Skip to main content

4094.ಅಡಿಕೆ_ಗುಟ್ಕಾ_ತಪ್ಪು_ಗ್ರಹಿಕೆ_ಪ್ರಚಾರಇದರಿಂದ_ಅಡಿಕೆ_ಬೆಳೆಗಾರ_ಬಲಿಪಶು


ಅಡಿಕೆ_ಗುಟ್ಕಾ_ತಪ್ಪು_ಗ್ರಹಿಕೆ_ಪ್ರಚಾರ
ಇದರಿಂದ_ಅಡಿಕೆ_ಬೆಳೆಗಾರ_ಬಲಿಪಶು.

 ವಿಶ್ವ ಆರೋಗ್ಯ ಸಂಸ್ಥೆ (WHO) ಅಥವಾ ಅದರ ಅಂಗಸಂಸ್ಥೆಯಾದ IARC (International Agency for Research on Cancer) ಅಡಿಕೆಯನ್ನು ಕ್ಯಾನ್ಸರ್‌ಕಾರಕ (Carcinogenic) ಪಟ್ಟಿಯಲ್ಲಿ ಸೇರಿಸಿದೆ.

  2003ರಲ್ಲಿ IARC ಅಡಿಕೆಯನ್ನು ತಂಬಾಕು ಸೇರಿಸದಿದ್ದರೂ ಸಹ ಮಾನವರಲ್ಲಿ ಬಾಯಿಯ ಕ್ಯಾನ್ಸರ್ ಉಂಟುಮಾಡುವ 'ಗ್ರೂಪ್ 1 ಕ್ಯಾನ್ಸರ್‌ಕಾರಕ' (Group 1 Carcinogen) ಎಂದು ವರ್ಗೀಕರಿಸಿದೆ ಇದು ಅಡಿಕೆ ಬೆಳೆಗಾರರಿಗೆ ಆತಂಕದ ಸಂಗತಿ.

  ಭಾರತದ ಎಲ್ಲಾ 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿಯೂ  ಗುಟ್ಕಾ ಮತ್ತು ತಂಬಾಕು/ನಿಕೋಟಿನ್ ಬೆರೆಸಿದ ಪಾನ್ ಮಸಾಲಾದ ಉತ್ಪಾದನೆ, ಶೇಖರಣೆ, ಮಾರಾಟ ಮತ್ತು ವಿತರಣೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

  ಕೇಂದ್ರ ಸರ್ಕಾರದ ಆಹಾರ ಭದ್ರತೆ ಮತ್ತು ಗುಣಮಟ್ಟ ಕಾಯ್ದೆ (FSSAI - Food Safety and Standards Act, 2006) ನಿಯಮಾವಳಿಗಳ ಪ್ರಕಾರ, ಯಾವುದೇ ಆಹಾರ ಪದಾರ್ಥಗಳಲ್ಲಿ 'ತಂಬಾಕು ಅಥವಾ ನಿಕೋಟಿನ್' ಅನ್ನು ವಸ್ತುವಾಗಿ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.  

​ ಭಾರತದಲ್ಲೇ ಮೊದಲ ಬಾರಿಗೆ 2012ರಲ್ಲಿ ಮಧ್ಯಪ್ರದೇಶ ರಾಜ್ಯವು ಗುಟ್ಕಾವನ್ನು ಸಂಪೂರ್ಣವಾಗಿ ನಿಷೇಧಿಸಿತು ತದನಂತರ ಎಲ್ಲಾ ರಾಜ್ಯಗಳು ಒಂದೊಂದಾಗಿ ಈ ನಿಷೇಧವನ್ನು ಜಾರಿಗೆ ತಂದವು.  

  ​ವಾರ್ಷಿಕ ನವೀಕರಣ (Notification Extension): FSSAI ಕಾಯ್ದೆಯಡಿ ರಾಜ್ಯ ಆಹಾರ ಸುರಕ್ಷತಾ ಆಯುಕ್ತರು (Food Safety Commissioners) ಪ್ರತಿ ವರ್ಷ ಈ ನಿಷೇಧದ ಅಧಿಸೂಚನೆಯನ್ನು ನಿಯಮಿತವಾಗಿ ನವೀಕರಿಸುತ್ತಾರೆ (ಉದಾಹರಣೆಗೆ, ಕರ್ನಾಟಕದಲ್ಲೂ ಸಹ ಪ್ರತಿ ವರ್ಷ ಈ ನಿಷೇಧವನ್ನು ನವೀಕರಿಸಿ ಜಾರಿಯಲ್ಲಿಡಲಾಗುತ್ತದೆ).  

