Blog number 1605. ಮಲೆನಾಡಿನ ಭತ್ತದ ಗದ್ದೆಗಳು ಬೀಳು ಬಿಡುವುದರ ಅಸಲಿ ಕಾರಣ ಏನು? ಇದನ್ನು ಪುನಶ್ಚೇತನ ಮಾಡಲು ಸಾಧ್ಯವೇ? 1999ರಲ್ಲೇ ರೈತ ನಾಯಕ ಪ್ರೋಪೆಸರ್ ನಂಜುಂಡಸ್ವಾಮಿ ಎಚ್ಚರಿಸಿದ್ದರು.
#ಕೃಷಿ_ತಜ್ಞರಾದ_ನಾಗೇಂದ್ರಸಾಗರ್_ಮಳೆಆಶ್ರಿತ_ಬೀಳು_ಜಮೀನಿನ_ಪುನಶ್ಚೇತನದ_ಪೋಸ್ಟ್
#ಇಂತಹ_ಪರಿಸ್ಥಿತಿ_ಬಗ್ಗೆ_1999ರಲ್ಲಿ_ಪ್ರೋಪೆಪರ್_ನಂಜು೦ಡಸ್ವಾಮಿ_ಉಹಿಸಿದ್ದರು
#ಮಲೆನಾಡಿನ_ಭತ್ತದ_ಗದ್ದೆ_ಪುನಶ್ಚೇತನ_ಸಾಧ್ಯವಾ?
#ವಿಶ್ವಸಂಸ್ಥೆ_2017ರಿಂದ_ಆಹಾರ_ಬೆಳೆಯುವ_ಕೋಟ್ಯಾದೀಶ_ಆಗುತ್ತಾನೆ_ಎಂಬ_ಭವಿಷ್ಯ_ನಿಜವಾದೀತಾ?
ಕಷ್ಟಸಾಧ್ಯ... ಭತ್ತದ ಕೃಷಿ ವಿಧಾನ ಹೆಚ್ಚು ಮಾನವ ಶಕ್ತಿ ಕೇಳುತ್ತದೆ, ರೈತ ಗೊಬ್ಬರಕ್ಕೆ ಪರಾವಲಂಬಿ, ರಾಸಾಯನಿಕ ಗೊಬ್ಬರದ ಬೆಲೆ ಜಾಸ್ತಿ, ಭತ್ತ ಬೇಸಾಯಕ್ಕೆ ಹೆಚ್ಚು ನೀರು ಬಳಕೆ ಇಷ್ಟೆಲ್ಲ ಭರಿಸಿದರೂ ಇಳುವರಿ ಮತ್ತು ಗುಣಮಟ್ಟ ಗ್ಯಾರಂಟಿ ಇಲ್ಲ, ಕೈಗೆ ಸಿಕ್ಕ ಪಸಲು ಮಾರಿದರೆ ಎಕರೆವಾರು ನಷ್ಟ ಹೊರತು ಲಾಭವಿಲ್ಲ.
ಇದನ್ನು 1999ರಲ್ಲೇ ರೈತ ನಾಯಕ ಪ್ರೋಪೆಸರ್ ನಂಜುಂಡ ಸ್ವಾಮಿ ಹೇಳಿದ್ದರು " ಈಗ ನಮ್ಮ ರೈತನ ಕುಟುಂಬ ತಾನೇ ಸ್ವತಃ ಹೊಲದಲ್ಲಿ ಕೃಷಿ ಮಾಡುತ್ತಾನೆ ಅವನದ್ದೇ ಎತ್ತು-ಗಾಡಿ - ಗೊಬ್ಬರ ಲಾಭ ನಷ್ಟ ಲೆಕ್ಕ ಮಾಡದೇ ಭೂಮಿ ಹಾಳು ಬಿಡಬಾರದೆಂಬ ವಂಶಪಾರಂಪರ್ಯವಾಗಿ ನಡೆದು ಬಂದ ನಂಬಿಕೆ ..... ಆದರೆ ಮುಂದಿನ ದಿನಗಳಲ್ಲಿ ರೈತನ ಮಗ ಕಂಪ್ಯೂಟರ್ ಬಳಸುತ್ತಾನೆ, ಪ್ರತಿಯೊಂದನ್ನು ಲೆಖ್ಖಾಚಾರ ಇಡುತ್ತಾನೆ ಈಗಲೆ ಒಂದು ಎಕರೆಗೆ ಎರೆಡು ಸಾವಿರದ ಐನೂರು ನಷ್ಟ (1999 ರ ಅವರ ಮಾತು) ಅದ್ದರಿ೦ದ ಭತ್ತದ ಕೃಷಿ ಮಾಡುವುದು ಬಿಡುತ್ತಾನೆ ....
