Skip to main content

4147.ಬ್ರಾಹ್ಮೀ_ಮಹೂರ್ತ_ವಿವಿದ_ಧರ್ಮಗಳ_ಆಚರಣೆಯಲ್ಲಿ


ಬ್ರಾಹ್ಮೀ_ಮಹೂರ್ತ_ವಿವಿದ_ಧರ್ಮಗಳ_ಆಚರಣೆಯಲ್ಲಿ.

  #ಹಿಂದೂ ಧರ್ಮದಲ್ಲಿ ಬ್ರಾಹ್ಮೀ ಮುಹೂರ್ತಸೂರ್ಯೋದಯಕ್ಕೆ 96 ನಿಮಿಷ ಮುನ್ನ.

  #ಸಿಖ್ ಧರ್ಮದಲ್ಲಿ ಅಮೃತ್ ವೇಳಾ ಮುಂಜಾನೆ 3 – 6 ನಾಮ ಜಪ, ಪವಿತ್ರ ಗ್ರಂಥ ಪಠಣ.

#ಇಸ್ಲಾಂ ಧರ್ಮದಲ್ಲಿ ತಹಜ್ಜುದ್ / ಫಜ್ರ್ರಾತ್ರಿಯ ಕೊನೆಯ ಭಾಗ / ಮುಂಜಾನೆ ಏಕಾಂತದ ಪ್ರಾರ್ಥನೆ -ನಮಾಜ್.

 #ಕ್ರಿಶ್ಚಿಯನ್ ಧರ್ಮದಲ್ಲಿ  ಮು0ಜಾನೆ 4 -5.30
ಏಕಾಂತ ಪ್ರಾರ್ಥನೆ, ಕೀರ್ತನೆಗಳ ಪಠಣ.

#ಬೌದ್ಧ ಧರ್ಮದಲ್ಲಿ ಮುಂಜಾನೆಯ ಝೆನ್ ಧ್ಯಾನಮುಂಜಾನೆ 4– 5 ಚಿತ್ತಶುದ್ಧಿ, ವಿಪಸ್ಸನಾ ಸಾಧನೆ.

#ಜೈನ ಧರ್ಮದಲ್ಲಿ ಮುಂಜಾನೆ ಣ ಮೋಕಾರ ಪಠಣ ಪ್ರಾರಂಬಿಸುತ್ತಾರೆ.

  ಹೆಸರು ಮತ್ತು ವಿದಿ ವಿದಾನಗಳು ಬೇರೆಯಾಗಿದ್ದರೂ ಸೂಯೊ೯ದಯಕ್ಕೆ ಮುನ್ನ ವಾತಾವರಣದಲ್ಲಿರುವ ಪ್ರಶಾಂತತೆ, ಪರಿಶುದ್ಧತೆ ಮತ್ತು ಸಾತ್ವಿಕ ಶಕ್ತಿಯನ್ನು ಆಧ್ಯಾತ್ಮಿಕ ಉನ್ನತಿಗಾಗಿ ಬಳಸಿಕೊಳ್ಳಬೇಕೆಂಬುದು ವಿಶ್ವದ ಬಹುತೇಕ ಎಲ್ಲಾ ಧರ್ಮಗಳ ಸಮಾನ ಸಿದ್ಧಾಂತವಾಗಿದೆ.

#ಸಿಖ್_ಧರ್ಮದಲ್ಲಿ. ಸೂರ್ಯೋದಯಕ್ಕೂ ಮುನ್ನ ಮಾಡುವ ಪ್ರಾರ್ಥನೆ ಮತ್ತು ಧ್ಯಾನವನ್ನು ಅಮೃತ ವೇಳೆಯ ನಿತ್‌ನೇಮ್ ಎಂದು ಕರೆಯಲಾಗುತ್ತದೆ.