   ​ನಿಷೇಧಕ್ಕೊಳಗಾದದ್ದು: ಅಡಿಕೆಯೊಂದಿಗೆ ತಂಬಾಕು/ನಿಕೋಟಿನ್ ಬೆರೆಸಿದ ಗುಟ್ಕಾ ಹಾಗೂ ಪಾನ್ ಮಸಾಲಾ.
  
  ​ನಿಷೇಧವಿಲ್ಲದ್ದು: ಸಾಮಾನ್ಯ/ಶುದ್ಧ ಅಡಿಕೆ ಮಾರಾಟ ಹಾಗೂ ತಂಬಾಕಿಲ್ಲದ ಸಾಂಪ್ರದಾಯಿಕ ವಿಳ್ಯದೆಲೆ/ಅಡಿಕೆಗೆ ಯಾವುದೇ ನಿಷೇಧವಿಲ್ಲ.

   ಆದರೆ ಅಡಿಕೆ ಸೇವನೆ ಒಳ್ಳೆಯದು ಇದು ಶತಮಾನಗಳಿಂದ ಭಾರತೀಯರು ಬಳಸುತ್ತಾ ಬಂದಿದ್ದಾರೆ, ದೇವತಾ ಕಾರ್ಯಕ್ರಮಗಳಲ್ಲಿ ಪೂಜ್ಯ ಸ್ಥಾನ ನೀಡಿದ್ದೇವೆ ಈಗೇಕೆ ಹೀಗೆ... ನಾವು ನಂಬುವುದಿಲ್ಲ ಎಂದು ಬೆಳೆಗಾರರು ವಾದ ಮಾಡುತ್ತಾರೆ.

   ಭಾರತೀಯ ಟಾಟ ರೀಸರ್ಚ್ ಸಂಸ್ಥೆ ಸಂಶೋಧನೆಯಲ್ಲಿ ಕೂಡ ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಇದೆ ಅಂತ ವರದಿ ನೀಡಿದೆ.

   ಇದರ ಬಗ್ಗೆ ಅಡಿಕೆ ಬೆಳೆಗಾರರಿಗೆ ಸರಿಯಾದ ಮಾಹಿತಿ ನೀಡಿ, ವಿಶ್ವ ಆರೋಗ್ಯ ಸಂಸ್ಥೆಗೆ ಅಡಿಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂಬ ಕ್ಲಿನಿಕಲ್ ಟ್ರಯಲ್ ಅನ್ನು ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದಿತ ಲ್ಯಾಬ್ ಮೂಲಕ ಮಾಡಿಸಿ ವರದಿ ನೀಡಿ ಈ ಹಿಂದಿನ ವಿಶ್ವ ಆರೋಗ್ಯ ಸಂಸ್ಥೆಯ ಅಡಿಕೆ ಕ್ಯಾನ್ಸರಸ್ ಎಂಬ ಆದೇಶ ವಾಪಾಸು ಪಡೆಯುವ ಕೆಲಸ ಆಗಲೇ ಪ್ರಾರಂಭ ಆಗ ಬೇಕಾಗಿತ್ತು.

   ಭಾರತೀಯ ಅಡಿಕೆ ಬಗ್ಗೆ ಕ್ಲಿನಿಕಲ್ ಟ್ರಯಲ್ ನಡೆಸಲು ಹತ್ತಾರು ಕೋಟಿ ಹಣ ಮತ್ತು ಹತ್ತು ವರ್ಷಗಳ ಕಾಲಾವದಿ ಬೇಕು.

