿವೆ, ಕೊಡಸೆ, ಆನೆಗದ್ದೆ, ಬ್ರಾಹ್ಮಣವಾಡ, ಬಸವನಬನ, ಕಿಲ್ಲಂದೂರು, ತೊಗರೆ, ಬಸೆ, ಮುಡುಗೊಪ್ಪ(ನಗರ), ಬಿಳ್ಳೋಡಿ, ಇಳಕುಂಜಿ, ಕಲ್ಲುವಿಡಿ-ಅಬ್ಬಗಳ, ಮಳಲಿ, ಬೆಳ್ಳೂರು, ಕಿಳಂದೂರು, ಕಾಡಿಗೆರೆ, ಕರಿಮನೆ, ಕಬಲೆ, ರೇವೆ, ಅಡಗೋಡಿ, ಕೈದುಗುಂದ, ಗಿಣಿಕಳ್ಳು, ಕೊಳವಾಡಿ, ನಿಡಗೋಡು, ಕವರಿ, ಕೊಳಗೋಡು, ಯಡೂರು, ಕಟ್ಟೆಕೊಪ್ಪ, ಹುಮ್ಮದಗಲ್ಲು, ಗುಬ್ಬಿಗ, ಬೇಗದಾಳಿ, ಉಳುತಿಗ, ಕೋರನಕೋಟೆ.
ಸಾಗರ ತಾಲೂಕು :
ಗುತ್ತನಹಳ್ಳಿ, ತಲಗಳಲೆ, ಕರ್ಲಿಕೊಪ್ಪ, ಹಲವಗೋಡು, ಜಂಬನಿ, ತಲವಾಟ, ಬಿಲ್ಲಿಸಿರಿ, ಮಡಸೂರು, ಕಾನುತೋಟ, ಬಿದರೂರು, ಹಿರೇಮನೆ, ಬೆಳಂದೂರು, ಲವಿಗೆರೆ, ಕೆರೋಡಿ, ಬಿಲ್ಲೇಮನೆ, ಮಲ್ಲ, ಬರಾಪುರ, ಉರುಳಗಲ್ಲು, ಕುಡಿಗೆರೆ, ಹೊನ್ನೇಮರಡು, ನೆಡವಳ್ಳಿ, ಬ್ರಾಹ್ಮಣಹಕ್ಕಲು, ಕಾನೂರು, ನರಗೋಡು, ಚನ್ನಶೆಟ್ಟಿಕೊಪ್ಪ, ನೀಚಡಿ, ಹಿರೆಬೆಳಗುಂಜಿ, ಬಳ್ಳಿಗೆರೆ, ಎಲವರಚಿ, ಸಂಪಳ್ಳಿ, ಶಿರಗೊಪ್ಪೆ, ಕನಪಗಾರು, ಮಡವಳ್ಳಿ, ಬಾನುಮನೆ, ಅರಳಗೊಡು, ಎಲಗಳಲೆ, ನಿತ್ಲಿ ಹಳೇ ತೋಟ, ಅರವಾಡೆ, ಹಾರೋಗೊಪ್ಪ, ಚಿಕ್ಕಬಲಗುಂಜಿ, ಹೆಣ್ಣಗೆರೆ, ಬನದಕೊಪ್ಪ, ಗೌತಮಪುರ, ಹಿರಹಕ್ರ, ಬದಲಕೊಪ್ಪ, ಕಪ್ಟೆಮನೆ, ಉಳ್ಳೂರು, ಕೆಸವಿನಮನೆ, ಕೊಪ್ಪರಿಗೆ, ಹೊಲಕೋಡು, ಪುರದಸರ, ಕಸ್ಪಾಡಿ, ಹೋಟಲಸರ, ನಾಗವಳ್ಳಿ, ಕೊಪ್ಪನಗದ್ದೆ, ಚೆನ್ನಶೆಟ್ಟಿಕೊಪ್ಪ, ಹುಳಿಹಿತ್ಲು, ನೆದರವಳ್ಳಿ, ನಾದವಳ್ಳಿ, ದನಂದೂರು, ಚಿಕ್ಕಮತ್ತೂರು, ಮತ್ತಿಕೊಪ್ಪ, ಚಿಪ್ಲಿ, ನಡವಟ್ಟಲಿ, ಬ್ರಾಹ್ಮಣಚಿರತ್ತೆ, ಹಾರಗೊಪ್ಪ, ನರಸೀಪುರ, ಬಾನುಕುಳಿ, ಮುಂಬಾಳು, ಕಾನೂರು