​ಅಮೃತ ವೇಳೆ ಸೂರ್ಯೋದಯಕ್ಕೂ ಮುನ್ನ ಸುಮಾರು 3:00 ರಿಂದ 6:00 ಗಂಟೆಯವರೆಗಿನ (ಬ್ರಾಹ್ಮೀ ಮುಹೂರ್ತ) ಸಮಯವನ್ನು 'ಅಮೃತ ವೇಳೆ' ಎನ್ನುತ್ತಾರೆ.

  ​ನಾಮ ಸಿಮ್ರನ್ ಮುಂಜಾನೆ ಎದ್ದು ಸ್ನಾನದ ನಂತರ ಭಗವಂತನ ಹೆಸರನ್ನು (ವಾಹೇಗುರು ) ಧ್ಯಾನಿಸುವುದು.

​ನಿತ್‌ನೇಮ್ ಬಾನಿಗಳು ಅಮೃತ ವೇಳೆಯಲ್ಲಿ ಪಠಿಸುವ ಪ್ರಮುಖ ಪ್ರಾರ್ಥನೆಗಳು ​ಜಪ್‌ಜೀ ಸಾಹಿಬ್ ಗುರು ನಾನಕ್ ದೇವ್ ರಚಿಸಿದ ಅತ್ಯಂತ ಪ್ರಮುಖ ಮುಂಜಾನೆಯ ಪ್ರಾರ್ಥನೆ.

​ ಗುರು ಗೋವಿಂದ್ ಸಿಂಗ್ ರಚಿಸಿದ ಜಾಪ್ ಸಾಹಿಬ್,
​ತವ್-ಪ್ರಸಾದ್ ಸವೈಯೇ,
​ಚೌಪೈ ಸಾಹಿಬ್,​ಆನಂದ್ ಸಾಹಿಬ್ ​ಈ ಪ್ರಾರ್ಥನೆಗಳ ನಂತರ ಸಿಖ್ ಸಂಪ್ರದಾಯದಂತೆ ಅರ್ದಾಸ್  ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ.

#ಬೌದ್ಧ_ಧರ್ಮದಲ್ಲಿ.
 ಬೌದ್ಧ ಧರ್ಮದಲ್ಲಿ ಸೂರ್ಯೋದಯಕ್ಕೂ ಮುನ್ನ ಮಾಡುವ ಮುಂಜಾನೆಯ ಪ್ರಾರ್ಥನೆ ಮತ್ತು ಸಾಧನೆಯನ್ನು ಸಾಮಾನ್ಯವಾಗಿ ಮಾರ್ನಿಂಗ್ ಚಾಂಟಿಂಗ್  ಹಾಗೂ ವಿಪಸ್ಸನಾ ಧ್ಯಾನ ಎಂದು ಕರೆಯಲಾಗುತ್ತದೆ.

​ಬುದ್ಧಂ ಶರಣಂ ಗಚ್ಛಾಮಿ
​ಧಮ್ಮಂ ಶರಣಂ ಗಚ್ಛಾಮಿ
​ಸಂಘಂ ಶರಣಂ ಗಚ್ಛಾಮಿ
​ಪರಿತ್ತ / ಮಂತ್ರ ಪಠಣ, ಮುಂಜಾನೆಯ ವೇಳೆ ರಕ್ಷಣೆ ಮತ್ತು ಮಂಗಳಕ್ಕಾಗಿ ಮಹಾಮಂಗಳ ಸೂಕ್ತ, ರತ್ನ ಸೂಕ್ತ ಹಾಗೂ ಕರಣೀಯ ಮೆತ್ತ ಸೂಕ್ತಗಳನ್ನು ಪಠಿಸಲಾಗುತ್ತದೆ.

