Skip to main content

Blog number 1620. ಕೆಳದಿ ಇತಿಹಾಸಕ್ತರು ಓದ ಬೇಕಾದ ಪುಸ್ತರ ಪುತ್ತೂರು ಅನಂತರಾಜ ಗೌಡರು ಬರೆದಿರುವ ಗೌಡ ಪರಂಪರೆ 10 ಕುಟುಂಬ 18 ಗೋತ್ರ.

#ಪುತ್ತೂರು_ಅನಂತರಾಜಗೌಡರ_ಈ_ಪುಸ್ತಕ

#ಗೌಡ_ಪರಂಪರೆ_10_ಕುಟುಂಬ_18_ಗೋತ್ರ

#ಸಾಹಿತಿ_ವಿಮರ್ಶಕರಾದ_ಅರವಿಂದಚೊಕ್ಕಾಡಿ_ವಿಮರ್ಷೆಯಲ್ಲಿ

#ಗೌಡ_ಪರಂಪರೆಯ_ಪ್ರಾರ್ಥನೆಯಲ್ಲಿ_ಅರಮನೆ_ಇಕ್ಕೇರಿ

#ಗುರುಮನೆ_ಶೃಂಗೇರಿ

#ಅನಂತರಾಜರ_ಈ_ಪುಸ್ತಕದಲ್ಲಿ_ಕೆಳದಿ_ವಂಶಸ್ತರ_ಮೂಲದ_ಬಗ್ಗೆ_ಕೂಡ_ದಾಖಲಿಸಿದ್ದಾರೆ.

#ಇದು_ಕೆಳದಿ_ಇತಿಹಾಸಕ್ತರು_ಓದ_ಬೇಕಾದ_ಪುಸ್ತಕ.

 ಅರವಿಂದ ಚೊಕ್ಕಾಡಿ ಅವರ ಪೇಸ್ ಬುಕ್ ನಿಂದ

     ಪುತ್ತೂರು ಅನಂತರಾಜ ಗೌಡ ಅವರು ಬರೆದಿರುವ ' ಗೌಡ ಪರಂಪರೆ 10 ಕುಟುಂಬ 18 ಗೋತ್ರ' ಪುಸ್ತಕವನ್ನು ಕೇವಲ ಕುತೂಹಲದಿಂದ ಓದಿದೆ. ನಾನು ಜನಾಂಗೀಯ ಅಧ್ಯಯನಕಾರನಾಗಲಿ, ಜನಪದ ಅಧ್ಯಯನಕಾರನಾಗಲಿ ಅಲ್ಲದಿರುವುದರಿಂದ ಇದು ಕೇವಲ ಆಸಕ್ತಿ ಮತ್ತು ಕುತೂಹಲದ ಓದೇ ಹೊರತು ಅಧ್ಯಯನ ಉದ್ದೇಶದ ಓದಲ್ಲ. 

ಇಲ್ಲಿರುವ ಹಲವು ವಿಷಯಗಳು ಬೇರೆ ಬೇರೆ ಸಂದರ್ಭದಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ಸಂಗತಿಗಳಾಗಿವೆ. ಅಂತಹ ಸಂಗತಿಗಳನ್ನು ಮತ್ತು ಇದು ವರೆಗೆ ಹೆಚ್ಚು ಚರ್ಚೆಗೊಳಗಾಗಿರದ ಸಂಗತಿಗಳನ್ನು ಕ್ರೋಢೀಕರಿಸಿ ಸಮುದಾಯದ ನೆಲೆಗಟ್ಟಿನಲ್ಲಿ ಅನಂತರಾಜ ಗೌಡರು ವಿಸ್ತೃತ ಚರ್ಚೆ ನಡೆಸಿದ್ದಾರೆ. ಗೌಡ ಸಮುದಾಯದ ವಲಸೆ ಮತ್ತು ಅದರ ಹಿಂದಿರುವ ಮತಧಾರ್ಮಿಕ ಸಂಗತಿಗಳ ಅಭಿಪ್ರೇರಣೆಯ ವಿಷಯಗಳು ಸ್ವಾರಸ್ಯಕರವಾಗಿದೆ. ಇತಿಹಾಸದ ಉದ್ದಕ್ಕೂ ಜಾತ್ಯಂತರ, ಮತಾಂತರ ನಡೆದ ಬಗ್ಗೆ, ಹಿಮ್ಮರಳುವಿಕೆ ಆದ ಬಗ್ಗೆ ಹೇಳುವ ಕೃತಿಯು ವ್ಯವಸ್ಥೆ ಮತ್ತು ಮಾನವ ಸ್ವಭಾವದ ಚಲನಶೀಲತೆಯನ್ನು ನಿರೂಪಿಸುವಲ್ಲಿ ಸಫಲವಾಗಿದೆ. ಬೇರೆ ಬೇರೆ ಜಾತಿ-ಮತಧರ್ಮಗಳು ಪರಸ್ಪರ ಪ್ರಭಾವಿಸಿ ವಿಲೀನಗೊಳ್ಳುವುದು ಮತ್ತು ಹಾಗೆ ವಿಲೀನಗೊಂಡ ನಂತರವೂ ಅನನ್ಯತೆಯನ್ನು ಉಳಿಸಿಕೊಳ್ಳುವುದನ್ನು ಕಾಣಿಸುವ ಕೃತಿಯು ಎಲ್ಲ ಸಮುದಾಯಗಳ ಇತಿಹಾಸದ ರಚನೆ ಮತ್ತು ಪರಿಷ್ಕರಣೆಗೆ ಪೂರೊವಾಗಿದೆ. ಉದಾಹರಣೆಗೆ ಕೃತಿಯಲ್ಲಿ ಗೌಡರು ಮೂಲತಃ ಅಹಿಚ್ಛತ್ರದವರಾಗಿದ್ದು ಅಲ್ಲಿಂದ ವಲಸೆ ಪ್ರಾರಂಭ ಆಗಿರುವ ವಿಷಯವಿದೆ.‌ ಹವ್ಯಕ ಸಮುದಾಯದವರೂ ಮೂಲತಃ ಅಹಿಚ್ಛತ್ರದವರೆಂದು ಮತ್ತೊಂದು‌ಸಮುದಾಯದ ಅಧ್ಯಯನದ ಅಂಶವಾಗಿದೆ. ಹಾಗಿದ್ದರೆ ಈ ಅಹಿಚ್ಛತ್ರ ಎಷ್ಟು ಸಮುದಾಯಗಳಿಗೆ "ಛತ್ರ" ವಾಗಿತ್ತು! ಎನ್ನುವ ಸ್ವಾರಸ್ಯಕರ ಅಧ್ಯಯನಕ್ಕೆ ಈ ಅಂಶ ಪ್ರೇರಣಾದಾಯಿಯಾಗಿದೆ.

