https://youtu.be/vCsLsR_tzSc?feature=shared #ಸಂದರ್ಶನ_ಭಾಗ_2 #ಪದ್ಮಪ್ರಶಸ್ತಿ_ಪುರಸ್ಕಾರ_ನೀಡುವ_ರಾಷ್ಟ್ರಪತಿ_ಅವರಿಗೇ_ದೃಷ್ಟಿ_ನಿವಾಳಿಸಿದ #ಮಂಜಮ್ಮ_ಜೋಗತಿ #ಹೀಗೇಕೆ_ಮಾಡಿದಿರಿ_ಎಂಬ_ಪ್ರಶ್ನೆಗೆ_ಅವರ_ಉತ್ತರ ಕನ್ನಡತಿ ಮಂಜಮ್ಮ ಜೋಗತಿ ಅವರಿಗೆ ಪದ್ಮಶ್ರಿ ಪ್ರಶಸ್ತಿ ಘೋಷಣೆ ಆಗಿದ್ದು ಒಂದು ರೀತಿಯ ವೈರಲ್ ಸುದ್ದಿ ಆದರೆ ಪದ್ಮಶ್ರೀ ಪ್ರಶಸ್ತಿ ರಾಷ್ಟ್ರಪತಿ ರಾಮನಾಥ ಕೋವಿಂದರಿಂದ ಸ್ವೀಕರಿಸುವಾಗ ಮಂಜಮ್ಮ ಜೋಗತಿ ಅವರ ದೃಷ್ಟಿ ನಿವಾಳಿಸಿದ್ದು ಮತ್ತೊಂದು ವೈರಲ್ ಸುದ್ದಿ ಆಗಿತ್ತು. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ youtube ನಲ್ಲಿ ಆ ಘಟನೆಯ ದೃಶ್ಯ ವೀಕ್ಷಿಸಿ https://youtube.com/shorts/-kv6mGBeBkY?feature=shared. ವೇದಿಕೆಗೆ ಕರೆದಾಗ ಗಂಭೀರವಾಗಿ ನಡೆದು ಬಂದು ವೇದಿಕೆ ಮೆಟ್ಟಲಿಗೆ ನಮಸ್ಕರಿಸಿ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲು ತಯಾರಾಗಿದ್ದ ರಾಷ್ಟ್ರಪತಿಗಳಿಗೆ ಸೆರಗಿನಿಂದ ದೃಷ್ಟಿ ನಿವಾಳಿಸಿ ತಮ್ಮ ಎರೆಡು ಕೈ ಬೆರಳುಗಳನ್ನು ನೆಲಕ್ಕೆ ಒತ್ತಿ ನೆಟಿಗೆ ತೆಗೆದರು ... ನೆರೆದ ಸಭಿಕರಿಂದ ಚಪ್ಪಾಳೆ ಸುರಿಮಳೆ ಆಯಿತು,ಆಗ ರಾಷ್ಟ್ರಪತಿಗಳು ಸ್ವಲ್ಪ ಗೊಂದಲದಿಂದ ಒಂದು ಹೆಜ್ಜೆ ಹಿಂದೆ ಇಟ್ಟರು.... ನಂತರ ಅವರು ಮಂಜಮ್ಮ ಜೋಗತಿ ಅವರಲ್ಲಿ ಏನೋ ಕೇಳಿ ಉತ್ತರ ಪಡೆದು ಹಸನ್ಮುಖರಾಗಿ ಜೋಗತಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ ಮಾಡಿದರು. ...