  ​ಸಕಲ ಜೀವರಾಶಿಗಳಿಗೂ ಒಳಿತಾಗಲಿ ಮತ್ತು ಶಾಂತಿ ಸಿಗಲಿ ಎಂದು ಹಾರೈಸುವ 'ಮೈತ್ರಿ ಧ್ಯಾನ',​ಝೆನ್ ಬೌದ್ಧ ಆಶ್ರಮಗಳಲ್ಲಿ ಸೂರ್ಯೋದಯಕ್ಕೂ ಮುನ್ನ ಮುಂಜಾನೆ 4:00 ರಿಂದ 5:00 ಗಂಟೆಯ ಅವಧಿಯಲ್ಲಿ ಮಾಡುವ ಕುಳಿತ ಧ್ಯಾನವನ್ನು ಝಾಝೆನ್  ಎನ್ನುತ್ತಾರೆ.

#ಜೈನ_ಧರ್ಮದಲ್ಲಿ.
  ಜೈನ ಧರ್ಮದಲ್ಲಿ ಸೂರ್ಯೋದಯಕ್ಕೂ ಮುನ್ನ ಮಾಡುವ ಮುಂಜಾನೆಯ ಪ್ರಾರ್ಥನೆ ಮತ್ತು ಸಾಧನೆಯನ್ನು ಮುಖ್ಯವಾಗಿ ಸಾಮಾಯಿಕ  ಹಾಗೂ ನಮೋಕಾರ ಮಂತ್ರ ಧ್ಯಾನ ಎಂದು ಕರೆಯಲಾಗುತ್ತದೆ.

  ​ಮುಂಜಾನೆ ಎದ್ದ ತಕ್ಷಣ ಪಂಚ ಪರಮೇಷ್ಠಿಗಳನ್ನು ಸ್ಮರಿಸುತ್ತ ಪಠಿಸುವ ಮೂಲ ಮಂತ್ರ
​ಣಮೋ ಅರಿಹಂತಾಣಂ
​ಣಮೋ ಸಿದ್ಧಾಣಂ
​ಣಮೋ ಆಯಿರಿಯಾಣಂ
​ಣಮೋ ಉವಜ್ಝಾಯಾಣಂ
​ಣಮೋ ಲೋಏ ಸವ್ವ ಸಾಹೂಣಂ
​ಸಾಮಾಯಿಕ.

  ಮುಂಜಾನೆಯ ಶಾಂತ ವೇಳೆಯಲ್ಲಿ 48 ನಿಮಿಷಗಳ ಕಾಲ (ಒಂದು ಮುಹೂರ್ತ) ಮನಸ್ಸನ್ನು ಸಮಚಿತ್ತದಲ್ಲಿಟ್ಟು ಮಾಡುವ ಆತ್ಮಧ್ಯಾನ.

​ ರಾತ್ರಿಯ ಅವಧಿಯಲ್ಲಿ ತಿಳಿದೋ ತಿಳಿಯದೆಯೋ ಮಾಡಿದ ತಪ್ಪುಗಳಿಗೆ ಮುಂಜಾನೆ ಸೂರ್ಯೋದಯಕ್ಕೂ ಮುನ್ನ ಕ್ಷಮೆ ಯಾಚಿಸುವ ಆತ್ಮಶುದ್ಧಿಯ ವಿಧಿ.

​  ಮೊದಲ ತೀರ್ಥಂಕರರಾದ ಭಗವಾನ್ ಆದಿನಾಥರನ್ನು ಸ್ತುತಿಸುವ ಅತ್ಯಂತ ಪವಿತ್ರವಾದ ಮುಂಜಾನೆಯ ಸ್ತೋತ್ರ ಪಠಣ.

#ಯಹೂದಿ_ಧರ್ಮದಲ್ಲಿ.
 ಯಹೂದಿ (ಜ್ಯೂಯಿಷ್) ಧರ್ಮದಲ್ಲಿ ಸೂರ್ಯೋದಯದ ಸಮಯ ಹಾಗೂ ಅದಕ್ಕೂ ಮುನ್ನ ಮಾಡುವ ಮುಂಜಾನೆಯ ಪ್ರಾರ್ಥನೆಯನ್ನು ಶಖರಿತ್ ಎಂದು ಕರೆಯಲಾಗುತ್ತದೆ.