' ಗುರುಮನೆಯವರೇ, ಅರಮನೆಯವರೇ, ಕಟ್ಟೆಮನೆಯವರೇ, ಮಾಗಣೆಯವರೇ, ಊರಗೌಡರೇ, ಹತ್ತು ಕುಟುಂಬ ಹದಿನೆಂಟು ಗೋತ್ರದ ಬಂಧು ಬಂಧವರೇ" ಎಂದು ಗೌಡರಲ್ಲಿ ಬರುವ ಪ್ರಾರ್ಥನೆಯ ವಿವರ ನನಗೆ ಗೊತ್ತಿದೆ. ಆದರೆ ಈ ಪ್ರಾರ್ಥನೆಯ ಹಿಂದೆ ಎಷ್ಟೊಂದು ದೊಡ್ಡ ಇತಿಹಾಸವಿದೆ ಎನ್ನುವುದು ಗೊತ್ತಿಲ್ಲ.‌ ಗೌಡರಿಗೆ ಗುರುಮನೆ ಶೃಂಗೇರಿ, ಅರಮನೆ ಇಕ್ಕೇರಿ ಎನ್ನುವ ವಿಚಾರ ಗೌಡ ಸಮುದಾಯದ ಒಟ್ಟಾರೆ ಸಾಂಸ್ಕೃತಿಕ ತೊಡಗಿಕೊಳ್ಳುವಿಕೆಯನ್ನು ಪ್ರತ್ಯೇಕವಾದ ಧಾರ್ಮಿಕ ಮತ್ತು ರಾಜಕೀಯ ನೆಲೆಗಟ್ಟಿನಲ್ಲಿ ಅಧ್ಯಯನ ಮಾಡಬೇಕಾದ ಅಗತ್ಯವನ್ನು ಸೂಚಿಸುತ್ತದೆ.

ಒಂದು ಸಮುದಾಯದ ಇತಿಹಾಸವನ್ನು ಕಟ್ಟುವುದು ಬಹಳ‌ ಕಠಿಣವಾದ ಕೆಲಸ. ಇತಿಹಾಸವನ್ನು ಕಟ್ಟುವಾಗ ವ್ಯಕ್ತಿಯ ವರ್ತನೆಗಳಲ್ಲಿನ ಸಾಮಾನ್ಯೀಕೃತ ಸಂಗತಿಗಳನ್ನು ಸಮುದಾಯದ ವರ್ತನೆಗಳೆಂದು ಭಾವಿಸಿಕೊಳ್ಳಬೇಕಾಗುತ್ತದೆ.‌ ಅಂತಹ ವರ್ತನೆಗಳು ಕಾಲಾನುಕ್ರಮದಲ್ಲಿ ಬದಲಾಗಿಯೂ ಅನನ್ಯತೆಯನ್ನು ಉಳಿಸಿಕೊಳ್ಳುತ್ತದೆ. ಆಗ ಈ ಬದಲಾವಣೆಗಳಿಗೆ ಮತ್ತು ಅನನ್ಯತೆಗೆ ಕಾರಣಗಳನ್ನು ಸಂಶೋಧಿಸಬೇಕು.‌ ಹೀಗೆ ಕಂಡುಕೊಂಡಾಗಲೂ ವಿಶ್ಲೇಷಣೆಗೆ ಸಿಗಲಾರದ ಹಲವು ಸಂಗತಿಗಳು ಇರುತ್ತವೆ.‌ ಮತ್ಯಾವುದೊ ಕಾಲದಲ್ಲಿ ಅವು ವಿಶ್ಲೇಷಣೆಗೆ ಒಳಗಾಗಲು ಸಾಧ್ಯವಾಗುತ್ತದೆ. ಈ ರೀತಿಯ ಸಾಧನೆ-ಸವಾಲುಗಳು ಈ ಕೃತಿಯಲ್ಲೂ ಇವೆ. ಈ ಎಲ್ಲದರ ನಡುವೆಯೂ ಅನಂತರಾಜ ಗೌಡರು ಗೌಡ ಸಮುದಾಯದ ಇತಿಹಾಸವನ್ನು ಕಾಣಿಸುವ ಸಾರ್ಥಕ ಪ್ರಯತ್ನವನ್ನು ಮಾಡಿದ್ದಾರೆ. ಅದಕ್ಕಾಗಿ ಅನಂತರಾಜ ಗೌಡರು ಅಭಿನಂದನಾರ್ಹರು.