  ಕೇಂದ್ರ ಸರ್ಕಾರದಿಂದ ಮತ್ತು ದೇಶದ ಸುಪ್ರಿಂ ಕೋರ್ಟ್ ಆದೇಶದಿಂದ ವಿಶ್ವ ಆರೋಗ್ಯ ಸಂಸ್ಥೆಯ ಆದೇಶ ಹಿಂಪಡೆಯುವಂತೆ ಮಾಡುತ್ತೇವೆ ಎಂಬ ರಾಜಕೀಯ ಪಕ್ಷಗಳು ಮತ್ತು ಜನ ಪ್ರತಿನಿದಿಗಳ ಅಶ್ವಾಸನೆಗಳು, ಸಮಾವೇಶಗಳನ್ನ ನಡೆಸುತ್ತಾ ಇದ್ದಾರೆ.

   ವಿಶ್ವ ಆರೋಗ್ಯ ಸಂಸ್ಥೆ ಭಾರತ ಸರ್ಕಾರ ಅಥವ ಭಾರತದ ಸುಪ್ರಿಂ ಕೋರ್ಟ್ ಆದೇಶ ಯಾವ ಕಾರಣಕ್ಕೂ ಒಪ್ಪಲು ಸಾಧ್ಯವೇ ಇಲ್ಲ ಅದೇನಿದ್ದರು ಅದರ ವ್ಯಾಪ್ತಿಯ ಲ್ಯಾಬ್ ಗಳಲ್ಲಿ ವೈಜ್ಞಾನಿಕವಾಗಿ ಅಧ್ಯಯನ ಮಾಡಿದ ಕ್ಲಿನಿಕಲ್ ಟ್ರಯಲ್ ಮೂಲಕ ಅಡಿಕೆ ಹಾನಿಕಾರಕ ಅಲ್ಲ ಎಂಬ ಸಂಶೋದನ ವರದಿ ಮಾತ್ರ ಮಾನ್ಯ ಮಾಡಬಹುದು.

  ವಿಶ್ವ ಆರೋಗ್ಯ ಸಂಸ್ಥೆ ಅಡಿಕೆ ಬಗ್ಗೆ ಈ ಘೋಷಣೆ ಮಾಡಿದ ತಕ್ಷಣ ಭಾರತೀಯ ಸರ್ಕಾರಗಳು, ಅಡಿಕೆ ಬೆಳೆಗಾರರ ಹಿತ ಕಾಪಾಡುವ ಸಂಘಟನೆಗಳು ಈ ಬಗ್ಗೆ ಸಕಾರಾತ್ಮಕವಾಗಿ ಪರಿಹಾರಕ್ಕೆ ಪ್ರಯತ್ನ ಮಾಡಿದ್ದರೆ ಇಷ್ಟರೊಳಗೆ ವಿಶ್ವ ಸಂಸ್ಥೆಯ ಆದೇಶ ಮಾರ್ಪಾಡು ಆಗುತ್ತಿತ್ತೇನೋ .

  ಆದರೆ ಅಡಿಕೆ ಬೆಳೆಗಾರರು ಗೋಲ್ಡನ್ ಅವರ್ ನಲ್ಲಿ ಈ ಪ್ರಯತ್ನ ಮಾಡದೆ  ಅಶ್ವಾಸನೆಗಳಲ್ಲೇ ಕಾಲ ಕಳೆದುಕೊಂಡಿದ್ದಾರೆ.

  ವಿಶ್ವ ಆರೋಗ್ಯ ಸಂಸ್ಥೆಯ ಘೋಷಣೆ ಎಲ್ಲಾ ದೇಶಗಳು ಪಾಲಿಸಲೇ ಬೇಕು,ಈಗಾಗಲೇ ಅಡಿಕೆ ಉತ್ಪನ್ನಗಳ ಪ್ಯಾಕ್ ಮೇಲೆ  #ಅಡಿಕೆ_ಆರೋಗ್ಯಕ್ಕೆ_ಹಾನಿಕಾರ ಎಂದು ಮುದ್ರಿಸುತ್ತಿದ್ದಾರೆ.

   ಪ್ರತಿಷ್ಟಿತ ಕ್ಯಾಂಪ್ಕೋ ಸಂಸ್ಥೆಯ ಅಡಿಕೆ ಉತ್ಪನ್ನಗಳ ಪ್ಯಾಕ್ ಮೇಲೆ ಕೂಡ ಇದನ್ನು ಮುದ್ರಿಸಲು ಪ್ರಾರಂಬಿಸಿದ್ದಾರೆ.

