Skip to main content

Posts

Showing posts with the label District administration should take precautions about illigal electric connection to their fence

Blog number 987. ಶಿವಮೊಗ್ಗ ಸಮೀಪ ಎರೆಡು ಕಾಡಿನ ಗಂಡಾನೆ ವಿದ್ಯುತ್‌ ಸ್ಪರ್ಶಿಸಿ ಸಾವನ್ನಪ್ಪಿದ ಘಟನೆ.ವನ್ಯಜೀವಿ ಸಂರಕ್ಷಣಾ ಅಭಯಾರಣ್ಯದ ಅಂಚಿನಲ್ಲಿ ಬಗರ್ ಹುಕುಂ ಜಮೀನು ಮಾಡಿ ಜೋಳ ಬೆಳೆಯುವ ರೈತರು ಪಸಲು ರಕ್ಷಣೆಗಾಗಿ ಜಮೀನಿನ ಬೇಲಿಗೆ ನೇರವಾಗಿ ವಿದ್ಯುತ್ ಅಕ್ರಮ ಸಂಪರ್ಕ ನೀಡುವುದು ಇಂತಹ ಅನಾಹುತಕ್ಕೆ ಕಾರಣ ಇದು ಮರುಕಳಿಸದಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು.

#ಇದು_ಯಾರ_ತಪ್ಪು? #ಶಿವಮೊಗ್ಗ_ಸಮೀಪದಲ್ಲಿ_ಎರೆಡು_ಕಾಡಾನೆ_ಜೋಳದ_ಬೆಳೆಗೆ_ರೈತ #ಬೇಲಿಗೆ_ಹರಿಸಿದ_ವಿದ್ಯುತ್_ಸ್ಪರ್ಷಿಸಿ_ಸಾವು. #ಬೇಲಿಗೆ_ವಿದ್ಯುತ್_ನೇರ_ಸಂಪರ್ಕ_ಮಾಡುವ_ಬುದ್ದಿಗೇಡಿಗಳು. #ಸ್ಥಳಿಯವಾಗಿ_ಇಂತಹ_ಅಕ್ರಮ_ತಡೆಯ_ಬೇಕು.   ಅಭಯಾರಣ್ಯದ ಅಂಚಿನಲ್ಲಿ ಕಬ್ಬು, ಬಾಳೆ ಮತ್ತು ಜೋಳ ಬೆಳೆದರೆ ಕಾಡು ಪ್ರಾಣಿಗಳು ಅದನ್ನು ತಿನ್ನುವ ಆಸೆಗೆ ಜಮೀನಿಗೆ ನುಗ್ಗಿ ಪಸಲು ನಷ್ಟ ಮಾಡುತ್ತದೆ ಅದನ್ನು ತಪ್ಪಿಸಲು ಮಲೆನಾಡಿನ ರೈತರು ತುಂಬಾ ಕಷ್ಟ ಪಡುತ್ತಾರೆ ಆದರೆ ಈಗ ಕೆಲವರು ಪಸಲಿನ ಭೂಮಿಯ ಸುತ್ತಲೂ ತಂತಿ ಎಳೆದು ನೇರವಾಗಿ ವಿದ್ಯುತ್ ಕಂಬದಿಂದ ಕರೆಂಟು ಕೊಡುವ ಅಯೋಗ್ಯ ಕೆಲಸ ಮಾಡುತ್ತಾರೆ.   ರಾತ್ರಿ 11 ರ ನಂತರ ಈ ರೀತಿ ಅಕ್ರಮ ಸಂಪರ್ಕ ನೀಡಿ ಸೂಯೋ೯ದಯಕ್ಕೆ ಮೊದಲೇ ಸಂಪರ್ಕ ತೆಗೆಯುತ್ತಾರೆ, ರಾತ್ರಿ ಪಸಲು ತಿನ್ನಲು ಬರುವ ಹಂದಿ, ಜಿಂಕೆ ವಿದ್ಯುತ್ ನಿಂದ ಸತ್ತರೆ ಇವರಿಗೆ ಹೆಚ್ಚು ಲಾಭ ಕೆಲವೊಮ್ಮೆ ಮನುಷ್ಯರೂ ಇಂತಹ ವಿದ್ಯುತ್ ಹರಿಸಿದ ಬೇಲಿಗೆ ಬಲಿಯಾಗಿದ್ದಾರೆ.    ಆದರೂ ದುರಾಸೆಯ ಕೆಲ ರೈತರು (ಇವರನ್ನು ರೈತರೆನ್ನ ಬಾರದು) ಇದನ್ನು ಮುಂದುವರಿಸಿದ್ದಾರೆ ಅಕ್ಕ ಪಕ್ಕದವರು ಮಾಹಿತಿ ನೀಡಿದರೆ ಅವರ ಹೆಸರನ್ನು ಗುಪ್ತವಾಗಿಡದೆ ಬಹಿರಂಗ ಮಾಡುವ ಇಲಾಖಾ ಸಿಬ್ಬಂದಿಗಳಿಂದ ರೋಸಿ ಹೋಗಿರುವ ಅನೇಕರು ಮಾಹಿತಿ ನೀಡದೆ ಉಳಿಯುತ್ತಾರೆ.   ಈ ಎರೆಡು ಹತ್ತು ವರ್ಷ ಪ್ರಾಯದ ಗಂಡು ಕಾಡಾನೆ...