​ಹೀಬ್ರೂ ಭಾಷೆಯಲ್ಲಿ 'ಶಖರ್'  ಎಂದರೆ 'ಮುಂಜಾನೆ' ಅಥವಾ 'ಉಷಃಕಾಲ'. ಇದು ಯಹೂದಿಗಳ ದಿನದ ಮೂರು ಕಡ್ಡಾಯ ಪ್ರಾರ್ಥನೆಗಳಲ್ಲಿ ಮೊದಲನೆಯದು.

 ಬೆಳಿಗ್ಗೆ ನಿದ್ರೆಯಿಂದ ಎದ್ದ ತಕ್ಷಣ, ಹಾಸಿಗೆಯಿಂದ ಏಳುವ ಮುನ್ನ ಜೀವ ಮತ್ತು ಆತ್ಮವನ್ನು ಮರಳಿ ನೀಡಿದ್ದಕ್ಕಾಗಿ ದೇವರಿಗೆ ಸಲ್ಲಿಸುವ ಕೃತಜ್ಞತಾ ಪ್ರಾರ್ಥನೆ.

​ "ದೇವರು ಒಬ್ಬನೇ" ಎಂದು ಸಾರುವ ಯಹೂದಿ ಧರ್ಮದ ಮೂಲ ನಂಬಿಕೆಯ ಪ್ರಾರ್ಥನೆ.
​ಅಮಿದಾಹ್  ನಿಂತುಕೊಂಡು ಭಕ್ತಿಯಿಂದ ದೇವರನ್ನು ಸ್ತುತಿಸುವ ಮುಖ್ಯ ಪ್ರಾರ್ಥನೆ.

​  ಈ ಪ್ರಾರ್ಥನೆಯ ಸಮಯದಲ್ಲಿ ಪುರುಷರು ಸಾಂಪ್ರದಾಯಿಕ ಪ್ರಾರ್ಥನಾ ಶಾಲು ತಲ್ಲಿತ್ ಮತ್ತು ಕೈ ಹಾಗೂ ಹಣೆಗೆ ಕಟ್ಟುವ ಚರ್ಮದ ಪೆಟ್ಟಿಗೆಗಳಾದ ಟೆಫಿಲಿನ್  ಧರಿಸುತ್ತಾರೆ.

#ಕ್ರಿಶ್ಚಿಯನ್_ಧರ್ಮದಲ್ಲಿ.
   ಕ್ರಿಶ್ಚಿಯನ್ ಧರ್ಮದಲ್ಲಿ ಸೂರ್ಯೋದಯಕ್ಕೂ ಮುನ್ನ ಮಾಡುವ ಮುಂಜಾನೆಯ ಪ್ರಾರ್ಥನೆಯನ್ನು
​ಮ್ಯಾಟಿನ್ಸ್ ಎನ್ನುತ್ತಾರೆ ಇದು ಮುಂಜಾನೆಯ ಜಾವದಲ್ಲಿ ಅಥವಾ ಸೂರ್ಯೋದಯಕ್ಕೂ ಮುನ್ನ ಮಾಡುವ ಸಾಂಪ್ರದಾಯಿಕ ಪ್ರಾರ್ಥನೆ.

 ಲ್ಯಾಟಿನ್ ಪದ Matutinus ಎಂದರೆ ಮುಂಜಾನೆ,
​ಲಾಡ್ಸ್ ಎಂದರೆ ಉಷಃಕಾಲದಲ್ಲಿ ಅಥವಾ ಸೂರ್ಯೋದಯದ ಸಮಯದಲ್ಲಿ ಮಾಡುವ ಸ್ತೋತ್ರ ಪ್ರಾರ್ಥನೆ.

  ಸಾಮಾನ್ಯ ಕ್ರೈಸ್ತರು ಮುಂಜಾನೆ ಎದ್ದು ದಿನದ ಆರಂಭದಲ್ಲಿ ಮಾಡುವ ವೈಯಕ್ತಿಕ ಪ್ರಾರ್ಥನೆ ಮತ್ತು ಬೈಬಲ್ ಓದುವಿಕೆ.