   ವಿಶ್ವ ಆರೋಗ್ಯ ಸಂಸ್ಥೆಯ ಆದೇಶ ಪಾಲನೆ ತಕ್ಷಣ ಆಗದಿದ್ದರೂ ಆಯಾ ದೇಶಗಳಲ್ಲಿ ಹಂತ ಹಂತವಾಗಿ ಜಾರಿ ಆಗಲಿದೆ.

  ಸರ್ಕಾರ ಸಹಾಯ ಧನ ನಿಲ್ಲಿಸುತ್ತದೆ, ರಪ್ತು ನಿಷೇದ, ಹೆಚ್ಚಿನ ತೆರಿಗೆ ಹೀಗೆ ಅನೇಕ ಸ್ಯಾಂಕ್ಷನ್ ಗಳಿಂದ ಅಡಿಕೆ ಬೆಳೆಗಾರರಿಗೆ ಅನಾನುಕೂಲವೇ ಆಗಲಿದೆ.

  ಆದರೂ ಸರ್ಕಾರಗಳು,ಜನ ಪ್ರತಿನಿಧಿಗಳು, ಅಡಿಕೆ ಬೆಳೆಗಾರರ ಸಂಘಗಳು ಅಡಿಕೆ ಬೆಳೆಗಾರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ ಹಾಗಂತ ಅಡಿಕೆ ಬೆಳೆಗಾರರೂ ಎಚ್ಚೆತ್ತುಕೊಂಡಿಲ್ಲ.

  ನಿನ್ನೆ ಮೊನ್ನೆಯಿಂದ ಕರ್ನಾಟಕ ಸರ್ಕಾರ ಗುಟ್ಕಾ ನಿಷೇದವನ್ನ ಒಂದು ವರ್ಷಕ್ಕೆ ನವೀಕರಿಸಿದ ಸುದ್ದಿ ಬಾರೀ ಸದ್ದು ಮಾಡುತ್ತಿದೆ.
 
 ಇದು ಪ್ರತಿ ವರ್ಷ ನಡೆಯುವ ನವೀಕರಣ ಆದರೆ ಕರ್ನಾಟಕ ರಾಜ್ಯ ಗುಟ್ಕಾ ರದ್ದು ಆದೇಶ 2013 ರಲ್ಲೇ ಮಾಡಿದೆ.

   ಅದನ್ನು ಪ್ರತಿ ವರ್ಷ ಸರ್ಕಾರ ನವೀಕರಣ ಮಾಡುತ್ತಾ ಬರುತ್ತಾರೆ ಕಾರಣ ಆಹಾರ ಸಂರಕ್ಷಣ ಇಲಾಖೆಗೆ ವರ್ಷಕ್ಕಿಂತ ಜಾಸ್ತಿ ನಿಷೇದ ಮಾಡಲು ಸಾಧ್ಯವಿಲ್ಲ.

    ಈ ನವೀಕರಣ ಪ್ರತಿ ವರ್ಷ 2013 ರಿಂದ  ಸರ್ಕಾರ ನಡೆಸುತ್ತಿದೆ ಆದರೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಗುಟ್ಕಾ ನಿಷೇಧ ಎಂಬಂತೆ ಸುದ್ದಿ ಮಾಧ್ಯಮದ ಸುದ್ದಿ ಆಗುತ್ತಿದೆ.

  ಅದರ ಜೊತೆ ರಾಜಕಾರಣಿಗಳು ಸರಿಯಾದ ಮಾಹಿತಿ ತಿಳುವಳಿಕೆ ಇಲ್ಲದೆ ಗುಟ್ಕಾ ರದ್ದು ಮಾಡಬಾರದು ಇದರಿಂದ ಅಡಿಕೆ ಬೆಳೆಗಾರರಿಗೆ ನಷ್ಟ ಎಂಬ ಹೇಳಿಕೆ ನೀಡುತ್ತಿರುವುದು ತಮಾಷೆ ಅನ್ನಿಸಿದೆ, ಇಂತವರೇ ರಾಜ್ಯದ ಅಡಿಕೆ ಬೆಳೆಗಾರರ ಹಿತ ಕಾಪಾಡುವ ಮುಂಚೂಣಿ ನಾಯಕರಾಗಿದ್ದಾರೆ.

#arecanut #cancerious #who #iarc #cologian #clinicaltrail #campco

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...