Skip to main content

Posts

Showing posts with the label Gowda parampare 10 kutumba 18 gotra book by puttur Anantharaja gowda

Blog number 1620. ಕೆಳದಿ ಇತಿಹಾಸಕ್ತರು ಓದ ಬೇಕಾದ ಪುಸ್ತರ ಪುತ್ತೂರು ಅನಂತರಾಜ ಗೌಡರು ಬರೆದಿರುವ ಗೌಡ ಪರಂಪರೆ 10 ಕುಟುಂಬ 18 ಗೋತ್ರ.

#ಪುತ್ತೂರು_ಅನಂತರಾಜಗೌಡರ_ಈ_ಪುಸ್ತಕ #ಗೌಡ_ಪರಂಪರೆ_10_ಕುಟುಂಬ_18_ಗೋತ್ರ #ಸಾಹಿತಿ_ವಿಮರ್ಶಕರಾದ_ಅರವಿಂದಚೊಕ್ಕಾಡಿ_ವಿಮರ್ಷೆಯಲ್ಲಿ #ಗೌಡ_ಪರಂಪರೆಯ_ಪ್ರಾರ್ಥನೆಯಲ್ಲಿ_ಅರಮನೆ_ಇಕ್ಕೇರಿ #ಗುರುಮನೆ_ಶೃಂಗೇರಿ #ಅನಂತರಾಜರ_ಈ_ಪುಸ್ತಕದಲ್ಲಿ_ಕೆಳದಿ_ವಂಶಸ್ತರ_ಮೂಲದ_ಬಗ್ಗೆ_ಕೂಡ_ದಾಖಲಿಸಿದ್ದಾರೆ. #ಇದು_ಕೆಳದಿ_ಇತಿಹಾಸಕ್ತರು_ಓದ_ಬೇಕಾದ_ಪುಸ್ತಕ.  ಅರವಿಂದ ಚೊಕ್ಕಾಡಿ ಅವರ ಪೇಸ್ ಬುಕ್ ನಿಂದ      ಪುತ್ತೂರು ಅನಂತರಾಜ ಗೌಡ ಅವರು ಬರೆದಿರುವ ' ಗೌಡ ಪರಂಪರೆ 10 ಕುಟುಂಬ 18 ಗೋತ್ರ' ಪುಸ್ತಕವನ್ನು ಕೇವಲ ಕುತೂಹಲದಿಂದ ಓದಿದೆ. ನಾನು ಜನಾಂಗೀಯ ಅಧ್ಯಯನಕಾರನಾಗಲಿ, ಜನಪದ ಅಧ್ಯಯನಕಾರನಾಗಲಿ ಅಲ್ಲದಿರುವುದರಿಂದ ಇದು ಕೇವಲ ಆಸಕ್ತಿ ಮತ್ತು ಕುತೂಹಲದ ಓದೇ ಹೊರತು ಅಧ್ಯಯನ ಉದ್ದೇಶದ ಓದಲ್ಲ.  ಇಲ್ಲಿರುವ ಹಲವು ವಿಷಯಗಳು ಬೇರೆ ಬೇರೆ ಸಂದರ್ಭದಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ಸಂಗತಿಗಳಾಗಿವೆ. ಅಂತಹ ಸಂಗತಿಗಳನ್ನು ಮತ್ತು ಇದು ವರೆಗೆ ಹೆಚ್ಚು ಚರ್ಚೆಗೊಳಗಾಗಿರದ ಸಂಗತಿಗಳನ್ನು ಕ್ರೋಢೀಕರಿಸಿ ಸಮುದಾಯದ ನೆಲೆಗಟ್ಟಿನಲ್ಲಿ ಅನಂತರಾಜ ಗೌಡರು ವಿಸ್ತೃತ ಚರ್ಚೆ ನಡೆಸಿದ್ದಾರೆ. ಗೌಡ ಸಮುದಾಯದ ವಲಸೆ ಮತ್ತು ಅದರ ಹಿಂದಿರುವ ಮತಧಾರ್ಮಿಕ ಸಂಗತಿಗಳ ಅಭಿಪ್ರೇರಣೆಯ ವಿಷಯಗಳು ಸ್ವಾರಸ್ಯಕರವಾಗಿದೆ. ಇತಿಹಾಸದ ಉದ್ದಕ್ಕೂ ಜಾತ್ಯಂತರ, ಮತಾಂತರ ನಡೆದ ಬಗ್ಗೆ, ಹಿಮ್ಮರಳುವಿಕೆ ಆದ ಬಗ್ಗೆ ಹೇಳುವ ಕೃತಿಯು ವ್ಯವಸ್ಥೆ ಮತ್ತು ಮಾನವ ಸ...