#ಪೇಸ್ಬುಕ್ ಗೆಳೆಯ ಬರಹಗಾರ ಚಿ೦ತಕ ಶ್ರಮ ಜೀವಿ ಗೋಪಿ ಬೆಲೂರು ಆತ್ಮಕ್ಕೆ ಸದ್ಗತಿ ಸ್ವಗ೯ಪ್ರಾಪ್ತಿಗಾಗಿ ಪ್ರಾಥ೯ನೆ#
40ವಷ೯ದಲ್ಲಿ ಇಹಲೋಕ ಯಾತ್ರೆ ಮುಗಿಸಿದ ಗೋಪಿ ನಮ್ಮ ಊರು ಆನಂದಪುರದಲ್ಲಿ ಜೆ.ಪಿ.ನಾರಾಯಣಸ್ವಾಮಿಯವರ ಸರಾಯಿ ಕ೦ಪನಿಯಲ್ಲಿ ಕೆಲಸ ಮಾಡಿದ ಬಗ್ಗೆ ಹೇಳಿದ್ದರು ಅವರಿಗೆ ನಮ್ಮ ಊರು ಚಿರಪರಿಚಿತ ಜೀವನಕ್ಕಾಗಿ ಬಸ್ ಕಂಡಕ್ಟರ್ ಆಗಿದ್ದು ಈಗ ಬೇಲೂರಿನಲ್ಲಿ ಹಣ್ಣಿನ ಅಂಗಡಿ ನಡೆಸುವುದಾಗಿ ತಿಳಿಸಿದ್ದರು, ಈ ಕಡೆ ಬಂದಾಗ ಬರಬೇಕೆಂದು ಆಮOತ್ರಣ ನೀಡಿದ್ದೆ ಕಳೆದ ವಷ೯ ಸಿಗಂದೂರಿಗೆ ಹೋದವರು ಕಾಲಾವಕಾಶ ಆಗದೆ ಬೇಟಿ ಆಗಲಿಲ್ಲ ಅಂತೂ ಕೊನೆಗೂ ಪರಸ್ಪರ ಬೇಟಿ ಸಾಧ್ಯವಾಗಲೇ ಇಲ್ಲ.
ಇವರೊಳಗೆ ಒಬ್ಬ ಕವಿ ಇದ್ದ, ಪುಸ್ತಕ ಖರೀದಿಸಿ ಓದಿ ವಿಮಷೇ೯ ಮಾಡುತ್ತಿದ್ದರು, ಪ್ರತಿ ನಿತ್ಯ ನಾನು ಅವರ Post ಓದುತ್ತಿದ್ದೆ, 2015ರಿಂದಲೂ.
ಕಳೆದ ಎರೆಡು ಮೂರು ತಿಂಗಳಿOದ ಹತಾಷರಾದOತೆ ಬರೆಯುತ್ತಿದ್ದರು ನವೆಂಬರ್ 30ರ ನಂತರ FB ಯಲ್ಲಿ ವಿರಳರಾದರು ಇವತ್ತು ಇವರು ಇಹಲೋಕ ತ್ಯಜಿಸಿದ್ದು ಕೇಳಿ ದುಃಖವಾಯಿತು ಕಣ್ಣು ನೀರಾಯಿತು.
Comments
Post a Comment