https://arunprasadhombuja.blogspot.com/2023/04/blog-number-1437-1999.html
ಈಗಿನ ಪರಿಸ್ಥಿತಿ ಅವರ 1999 ರ ಹೇಳಿಕೆಯ ಕನ್ನಡಿ ಆಗಿದೆ.
ಮುಂದಿನ ದಿನಗಳಲ್ಲಿ ಭತ್ತಕ್ಕೆ ಹೆಚ್ಚು ಬೆಲೆ ಬಂದರೆ ಮತ್ತೆ ಭತ್ತದ ಕೃಷಿ ಪ್ರಾರಂಭ ಆಗಬಹುದು ಒಂದು ಕ್ವಿಂಟಾಲ್ ಬೆಲೆ 2500 ಇದೆ ಅಕ್ಕಿ ಬೆಲೆ 40 ರಿಂದ ಪ್ರಾರಂಭ ಇದು ಭತ್ತದ ಬೆಲೆ 6000 ಆದರೆ ಭತ್ತದ ಕೃಷಿಕನಿಗೆ ಲಾಭ ಎಂದು ಎಣಿಸಿದರೆ ಆಗ ಅಕ್ಕಿ ಕನಿಷ್ಟ 100 ರೂಪಾಯಿ ಆಗಬೇಕು ಅದಕ್ಕೆ ಜನ ಸಾಮಾನ್ಯರು ಹೊಂದಿಕೆ ಸಾಧ್ಯವಾ ಎಂಬುದು ಕೂಡ ಯೋಚಿಸುವಂತಾದ್ದೆ.
ವಿಶ್ವ ಸಂಸ್ಥೆ ಸಮೀಕ್ಷೆ ಪ್ರಕಾರ ಪ್ರಪ೦ಚದಾದ್ಯಂತ ಆಹಾರ ಧಾನ್ಯ ಬೆಳೆಯುವವನು 2017 ರಿಂದ ಕೋಟ್ಯಾದೀಶ ಆಗುತ್ತಾನೆ (ವಾಣಿಜ್ಯ ಬೆಳೆಗಾರನಂತೆ) ಎಂದಿದೆ ಬಹುಶಃ ಮುಂದಿನ 10 ವರ್ಷದಲ್ಲಿ ಭತ್ತ ಬೆಳೆಯುವ ರೈತನಿಗೆ ಬಂಪರ್ ಬಹುಮಾನ ಬರಬಹುದು, ಇದರಲ್ಲಿ ಸರ್ಕಾರಗಳಿಂದ ಯಾವ ನಿರೀಕ್ಷೆಯೂ ಭತ್ತ ಬೆಳೆಯುವ ರೈತನಿಗೆ ಪುನಶ್ಚೇತನ ನೀಡಲಾರದು.
ಭತ್ತದ ಬೆಳೆಗೆ ಗರಿಷ್ಟ ದರ ಮಾರುಕಟ್ಟೆಯಲ್ಲಿ ಸಿಗುವಂತಹ ಕಾಲ ಬಂದಾಗ ಸಿನೋರಿಯ ಬದಲಾದೀತು.
Comments
Post a Comment