#ಇಸ್ಲಾಂ_ಧರ್ಮದಲ್ಲಿ.
   ಇಸ್ಲಾಂ ಧರ್ಮದಲ್ಲಿ ಸೂರ್ಯೋದಯಕ್ಕೂ ಮುನ್ನ ಸಲ್ಲಿಸುವ ಪ್ರಾರ್ಥನೆಯನ್ನು ಫಜ್ರ್  ನಮಾಜ್ ಎಂದು ಕರೆಯಲಾಗುತ್ತದೆ.

   ಒಟ್ಟು 4 ರಕ್ಅತ್‌ಗಳು (2 ಸುನ್ನತ್ + 2 ಫರ್ಜ್/ಕಡ್ಡಾಯ).

  ಇದು ಇಸ್ಲಾಂನ ದಿನದ ಐದು ಕಡ್ಡಾಯ ಪ್ರಾರ್ಥನೆಗಳಲ್ಲಿ ಮೊದಲನೆಯದಾಗಿದ್ದು, ಅತ್ಯಂತ ಪುಣ್ಯದಾಯಕವಾದ ನಮಾಜ್ ಎಂದು ಪರಿಗಣಿಸಲಾಗಿದೆ.

 #ಹಿಂದೂ_ಧರ್ಮದಲ್ಲಿ.
  ಹಿಂದೂ ಧರ್ಮದಲ್ಲಿ ಸೂರ್ಯೋದಯಕ್ಕೂ ಮುನ್ನ ಸುಮಾರು 1.5 ಗಂಟೆಗಳ ಕಾಲದ ಸಮಯವನ್ನು ಬ್ರಾಹ್ಮೀ ಮುಹೂರ್ತ ಎಂದು ಕರೆಯಲಾಗುತ್ತದೆ. 

  ವಿಭಿನ್ನ ಸಂಪ್ರದಾಯಗಳು ಮತ್ತು ಪಂಥಗಳಲ್ಲಿ ಈ ಸಮಯದಲ್ಲಿ ಆಚರಿಸುವ ಮುಂಜಾನೆಯ ಪ್ರಾರ್ಥನೆಗಳು ಹೀಗಿವೆ.

  ​#ವೈದಿಕ / ಸ್ಮಾರ್ತರಲ್ಲಿ ಎದ್ದ ತಕ್ಷಣ ‘ಕರಾಗ್ರೇ ವಸತೇ ಲಕ್ಷ್ಮೀಃ...’ ಮತ್ತು ‘ಸಮುದ್ರವಸನೇ ದೇವಿ...’ ಶ್ಲೋಕಗಳ ಪಠಣ.

​ ಸೂರ್ಯೋದಯಕ್ಕೂ ಮುನ್ನ ಅರ್ಘ್ಯ ಪ್ರದಾನ ಮತ್ತು ಗಾಯತ್ರಿ ಮಂತ್ರ ಜಪ.

​  ವಿಷ್ಣು ಸಹಸ್ರನಾಮ, ಆದಿತ್ಯ ಹೃದಯ ಸ್ತೋತ್ರ ಅಥವಾ ಇಷ್ಟದೇವತೆಯ ಸುಪ್ರಭಾತ ಪಠಣ.

#ವೈಷ್ಣವ ಪಂಥದಲ್ಲಿ
​ ತಮಿಳಿನ ತಿರುಪ್ಪಾವೈ  ಹಾಗೂ ವೆಂಕಟೇಶ್ವರ ಸುಪ್ರಭಾತ ಪಠಣ, ತಿರುವಾರಾಧನೆ.

