Skip to main content

Posts

Showing posts with the label Street vendors selling Pineapple slice at Jogfalls route.

Blog number 1698. ಮುಂಗಾರು ಮಳೆಯಲ್ಲಿ ನೆನೆಯುತ್ತಾ ಪೈನಾಪಲ್ ಸ್ಲೈಸ್ ಸವಿಯುತ್ತಾ ಜೋಗ್ ಜಲಪಾತ ವೀಕ್ಷಣೆ ಮಾಡುವ ಪ್ರವಾಸಿಗರ ಹೊಸ ಟ್ರೆಂಡ್.

#ಜೋಗ್_ಪಾಲ್ಸ್_ಪ್ರವಾಸಿಗಳು_ಈಗ_ಬರುವ_ಕಾಲ #ಈ_ಮಾರ್ಗದ_ಇಕ್ಕೆಲದಲ್ಲಿ_ಪೈನಾಪಲ್_ಸಂತೆ. #ಮುಂಗಾರು_ಮಳೆಯಲ್ಲಿ_ನೆನೆಯುತ್ತಾ_ಹಣ್ಣು_ಸವಿಯುವ_ಈಗಿನ_ಯುವ_ಪ್ರವಾಸಿಗಳ_ಟ್ರೆಂಡ್. #ರಸ್ತೆ_ಬದಿಯ_ಅಂಗಡಿಯಲ್ಲಿ_ಸ್ಥಳಿಯವಾಗಿ_ಬೆಳೆಯುವ_ಹಣ್ಣುಗಳ_ಕತ್ತರಿಸಿ_ಉಪ್ಪು_ಖಾರದೊಂದಿಗೆ. #ಪ್ರಯಾಣದ_ಆಯಾಸ_ಪರಿಹಾರ_ಮುಂಗಾರು_ಮಳೆ_ಹನಿಯ_ಜೊತೆ_ಜಲಪಾತದ_ವೀಕ್ಷಣೆಗೆ_ಹುಮ್ಮಸ್ಸು . #ಮನೆಯಲ್ಲೂ_ವಿವಿಧ_ರುಚಿಯ_ಪೈನಾಪಲ್_ಖಾಧ್ಯ_ಮಾಡ_ಬಹುದು.    ಜೋಗ್ ಜಲಪಾತ ನೋಡಲು ಬರುವ ಪ್ರವಾಸಿಗಳು ಮುಂಗಾರು ಪ್ರಾರಂಭದಲ್ಲಿ ಜುಲೈ ತಿಂಗಳಲ್ಲಿ ವಾರಾಂತ್ಯದಲ್ಲಿ ಬರಲು ಪ್ರಾರಂಬಿಸಿ ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಜಮಾಯಿಸುತ್ತಾರೆ.   ಮೊದಲೆಲ್ಲ ಬೆಂಗಳೂರಿಂದ ಅತಿ ಹೆಚ್ಚು ಬರುತ್ತಿದ್ದ ಪ್ರವಾಸಿಗಳು ಈಗ ಕೊಡಗು ಮತ್ತು ಚಿಕ್ಕಮಗಳೂರು ದಾರಿ ಹಿಡಿದಿದ್ದಾರೆ ಆಗೆಲ್ಲ ನಮ್ಮ ಊರಲ್ಲಿ ಶನಿವಾರ ಮತ್ತು ಭಾನುವಾರ ರಸ್ತೆ ದಾಟಲು ಸಾಧ್ಯವಿರುತ್ತಿರಲಿಲ್ಲ, ಕಾರಿನಿಂದ ಗಾಜಿನ ಮಧ್ಯದ ಬಾಟಲಿ ರಸ್ತೆಗೆ ಎಸೆಯುತ್ತಿದ್ದ ವಿಕೃತಿಗಳೆಲ್ಲ ಜಾಸ್ತಿ ಇರುತ್ತಿತ್ತು.    ಈಗ ಜೋಗ ಜಲಪಾತ ವೀಕ್ಷಣೆಗೆ ಕರಾವಳಿ ಮಾರ್ಗವಾಗಿ ಮತ್ತು ಹುಬ್ಬಳ್ಳಿ ಸಿರ್ಸಿ ಮಾರ್ಗವಾಗಿ ಬರುವವರು ಹೆಚ್ಚು.   ಜೋಗ ಜಲಪಾತಕ್ಕೆ ತಲುಪುವ ಎಲ್ಲಾ ಮಾರ್ಗಗಳಲ್ಲಿ ಸ್ಥಳಿಯ ರೈತರು ತಾವು ಬೆಳೆದ ಫೈನಾಪಲ್ ತಂದು ಸ್ಥಳದಲ್ಲೇ ಗ್ರಾಹಕರಿಗೆ ಅದರ ಸಿ...