ಪ್ರತಿ ಡಿಸೆಂಬರ್ 31ರ ರಾತ್ರಿ ನಾನು ಒಬ್ಬನೆ ಕುಳಿತು ಯೋಚಿಸುತ್ತೇನೆ , ನನ್ನ ಆಯಸ್ಸಿನಲ್ಲಿ ಒಂದು ವಷ೯ ಕಳೆದು ಹೋಯಿತಲ್ಲ ಎಂಬ ರೋದನೆ ಮತ್ತು ಒಂದು ಕ್ಯಾಲೆಂಡರ್ ವಷ೯ದಲ್ಲಿ ಸಾದನೆಯ ಗುರಿಯಲ್ಲಿ ಸಾದಿಸಿದ ಸಾದನೆ ವಿಮಷೆ೯ ಮಾಡುತ್ತೇನೆ.
55ನೇ ವಷ೯ದಲ್ಲಿ ನನ್ನ Health Card ಕೂಡ ಆದರೆ ಪಾಟಿ೯ ಸಂಭ್ರಮದಿಂದ ದೂರ, ಆಚರಿಸುವವರಿಗೆ ದಾರಿ ಬಿಟ್ಟು ಬದಿಗೆ ಸರಿದು ಬಿಡುತ್ತೇನೆ.
2020ರಲ್ಲಿ ನನ್ನ ಕನಸಾಗಿರುವ ಚಂಪಕರಾಣಿ ಕಾದಂಬರಿ, ಒಂದು ಸಣ್ಣ ಕಥಾ ಸಂಗ್ರಹ ಹೊರತರುವ ಗುರಿ ಇದೆ, ಪಿತೃಗಳ ತಪ೯ಣ ಗಯಾ, ಕಾಶಿಯಲ್ಲಿ ನೆರವೇರಿಸುವ ಆಶೆ ಇದೆ, ನಮ್ಮ ಊರ ವರಸಿದ್ಧಿವಿನಾಯಕ ರಥ ಉತ್ಸವ ಆ ದಿನದಲ್ಲಿ ನಮ್ಮ ಮನೆಯಿಂದ ನೆರವೇರಿಸುವ ಹೋಳಿಗೆ ತುಪ್ಪದ ಅನ್ನ ಸಂತಪ೯ಣೆ ಯಶಸ್ವಿಯಾಗಿ ನೆರವೇರಿಸುವುದು, ದೇವಾಲಯದ ಅಷ್ಟಬಂದನ ಮತ್ತು ಸಿದ್ಧಿವಿನಾಯಕನಿಗೆ ಬೆಳ್ಳಿ ಕವಚ ಅಪಿ೯ಸುವ ಹರಕೆ ಪೂರೈಸುವ ಕನಸಿದೆ.
ಇಲ್ಲಿ ಬರೆಯಲಾಗದ ಕೆಲ ಗುರಿಗಳನ್ನ ಸಕ್ರಿಯ ಮಾಡಬೇಕಾದ ಹoಬಲವೂ ಇದೆ.
Comments
Post a Comment