#2001ರಲ್ಲಿ ಆನಂದಪುರಂ ಕನ್ನಡ ಸಂಘದ ಆವರಣದಲ್ಲಿ ನಾ.ಡಿಸೋಜ ಬಯಲು ರಂಗ ಮಂದಿರ ಉದ್ಘಾಟನೆ ಕಡಿದಾಳು ಶಾಮಣ್ಣರಿಂದ #
1995 ರಿಂದ 2001ರವರೆಗೆ ಆನಂದಪುರಂ ಹೋಬಳಿಯಲ್ಲಿ ರಚನಾತ್ಮಕ ಕಾಯ೯ ನೆರವೇರಿಸುವ ಹುಮ್ಮಸ್ಸು ಮತ್ತು ವಯಸ್ಸು ನನ್ನದಾಗಿತ್ತು ಆಗ ನನ್ನ ವಯಸ್ಸು 30.
ಮುರುಘಾಮಠ ಸ.ಪ್ರಾ.ಶಾಲೆ ಆವರಣದಲ್ಲಿ ಕೆ.ವಿ.ಸುಬ್ಬಣ್ಣ ರಂಗಮಂದಿರ, ಆನಂದಪುರಂ ಕಾಲೇಜ್ ಆವರಣದಲ್ಲಿ ಹಾಸ್ಯ ನಟ ಬಾಲಕೃಷ್ಣ ರಂಗಮಂದಿರ, ಯಡೇಹಳ್ಳಿ ಶಾಲಾ ಆವರಣದಲ್ಲಿ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ ರಂಗ ಮಂದಿರ ಪ್ರಾರಂಬಿಸಿದ ನಂತರ ಸಾಗರದ ನೆಚ್ಚಿನ ಸಾಹಿತಿ ನಾ.ಡಿಸೋಜ ಬಯಲು ರಂಗಮಂದಿರ ಆನಂದಪುರಂ ನ ಕನ್ನಡ ಸಂಘದ ಆವರಣದಲ್ಲಿ ನಿಮಿ೯ಸಿ ಕಡಿದಾಳು ಶಾಮಣ್ಣರಿಂದ ಉದ್ಘಾಟಿಸಿದ್ದು ಈ ಸಮಾರಂಭದಲ್ಲಿ ನಾ.ಡಿಸೋಜರು ಖುದ್ದಾಗಿ ಭಾಗವಹಿಸಿದ್ದರು.
ಆ ದಿನ ಶಿವಮೊಗ್ಗದ ಜಾಷದಿ ಸಸ್ಯಗಳ ತಜ್ಞ ವೆಂಕಟಗಿರಿಯರನ್ನ ಸನ್ಮಾನಿಸಿದ್ದು ಕೂಡ.
ಎಲ್ಲರೂ ನನ್ನ ಮನೆಯಲ್ಲಿ ಚಹಾ ಕುಡಿದು ಕಾಯ೯ಕ್ರಮಕ್ಕೆ ಹೋಗಿದ್ದೆವು.
ಕಡಿದಾಳು ಶಾಮಣ್ಣ ನಾ.ಡಿಸೋಜ ರಂಗಮ೦ದಿರ ಉದ್ಘಾಟಿಸಿ ದೇವಾಲಯಕ್ಕೆ ಮುಂಚೆ ಟಾಯಿಲೆಟ್ ನಿಮಾ೯ಣ ಆಗಬೇಕೆಂದು 2001ರಲ್ಲೇ ಸ್ವಚ್ಚ ಭಾರತ ಪ್ರತಿಪಾದಿಸಿದರೆ ನಾ.ಡಿ.ನನ್ನ ಹೆಸರಲ್ಲಿ ರಂಗ ಮಂದಿರ ನನ್ನ ಜೀವನದ ಅವಿಸ್ಮರಣಿಯ ದಿನ ಎಂದರು, ನಂತರ ಅವರು ಅತ್ಯಂತ ಮೇಲ್ಮಟ್ಟದ ಸ್ಥಾನ ಪಡೆದಿದ್ದಾರೆ.
ಅವತ್ತು ಆನಂದಪುರದ ಕನ್ನಡ ಸಂಘದ ಅಧ್ಯಕ್ಷ ಹಾ.ಮಾ.ಬಾಷಾ ಈಗಿಲ್ಲ, ನಾ.ಡಿ.ಡಿಸೋಜರಿಗೆ ನನ್ನ ಗುರುತೂ ಇಲ್ಲ, ಆಗಾಗ್ಗೆ ಶಿವಮೊಗ್ಗದ ಮಿನಾಕ್ಷಿ ಭವನದಲ್ಲಿ ವೆಂಕಟಗಿರಿ ಸಿಗುತ್ತಾರೆ, ಈ ಕಡೆ ಬಂದಾಗ ಕಡಿದಾಳು ಶಾಮಣ್ಣ ಒಂದೆರೆಡು ಬಾರಿ ಮನೆಗೆ ಬಂದಿದ್ದರು, ಆನಂದಪುರದ ಕನ್ನಡ ಸಂಘ ಈಗಲೂ ಪ್ರತಿ ವಷ೯ ವಾಷಿ೯ಕೋತ್ಸವ ಆಚರಿಸುತ್ತದೆ.
ಆನಂದಪುರದ ಕನ್ನಡ ಸಂಘ ಗೋಕಾಕ್ ವರದಿ ಜಾರಿಯ ಹೋರಾಟದಲ್ಲಿ ನಟ ಸಾವ೯ಬೌಮ ರಾಜ್ ಕುಮಾರ್ ಕರೆಸಿ ಆನಂದಪುರದಲ್ಲಿ ಸಭೆ ನಡೆಸಿದ್ದು, ಡಾಕ್ಟರ್ ಮೊದಿಯವರಿಂದ ಮೂರು ಸಾರಿ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರ, ಪತ್ರಕತ೯ರ ತರಬೇತಿ ಶಿಬಿರ, ರಾಜ್ಯ ಮಟ್ಟದ ಹಾಸ್ಯ ನಾಟಕ ಸ್ಪದೆ೯, ಜಿಲ್ಲಾ ತಾಲ್ಲೂಕ್ ಮಟ್ಟದ ಯುವಜನ ಮೇಳ, ಕಥೆ ಕವನ ರಚನಾ ತರಬೇತಿ ಹೀಗೆ ಹತ್ತಾರು ರಚನಾತ್ಮಕ ಕಾಯ೯ಕ್ರಮ ನಿರಂತರವಾಗಿ ನಡೆಸಿಕೊಂಡು ಬಂದಿದೆ ಇತ್ತೀಚಿಗೆ ಕೆಲವು ಕೆಟ್ಟ ಹಿತಾಸಕ್ತಿಗಳು ಈ ಅತ್ಯುತ್ತಮ ಸಂಘ ನಿಷ್ಕ್ರಿಯಗೊಳಿಸುತ್ತಿದ್ದರೂ ಅದನ್ನ ಸರಿಪಡಿಸಿಕೊಂಡು ಸಮಾಜ ಸುಧಾರಣೆಯ ಕಾಯ೯ಕ್ರಮದಲ್ಲಿ ಆನಂದಪುರಂ ಕನ್ನಡ ಸಂಘ ಮುಂದುವರೆಯುತ್ತಿರುವುದು ಸೋಜಿಗವೇ !?
Comments
Post a Comment