 #ಅನ೦ತರಾಜಗೌಡರು_ನನ್ನ_ಪ್ರಶ್ನೆಗೆ_ಉತ್ತರಿಸಿದ್ದು.

Arun Prasad ಕೆಳದಿ(ಇಕ್ಕೇರಿ) ಅರಸರ ಕುರಿತು, ಅವರ ವಂಶವೃಕ್ಷ, ಮೂಲ ಪುರುಷರು ಭದ್ರಪ್ಪ ಗೌಡ + ಚೌಡಪ್ಪಗೌಡ ಕೃಷಿ ಮೂಲದವರು ಹಾಗೂ ತಲಕಾಡು ಗಂಗರ ಪರಿವಾರದವರು ಎಂಬುದನ್ನು ಶಾಸನೋಕ್ತವಾಗಿ ಮತ್ತು ಇತರ 7 ಆಧಾರಗಳಿಂದ ಗೌಡ ಪರಂಪರೆ ಕೃತಿಯಲ್ಲಿ ನಿರೂಪಿಸಲಾಗಿದೆ. ಚೌಡಪ್ಪಗೌಡನ ಮಗ ಸದಾಶಿವ ನಾಯಕನು ಲಿಂಗಧಾರಣೆ ಮಾಡಿ ಶಿವಾಚಾರದವನಾದ. ತುಳುನಾಡಿಗೆ ಗೌಡರ ವಲಸೆಯು ಜಾತಿ, ಮಥೀಯ ಹಾಗೂ ರಾಜಕೀಯ  ಕಾರಣದಿಂದ ನಡೆದಿದೆ ಎಂಬುದು ಆಧಾರಸಹಿತ ನನ್ನ ಪ್ರತಿಪಾದನೆ. ವೆಂಕಟಪ್ಪ ನಾಯಕನ ತುಳುನಾಡಿನ ಜೈತ್ರ ಯಾತ್ರೆಯಲ್ಲಿ ಹೆಚ್ಚಿನ ಸೈನಿಕರು ದಂಡನಾಯಕರು ಗೌಡರಾಗಿದ್ದರು. ನಾಯಕ ಹಿಂತಿರುಗುವಾಗ ಆಯಕಟ್ಟಿನಲ್ಲಿ ಗೌಡರನ್ನು ನೇಮಿಸಿದ್ದ. ಬೇಕಲ್ ಕೋಟೆಯ ಸರಹದ್ದಿನಲ್ಲಿ ಇಂದಿಗೂ ಹಲವು ಗೌಡ ಕುಟುಂಬಗಳಿದ್ದು ಸುಳ್ಯ ಸರಹದ್ದಿನಲ್ಲಿ ವ್ಯವಾಹಿಕ ಸಂಬಂಧ ಇಟ್ಟು ಕೊಂಡಿದ್ದಾರೆ.  ಸದಾಶಿವ ನಾಯಕನ ಸೋದರಳಿಯ ವೀರರಾಜ ವೆಂಕಟಪ್ಪ ನಾಯಕನ ದಂಡಯಾತ್ರೆಯಲ್ಲಿ ಭಾಗವಹಿಸಿ ಹಿಂದಿರುಗುವಾಗ ಕೂಜುಗೋಡು ಗೌಡ ಕಟ್ಟೆಮನೆಯಲ್ಲಿ ತಂಗಿದ್ದು ಕೊಡಗಿನಲ್ಲಿದ್ದ ಅರಾಜಕತೆಯನ್ನು ತಿಳಿದು ತನ್ನದೇ ರಾಜ್ಯ ಸ್ಥಾಪನೆಯ ಕನಸು ಕಂಡು ಅದನ್ನು ಸಾಕಾರ ಗೊಳಿಸಿದ.ಹೆಚ್ಚಿನ ಮಾಹಿತಿಯು ಕೃತಿಯಲ್ಲಿದೆ.

#ಪುಸ್ತಕ_ಖರೀದಿಸಲು_ಸಂಪರ್ಕ

ವೀರ ಲೋಕ ಬುಕ್ಸ್ #ಗೌಡಪರಂಪರೆ
7022122121/8861212172.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...