Blog number 2084. ನೂರಾ ಹದಿನಾರು ಬಾರಿ ರಕ್ತದಾನ ಮಾಡಿರುವ ತಮ್ಮ ಜೀವಮಾನವನ್ನೇ ಸೇವೆಗೆ ಮುಡಿಪಾಗಿಟ್ಟಿರುವ ಶಿವಮೊಗ್ಗದ ರೆಡ್ ಕ್ರಾಸ್ ಸಂಸ್ಥೆಯ ಸಂಜೀವಿನಿ ಬ್ಲಡ್ ಬ್ಯಾಂಕ್ ಮುಖ್ಯಸ್ಥ ಧರಣೇಂದ್ರ ದಿನಕರ್
#ನನ್ನ_ಇವತ್ತಿನ_ಅತಿಥಿ_ಶಿವಮೊಗ್ಗದ_ದರಣೇಂದ್ರ_ದಿನಕರ್ #ಶಿವಮೊಗ್ಗ_ಜಿಲ್ಲೆಯ_ರಕ್ತದಾನದ_ಶತಕ_ವೀರರು #ಶಿವಮೊಗ್ಗದ_ರೆಡ್_ಕ್ರಾಸ್_ಸಂಸ್ಥೆಯ_ಸಂಜೀವಿನಿ_ಬ್ಲಡ್_ಬ್ಯಾಂಕ್_ಉಸ್ತುವಾರಿ #ಇವತ್ತಿಗೆ_116_ಬಾರಿ_ರಕ್ತದಾನ_ಮಾಡಿ_ಜಿಲ್ಲೆಯ_ಮೊದಲ_ಸ್ಥಾನದಲ್ಲಿದ್ದಾರೆ #ನಮ್ಮ_ಊರಲ್ಲಿರುವ_ಕೃಷಿ_ವಿಶ್ವವಿದ್ಯಾಲಯದಲ್ಲಿ_9_ಮೇ_2024ರ_ರಕ್ತದಾನ_ಶಿಬಿರದ_ತಯಾರಿಗೆ_ಬಂದಿದ್ದರು. #ಎಂಟು_ನೂರಾ_ತೊಂಬತ್ತೆರುಡು_ಯುನಿಟ್_ರಕ್ತ_ಸಂಗ್ರಹಿಸಿದ_ನಮ್ಮ_ಕಲ್ಯಾಣ_ಮಂಟಪದಲ್ಲಿ #ನಡೆದ_2016ರ_ರಕ್ತದಾನ_ಶಿಬಿರದ_ದಾಖಲೆ_ಇವತ್ತಿಗೂ_ಯಾರೂ_ಮುರಿದಿಲ್ಲ #ಇದು_ನಮ್ಮ_ರಾಜ್ಯದಲ್ಲಿಯೇ_ಎರಡನೆ_ಸ್ಥಾನ_ನಮ್ಮದು_ಎಂದು_ಅವರು_ನೀಡಿದ_ಮಾಹಿತಿ #ನನಗೇ_ಆಶ್ಚಯ೯. ಶಿವಮೊಗ್ಗದ ಗಾಂಧಿ ಬಜಾರಿನ ಬಸವಣ್ಣ ದೇವಸ್ಥಾನದ ಎದುರಿನ ದಿನಕರ್ ಮೆಟಲ್ ಸ್ಟೋರ್ ಎಂಬ ಪಾತ್ರೆ ಅಂಗಡಿ ಸ್ವಾತಂತ್ರ್ಯ ಪೂರ್ವದ್ದು ಅದು ದರಣೇಂದ್ರ ದಿನಕರ್ ಅವರ ಮೂರನೇ ತಲೆಮಾರಿನ ಅಂಗಡಿ. ಇವರ ದೊಡ್ಡಪ್ಪ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಶಿವಮೊಗ್ಗದಲ್ಲಿ ನಾಗಪ್ಪ ಶೆಟ್ಟರ ಸಾರಥ್ಯದಲ್ಲಿ ಪ್ರತಿಷ್ಠಿತ NES ವಿದ್ಯಾಸಂಸ್ಥೆ ಸ್ಥಾಪಕರಲ್ಲಿ ಒಬ್ಬರು. ಶಿವಮೊಗ್ಗದ ಜೈನ ಸಮಾಜದ ಗೌರವಾನ್ವಿತ ಕುಟುಂಬ ಇವರ ಹಿನ್ನೆಲೆ. 1985 ರಲ್ಲಿ ಇವರ ತಾಯಿಯ ಅನಾರೋಗ್ಯದ ಸಂದರ್ಭದಲ್ಲಿ ಐದಾರು ಯುನಿಟ್ ರಕ್ತ ಬೇಕಾದಾಗ ಆಗಿನ ಕಾಲದಲ್ಲಿ ಗೋಪಿ ಸರ್ಕಲ್ಲಿನ ಶ್ರೀನಿಧಿ ಬಟ್ಟೆ ಅಂಗಡಿಗೆ ಎಲ್ಲರೂ ...