ಇನಾಂ, ನಂದೀತಾಳೆ, ಮಳಲಿ, ಹೊಂಗೋಡು, ಜಂಬೇಕೊಪ್ಪ, ಹೊಸಗುಂದ,ಚನ್ನಗೊಂದ, ಬಲಿಗೆ, ಮಾವಿನಸರ, ಕಾನೂರುಮನೆ, ಮುಂಡಿಗೆಸರ, ತಂಗಲವಾಡಿ, ಚೆನ್ನಿಗತೋಟ, ಗುಡಿಹಿತ್ತಲು, ಕಲ್ಲೂರು, ತುಮರಿ, ತಂಗಳ, ಅಂಬಾರಗೋಡ್ಲು, ಹೆಬ್ಬಸೆ, ಗಿಳಾಲಗುಂಡಿ, ಬಳ್ಳಿಬಲು, ಬಲಗೋಡು, ಹೆಬ್ಬರಿಗೆ, ಚಂದರವಳ್ಳಿ, ಕುರುವರಿ, ಕೆರೆಹಿತ್ಲು, ಬೇಸೂರು, ಹೆಬ್ಬೋಡಿ, ತುಮರಿಕೊಪ್ಪ, ಕಪ್ಟೆಮನೆ, ನೆಗತ್ತು, ಅರಬಳ್ಳಿ, ಲಕ್ಕವಳ್ಳಿ, ಸಾತಲಲು, ಗೀಜಗ, ಇಂದುವಳ್ಳಿ, ಕಟ್ಟಿನಕರು, ಗಂಟಿನಕೊಪ್ಪ, ಕುದರೂರು, ಬೊಬ್ಬಿಗೆ, ಕೋಳೂರು, ಕನ್ನಿಗೆ, ಮಾಳೂರು, ಕೊಂಡನವಳ್ಳಿ, ಬರುವೆ, ಅಡಗಳಲೆ, ಕರಾನಿ, ತಲಗೋಡು, ಶಂಕಣ್ಣ ಶಾನಭೋಗ, ಮರಾಠಿ, ವಳೂರು.
ಶಿಕಾರಿಪುರ ತಾಲೂಕು:
ಗುಂಗರಕಟ್ಟೆ, ಕೆರೆಕಟ್ಟೆ, ಶಿಡಿಗಿನಹಾಳು, ಸುತ್ತಕಂಡೆ, ಮರಕಂಡೆ, ಕೆಸರಗಟ್ಟ, ಮದ್ರವಳ್ಳಿ, ಕಂಬದೂರು, ಎರೆಕೊಪ್ಪ, ಮತ್ತಿಗಟ್ಟ, ಕಿಟ್ಟದಹಳ್ಳಿ, ಕೊತ್ರಹಳ್ಳಿ,
ಶಿವಮೊಗ್ಗ ತಾಲೂಕು:
ಕುಂಸಿ, ಕೋಣೆಹೊಸೂರು, ತುಪ್ಪೂರು, ಅಲ್ಕುನಿ, ನೀಲಗೊಂಡನಕೊಪ್ಪ, ಕೆಸವಿನಕಟ್ಟೆ, ಹನಿವಾಸ, ಕೆಂಪೆನಕೊಪ್ಪ, ಹೊರಬಲು, ಭೈರನಕೊಪ್ಪ, ಕೊರಗಿ, ಶಾಂತಿಕೆರೆ, ಶೆಟ್ಟಿಕೆರೆ, ಮಡೆಕೊಪ್ಪ, ಮಂಡಗಟ್ಟ, ಸೂಡೂರು, ಅಡಗಾಡಿ, ವೀರಗಾರನಭೈರನಕೊಪ್ಪ, ಚಿಕ್ಕಮಸಲಿ, ಚನ್ನಹಳ್ಳಿ, ಆನೇಸರ, ಇಟ್ಟಿಗೆಹಳ್ಳಿ, ದೊಡ್ಡಮಸಲಿ, ಆಡಿನಕೊಟ್ಟಿಗೆ, ತೇವರಕೊಪ್ಪ, ಸಿರಿಗೆರೆ, ತಮಡಿಹಳ್‌ಳಿ,ಚಿಟ್ಟಿನಾಳ, ಗುಡ್ಡದ ಹರೆಕೆರೆ, ಮಂಜರಿಕೊಪ್ಪ, ಕೋಡಿ, ಹೊಸೂರು, ಪುರದಾಳು, ಅನುಪಿನಕಟ್ಟೆ, ಮಲೇಶಂಕರ, ಮಲೇಶಂಕರ ಸ್ಟೇಟ್ ಫಾರೆಸ್ಟ್, ಹನುಮಂತಾಪುರ, ಗೋವಿಂದಾಪುರ, ಅಗಸವಳ್ಳಿ, ಶೆಟ್ಟಿಹಳ್ಳಿ, ಇಚವಾಡಿ, ಬಸವಾಪುರ, ಸಕ್ಕರೆಬಲು, ತಟ್ಟಿಕೆರೆ, ಹೊಸಕೊಪ್ಪ, ಚಿತ್ರಶೆಟ್ಟಿಹಳ್ಳಿ, ಗಾಜನೂರು-ಮುಳ್ಳುಕೆರೆ, ವೀರಾಪುರ, ಕುಡಗಾಲಮನೆ, ಕುಸಕೂರು, ಎರಗನಾಡು, ಕಡೇಕೈ, ಹುರಳೀಹಳ್ಳಿ, ಕೈದೊಟ, ಉಂಬ್ಳೇಬಲು, ಹರಿಗೆರೆ, ಗಡಿದಾಳು, ಸಿದ್ದಮ್ಮಾ ಹೊಸೂರು, ಕಾಕನಹೋಸೂಡಿ, ಲಿಂಗಾಪುರ.
ತೀರ್ಥಹಳ್ಳಿ ತಾಲೂಕು:
ಅರನಳ್ಳಿ, ಹುಂಚದಕಟ್ಟೆ, ಹುಟ್ಟಳ್ಳಿ, ಆಲೂರು, ವಾಟಗಾರು, ಕರಕುಚ್ಚಿ, ಕೆಸವೆ, ಯೋಗಿಮಳಲಿ, ಉಂಬ್ಲೇಬಲು, ಮುನಿಯೂರು, ಹಿರೆಕಲ್ಲಹಳ್ಳಿ, ಹಣಗೆರೆ, ಸೊರೇಬಲು, ಶಂಕರಾಪುರ, ಚಿಕ್ಕಲ್‌ಹಳ್ಳಿ, ಅಲಸೆ, ಮಂಡಕಾ, ಚೀರನಹಳ್ಳಿ, ಬೀಡೆ, ಮೇಲಿನ ಕಡಗೋಡು, ಕಂಬಿನಕೈ, ಹೆಗಲತ್ತಿ, ಹೊಸಕೊಪ್ಪ, ಜೋಗಿಕೊಪ್ಪ, ಚೀಗಡಿ, ಹಾದಿಗಲ್ಲು, ದೇಮ್ಲಾಪುರ, ಬಸವನಗದ್ದೆ, ಕೋಣಂದೂರು, ಆಡಿನಸರ, ಆಕ್ಲಾಪುರ, ಹಲವನಹಳ್ಳಿ, ಗರಗ, ಸುರಳಿ, ವೆಂಕನಹಳ್ಳಿ, ಕಿಟ್ಟಂದೂರು, ಕಟ್ಟೇಕೊಪ್ಪ, ಮಲ್ಲಾಪುರ, ಸಿಂಗನಬಿದರೆ, ಸಾಲೇಕೊಪ್ಪ, ಕಿಕ್ಕೇರಿ, ತ್ರಿಯಂಬಕಾಪುರ, ಯಮರವಳ್ಳಿ, ಹುಲಕೋಡು, ತಳಲೆ, ಹೊಸಕೆರೆ, ಕುಲ್ಲುಂಡೆ, ಅತ್ತಿಗದ್ದೆ, ಕುಚ್ಚಲು, ಕಂಡಿಕಾ, ಕಲವತ್ತಿ, ಬೊಮ್ಮನಹಳ್ಳಿ, ನೇರಳೆಮನೆ, ವೀರಾಪುರ, ತೋಟದಕೊಪ್ಪ, ನೆರಲಕೊಪ್ಪ, ಬೀಸು, ಯಡವತ್ತಿ, ಬಿಳುವೆ-ಹರಿಹರಪುರ, ಟೆಂಕಬಲು, ಕಂಗಲಕೊಪ್ಪ, ನಂದಿಗೋಡು, ಉಬ್ಬೂರು, ಹಲಗ, ಕಡೇಗದ್ದೆ, ನಕ್ರಗೋಡು, ಕಂಗಲಕೊಪ್ಪ, ಬಲುಬಡಗಿ, ಮೇಲಿನ ಪಟ್ರವಳ್ಳಿ, ಅಗಸಾಡಿ, ಸಿಂದುವಾಡಿ, ಬಂದ್ಯ, ಹಲಸವಾಳ, ತೆಂಗಿನಕೊಪ್ಪ, ಶೇಡಗಾರು, ಹೊಸಕೋಡಿಗೆ, ಮಿತ್ತಲಗೋಡು, ಕಾವೇರಿ, ದೇಮಕ್ಕಿ, ಲಿಂಗಾಪುರ, ತ್ಯಾನಂದೂರು, ಯಡೇಹಳ್ಳಿ ಪಾಲ್, ಕುಡುಮಲ್ಲಿಗೆ, ಬಿಳುವೆ ಹರಿಹರಪುರ, ಕಿಮ್ಮನೆ, ಕವಲೇದುರ್ಗ, ಯಳಗುಡ್ಡೆ, ಬೆಜ್ಜುವಳ್ಳಿ, ಬೊಬ್ಲಿ, ಕಸಕಾರು, ಜಂಬವಳ್ಳಿ, ಬೆಕ್ಷಿಕಂಜಿಗುಡ್ಡೆ, ಬೊಬ್ಲಿ ಇಂಚುವಳ್ಳಿ, ಹೊಸಕೊಪ್ಪ, ಹಾಳುಮಹಿಷಿ, ಕೆಳಕರೆ, ಕೊಗ್ಗೋಡು, ಹೆದ್ದೂರು, ಮಹಿಷಿ, ಹಸಂದೂರ, ಬಿಂತಾಳ, ಕೊಡುವಳ್ಳಿ, ಕಲಗೀಬಲು, ಶೆಟ್ಟಿಗಾಲ್‌ಕೊಪ್ಪ, ಹೊಳೇಕೊಪ್ಪ, ಮುನ್ನೂರಳ್ಳಿ, ಕೋಡ್ಲು, ಮೃಗಾವಧೆ, ಅಂಗಾಲಕೊಡಿಗೆ, ಲಕ್ಕುಂದ, ಮಾವಡಿ, ಇಂಗ್ಲಾದಿ, ಹೊರಬಲು, ಆಲ್ಮನೆ, ಅಂದಗೆರೆ, ಬೋಗಾರುಕೊಪ್ಪ, ಬಿಳುಮನೆ, ಮಣಿಕೊಪ್ಪ, ಕೊಳಗಿ, ಹೊನ್ನೆಕೆರೆ, ಶುಂಠಿಹಕ್ಲು, ತುಂಬರಮನೆ, ಹುರಳಿ, ಅಡಗಿನಮಕ್ಕಿ, ಶಿವಳ್ಳಿ, ಎಡಮನೆ, ಹೇರಂಬಾಪುರ, ಬೆಳ್ಳಂಗಿ , ಹೊಳಲೂರು ಬೆಡಗೆರೆ, ಕಬಸೆ, ಬೆಕ್ಕನೂರು, ದಾಸನಕೊಡಿಗೆ, ಕುಡುವಳ್ಳಿ, ಚೀರನಕೆರೆ, ಶೀರೂರು, ಹೊಸೂರು, ಚೆಂಗಾರು, ಹೊನ್ನೇತಾಳು, ಕುಂದ, ನಂಟೂರು, ತಲ್ಲೂರು, ಬೇಳೆಹಳ್ಳಿ.
More Information Call
9019026207,
©Conditions apply
Comments
Post a Comment