#ಗೌಡೀಯ ವೈಷ್ಣವ (ಇಸ್ಕಾನ್): ಮುಂಜಾನೆ 4:30ಕ್ಕೆ ಮಂಗಳ ಆರತಿ, ಗುರು ಅಷ್ಟಕ ಹಾಗೂ ಹರೇ ಕೃಷ್ಣ ಮಹಾಮಂತ್ರ ಜಪ (ಜಪಮಾಲೆಯ ಧ್ಯಾನ).

#ಶೈವ ಮತ್ತು ವೀರಶೈವ / ಲಿಂಗಾಯತ ಸಂಪ್ರದಾಯದಲ್ಲಿ
​ ಮುಂಜಾನೆ ಶಿವಲಿಂಗಕ್ಕೆ ಅಭಿಷೇಕ, ರುದ್ರಾಭಿಷೇಕ, ಪಂಚಾಕ್ಷರೀ ಮಂತ್ರ (ಓಂ ನಮಃ ಶಿವಾಯ) ಜಪ ಹಾಗೂ ಬಿಲ್ವಾರ್ಚನೆ.

​ ಸೂರ್ಯೋದಯಕ್ಕೂ ಮುನ್ನ ಇಷ್ಟಲಿಂಗವನ್ನು ಎಡ ಅಂಗೈಯಲ್ಲಿಟ್ಟುಕೊಂಡು ಮಾಡುವ ಇಷ್ಟಲಿಂಗ ಪೂಜೆ / ಧ್ಯಾನ ಮತ್ತು ವಚನಗಳ ಪಠಣ.
​ಶಾಕ್ತ ಪಂಥ (ದೇವಿ ಉಪಾಸಕರು)
​ಶ್ರೀವಿದ್ಯಾ ಹಾಗೂ ದೇವಿ ಆರಾಧನೆ.

#ನಾಥ_ಪಂಥ
 ​ನಾಥ ಪಂಥ (ಹಠಯೋಗ ಮತ್ತು ಆದಿನಾಥ ಪರಂಪರೆ)
ನಾಥ ಸಂಪ್ರದಾಯದಲ್ಲಿ (ಗೋರಖ್‌ನಾಥ್ ಮತ್ತು ಮತ್ಸ್ಯೇಂದ್ರನಾಥ ಪರಂಪರೆ) ಮುಂಜಾನೆಯ ಸಮಯವನ್ನು ಕಾಯಶುದ್ಧಿ ಮತ್ತು ಶಕ್ತಿ ಜಾಗೃತಿಗೆ ಬಳಸಲಾಗುತ್ತದೆ.

  ​ಶಿಂಗಿನಾದ / ನಾದೋಪಾಸನೆ: ಮುಂಜಾನೆ ಎದ್ದ ತಕ್ಷಣ 'ಶಿಂಗಿ' (ಜಿಂಕೆಯ ಕೊಂಬಿನಿಂದ ಮಾಡಿದ ಸಣ್ಣ ಊದುವ ವಾದ್ಯ) ಊದುವ ಮೂಲಕ ನಾದಬ್ರಹ್ಮನನ್ನು ಆವಾಹನೆ ಮಾಡುವುದು ಮತ್ತು ಆಶ್ರಮವನ್ನು ಜಾಗೃತಗೊಳಿಸುವುದು.

​ ಪರಸ್ಪರ ಗುರು-ಶಿಷ್ಯರು ಮತ್ತು ದೇವರಿಗೆ"ಆದೇಶ್" (ಪರಮಾತ್ಮನ ಆದೇಶಕ್ಕೆ ಶರಣು) ಎಂದು ನಮಸ್ಕರಿಸುವುದು.

  ಷಟ್ಕರ್ಮಗಳು (ನೇತಿ, ಧೌತಿ ಇತ್ಯಾದಿ ದೇಹಶುದ್ಧಿ ಕ್ರಿಯೆಗಳು), ಆಸನಗಳು ಮತ್ತು ಪ್ರಾಣಾಯಾಮದ ಮೂಲಕ ಕುಂಡಲಿನೀ ಶಕ್ತಿಯನ್ನು ಜಾಗೃತಗೊಳಿಸುವ ಧ್ಯಾನ.

​  ಮಠಗಳಲ್ಲಿ ಸದಾ ಉರಿಯುವ ಪವಿತ್ರ 'ಧೂನಿ'ಗೆ (ಪವಿತ್ರ ಅಗ್ನಿ) ಮುಂಜಾನೆಯ ಆಹುತಿ ನೀಡಿ, ಭಸ್ಮ ಧಾರಣೆ ಮಾಡುವುದು ಹಾಗೂ ಗೋರಖ್‌ನಾಥ್ ಬಾನಿಗಳನ್ನು (ಪದಗಳನ್ನು) ಪಠಿಸುವುದು.

#ನಾಗಾ_ಸಾಧುಗಳು (ಅಖಾಡಾ ಸಂಪ್ರದಾಯ)
 ನಾಗಾ ಸಾಧುಗಳ ದಿನಚರಿ ಸೂರ್ಯೋದಯಕ್ಕೂ ಮುನ್ನವೇ ಆರಂಭವಾಗುವ ಕಠಿಣ ತಪಸ್ಸು ಮತ್ತು ಶೈವ/ತಾಂತ್ರಿಕ ವಿಧಿಗಳಿಂದ ಕೂಡಿರುತ್ತದೆ.

  ತಣ್ಣೀರಿನ ಸ್ನಾನದ ನಂತರ, ಧೂನಿಯ ಪವಿತ್ರ ಭಸ್ಮವನ್ನು (ಬೂದಿಯನ್ನು) ಇಡೀ ದೇಹಕ್ಕೆ ಲೇಪಿಸಿಕೊಳ್ಳುವುದು ಇದು ಸಂಸಾರ ತ್ಯಾಗ ಮತ್ತು ಮೃತ್ಯುಂಜಯ ಭಾವದ ಸಂಕೇತ.

​  ತಮ್ಮ ಅಖಾಡಾದ ಧೂನಿಯ ಮುಂದೆ ಕುಳಿತು ಅಗ್ನಿ ಪೂಜೆ ಮಾಡುವುದು ಮತ್ತು ರಹಸ್ಯ ತಾಂತ್ರಿಕ/ವೈದಿಕ ಮಂತ್ರಗಳ ಜಪ.

  ಜೂನಾ, ನಿರಂಜನಿ ಮುಂತಾದ ಅಖಾಡಾಗಳ ಸಾಧುಗಳು ಭಗವಾನ್ ಶಿವ, ಭೈರವ, ದತ್ತಾತ್ರೇಯ ಅಥವಾ ಮಹಾಕಾಳಿಯನ್ನು ಸ್ತುತಿಸುವ ಸ್ತೋತ್ರಗಳನ್ನು ಪಠಿಸುತ್ತಾರೆ.
​ಅಸ್ತ್ರ ಪೂಜೆ ಹಾಗೂ ಯೋಧಾಭ್ಯಾಸ (ಕೆಲವು ಅಖಾಡಾಗಳಲ್ಲಿ) ತ್ರೀಶೂಲ, ಖಡ್ಗ ಮುಂತಾದ ಪವಿತ್ರ ಧರ್ಮರಕ್ಷಣಾ ಆಯುಧಗಳಿಗೆ ಮುಂಜಾನೆ ವಂದನೆ ಸಲ್ಲಿಸಿ, ಶಾರೀರಿಕ ಕಸರತ್ತು ಅಥವಾ ಯೋಗಾಭ್ಯಾಸ ಮಾಡುವುದು.

  ಸೂರ್ಯನ ಮೊದಲ ಕಿರಣ ಬೀಳುವ ಮುನ್ನ ಮೌನವಾಗಿ ಮಾಡುವ ತೀವ್ರ ಸಮಾಧಿ ಧ್ಯಾನ.

#brahmimuhurtha #sikh #Muslim #Christian 
#yahudi #Buddhism #jainism #nathapanth 
#nagasadhus #iskon

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...