ಶಿವಮೊಗ್ಗದ_ಹಿರೇಹಾಳ್_ಇಬ್ರಾಹಿಂ_ಸಾಹೇಬರು.
ಕನ್ನಡ_ಸಾಹಿತ್ಯ_ಲೋಕದ_ಮಹಾನ್_ಪೋಷಕರು
ಇವರು ಇಸ್ಲಾಂನ ಪ್ರವಚನ ಕನ್ನಡಕ್ಕೆ ಅನುವಾದಿಸಿದವರು ಮತ್ತು ಶಿವಮೊಗ್ಗದ ಪ್ರತಿಷ್ಟಿತ ಕರ್ನಾಟಕ ಸಂಘದ ಉಪಾಧ್ಯಕ್ಷರಾಗಿದ್ದವರರು.
#ಹಿರೇಹಾಳ_ಇಬ್ರಾಹಿಂ ಸಾಹೇಬರಿಗೆ ಮರಣೋತ್ತರ ಡಾಕ್ಟರೇಟ್ ಪದವಿ ವಿಜಯನಗರದ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ 13 ಜುಲೈ 2023 ರಂದು ತನ್ನ 11ನೇ ಘಟಿಕೋತ್ಸವದಲ್ಲಿ ನೀಡಿತು.
ಆದರೆ ಹಿರೇಹಾಳ ಇಬ್ರಾಹಿಂ ಸಾಹೇಬರ ಕರ್ಮಭೂಮಿ ಶಿವಮೊಗ್ಗ ಜಿಲ್ಲೆಯಲ್ಲಿ ಅವರ ಸ್ಮರಿಸುವ ಕಾರ್ಯಕ್ರಮಗಳು ನಡೆಯಲೇ ಇಲ್ಲ.
ಹಿರೇಹಾಳ ಇಬ್ರಾಹಿಂ ಸಾಹೇಬರ ಬಗ್ಗೆ ಕನ್ನಡ ಸಾಹಿತ್ಯ ಲೋಕದಲ್ಲಿನ ಎಲ್ಲಾ ಹಿರಿಯ ಸಾಹಿತಿಗಳಲ್ಲಿ ಅತ್ಯಂತ ಗೌರವಾಭಿಮಾನ ಕಾರಣ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಪೋಷಕ ಸ್ಥಾನ.
ನಾಡಿನ ಸಾಹಿತಿಗಳಿಗೆ ಶಿವಮೊಗ್ಗಕ್ಕೇ ಆಹ್ವಾನಿಸಿ ಆಧರಿಸಿ ಗೌರವಿಸುತ್ತಿದ್ದ ರೀತಿ ಹಿರೇಹಾಳ ಇಬ್ರಾಹಿಂ ಸಾಹೇಬರ ಬಿಟ್ಟರೆ ಇನ್ನೊಬ್ಬರಿಲ್ಲ.
ಆ ಕಾಲದಲ್ಲಿ ಖ್ಯಾತ ರಂಗಕರ್ಮಿ ಬಿ.ವಿ.ಕಾರಂತರ #ಹಯವದನ ನಾಟಕ ಪ್ರದರ್ಶನದ ಪ್ರಾಯೋಜಕತ್ವ ಮಾಡುವ ದೈರ್ಯ ಮಾಡಿದ್ದು ಹಿರೇಹಾಳ ಇಬ್ರಾಹಿಂ ಸಾಹೇಬರು, ನಂತರ ಹಯವದನ ನಾಟಕ ಯಶಸ್ವಿಯಾಗಿ ನಡೆಯಿತು.
ಇಬ್ರಾಹಿಂ ಸಾಹೇಬರು ಶಿವಮೊಗ್ಗದ ಪ್ರತಿಷ್ಟಿತ ಕರ್ನಾಟಕ ಸಂಘದ ಉಪಾಧ್ಯಕ್ಷರಾಗಿದ್ದರು, ರಾಜ್ಯ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿದ್ದರು, 49ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ನೇತೃತ್ವ ವಹಿಸಿದ್ದರು.
ಶಿವಮೊಗ್ಗದಲ್ಲಿ ಮುಸ್ಲಿಂ ಸಾಹಿತಿಗಳ ಸಮ್ಮೇಳನ ಲಂಕೇಶರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಇಬ್ರಾಹಿಂ ಸಾಹೇಬರು ನಡೆಸಿದ್ದರು.
ಇದು ಮುಸ್ಲಿಂ ಸಾಹಿತಿಗಳನ್ನು ಕನ್ನಡ ಸಾಹಿತ್ಯ ಲೋಕದ ಮುಖ್ಯ ವಾಹಿನಿಗೆ ತರುವ ಪ್ರಯತ್ನ ಅವರದ್ದಾಗಿತ್ತು.
ಇಂತಹ ಪ್ರಯತ್ನ ಅದೇ ಮೊದಲ ಮತ್ತು ಕೊನೆಯ ಮುಸ್ಲಿಂ ಕನ್ನಡ ಸಾಹಿತಿಗಳ ಸಮ್ಮೇಳನ ಆಯಿತು.
ಶಿವಮೊಗ್ಗದಲ್ಲಿ ಕೋಟೆ ಪೋಲಿಸ್ ಠಾಣೆ ದಾಟಿ ಮುಂದೆ ಹೋದರೆ ಬಲ ಭಾಗದ ವಿಶಾಲವಾದ ಬಂಗ್ಲೆ ಹಿರೇಹಾಳ ಇಬ್ರಾಹಿಂ ಸಾಹೇಬರದ್ದು , ನಾನು ಅನೇಕ ಬಾರಿ ನಮ್ಮ ಊರಿನ ಸಮೀಪದ ಮುಂಬಾಳಿನ ಗೋಕುಲ್ ಪಾರಂನ ಡಾ. ಪಾದರ್ ಜೋಸೆಪ್ ಜೊತೆ ಅವರ ಬೇಟಿಗೆ ಹೋಗಿದ್ದೆ.
ಕಾರಣ ಪಾದರ್ ಜೋಸೆಪ್ ಮರಗೆಣಸು (ಟ್ಯಾಪಿಯೋಕ ) ಬೆಳೆವ ರೈತರ ಸಹಕಾರಿ ಸಂಘ ರಚಿಸಲು ಆ ದಿನಗಳಲ್ಲಿ ಯೋಚಿಸುತ್ತಿದ್ದರು ಆಗ ಮರಗೆಣಸಿನಿಂದ ಸ್ಪಿರಿಟ್ ಉತ್ಪಾದಿಸುವ ಲೈಸೆನ್ಸ್ ಹಿರೇಹಾಳು ಇಬ್ರಾಹಿಂ ಸಾಹೇಬರು ಹೊಂದಿದ್ದರು ಆ ಕಾರಣದಿಂದ ಅವರ ಜೊತೆ ಕೆಲ ಸುತ್ತಿನ ಮಾತುಕತೆಗೆ ಹೋಗಿದ್ದೆ.
ನೀವೂ ಅವರನ್ನ ನೋಡಿದ್ದೀರಾ? ನಿಮ್ಮ ಅಭಿಪ್ರಾಯ ಬರೆಯಿರಿ.
#shivamogga #hirehalibrahim #lankesh #hayavadana #bvkaranth
#karnatakasanga
Comments
Post a Comment