4089.ಗುಟ್ಕಾಕ್ಕೆ_ಅನುಮತಿ_ನೀಡಲು_ದೇಶದ ಯಾವುದೇ_ಸರ್ಕಾರಕ್ಕೂ_ಅವಕಾಶವೇ_ಇಲ್ಲ ಅಡಿಕೆ_ಬೆಳೆಗಾರರು_ಗುಟ್ಕಾ_ಲಾಭಿಯಿಂದ_ಹೊರಬರಬೇಕು
ಗುಟ್ಕಾಕ್ಕೆ_ಅನುಮತಿ_ನೀಡಲು_ದೇಶದ
ಯಾವುದೇ_ಸರ್ಕಾರಕ್ಕೂ_ಅವಕಾಶವೇ_ಇಲ್ಲ
ಅಡಿಕೆ_ಬೆಳೆಗಾರರು_ಗುಟ್ಕಾ_ಲಾಭಿಯಿಂದ_ಹೊರಬರಬೇಕು
ಆದರೂ ರಾಜಕಾರಣಿಗಳು ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಮನವಿ ಸಲ್ಲಿಸುತ್ತಿರುವುದು ಯಾಕೆ?.... ಅಡಿಕೆ ಬೆಳೆಗಾರರು ಈ ಬಗ್ಗೆ ಯೋಚಿಸಬೇಕು, ರಾಜ್ಯದ ಅಡಿಕೆ ಬೆಳೆಗಾರರು ಗುಟ್ಕಾ ಬೆಂಬಲಿಸದೇ ಕೂಡ ಲಾಭ ಪಡೆಯಲು ಸಾಧ್ಯವಿದೆ.
ಸುಪ್ರೀಂ ಕೋರ್ಟ್ ಆದೇಶ ಮತ್ತು ಕೇಂದ್ರ ಸರ್ಕಾರದ ನಿಯಮ (Regulation 2.3.4): ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ತಂದಿರುವ ನಿಯಮಾವಳಿಗಳು ಇವರಾರೂ ಓದಿಕೊಂಡಿಲ್ಲವೇ ....
ಅಡಿಕೆ ಕೃಷಿ ಲಾಭದಾಯಕ ಕೃಷಿ ಆಗಿದೆ ಇದು ಶತಮಾನಗಳಿಂದಲೂ,ಗುಟ್ಕಾ ಇಲ್ಲದ ಕಾಲದಿಂದಲೂ ಅಡಿಕೆ ಇದೆ.
ಆದರೆ ಇತ್ತೀಚಿಗೆ ಬಂದಿರುವ ಗುಟ್ಕಾ ಉದ್ಯಮ ಜನರ ಆರೋಗ್ಯಕ್ಕೆ ಮಾರಕ ಆಗಿದ್ದರೂ ಈ ಉದ್ಯಮದಿಂದ ಊಹಿಸಲಾರದಷ್ಟು ಲಾಭದಾಯಕ ಆಗಿರುವುದರಿಂದ ಸರ್ಕಾರಗಳ ಮೇಲೆ ಪ್ರಭಾವ ಬೀರುವಷ್ಟು ಬಲಿಷ್ಟವಾಗಿದೆ.
ಮಧ್ಯವರ್ತಿಗಳು, ಗುಟ್ಕಾ ವ್ಯಾಪಾರಿಗಳ ಹಿತ ಕಾಪಾಡಲು ಅಡಿಕೆ ಬೆಳೆಗಾರರನ್ನ ಗುಟ್ಕಾ ಇಲ್ಲದೆ ಅಡಿಕೆ ಬೆಳೆ ಉಳಿಯಲು ಸಾಧ್ಯವೇ ಇಲ್ಲ ಎಂಬ ಹುಸಿ ನಂಬಿಕೆ ಸೃಷ್ಟಿಸಲು ರಾಜಕಾರಣಿಗಳು, ಜನಪ್ರತಿನಿಧಿಗಳನ್ನು ಬಳಸಿಕೊಳ್ಳುತ್ತಿದ್ದಾರೆ.
ಇದಕ್ಕೆ ಅಡಿಕೆ ಬೆಳೆಗಾರರ ಹಿತ ಕಾಪಾಡಬೇಕಾದ ಸಂಘಟನೆಗಳು ಶಾಮೀಲಾಗುತ್ತಿರುವುದು ದುರಂತ.
#ವಿಶ್ವ_ಆರೋಗ್ಯ_ಸಂಸ್ಥೆ ಈಗಾಗಲೇ ಅಡಿಕೆಯನ್ನು (ತಂಬಾಕು ಸೇರಿಸದೆ ಕೂಡ) ಕ್ಯಾನ್ಸರ್ ಕಾರಕ ಪಟ್ಟಿಯಲ್ಲಿ ಸೇರಿಸಿದೆ ಅದನ್ನ ಆ ಪಟ್ಟಿಯಿಂದ ಹೊರಗಿಡುವ ಕೆಲಸಕ್ಕೆ ಮೊದಲ ಆದ್ಯತೆ ಅಡಿಕೆ ಬೆಳೆಗಾರರು ನೀಡಬೇಕಾಗಿದೆ.
ಇತ್ತೀಚಿನ ವಿದ್ಯಾಮಾನಗಳು ಅಡಿಕೆ ಬೆಳೆಗಾರರಿಗೆ ಸರಿಯಾದ ಮಾಹಿತಿ ನೀಡಿ ಅವರನ್ನು ಸರಿ ದಾರಿಯಲ್ಲಿ ಒಯ್ಯುವ ಕೆಲಸ ಮಾಡಬೇಕಾದವರ ನಡೆ ಸಂಶಯಾಸ್ಪದ ಅನ್ನಿಸದೇ ಇರಲು ಸಾಧ್ಯವೇ ಇಲ್ಲ.
#ರಾಜ್ಯ_ಸರ್ಕಾರಗಳಿಗೆ ಗುಟ್ಕಾ ತಯಾರಿಕೆ, ವಿತರಣೆ ಅಥವಾ ಮಾರಾಟಕ್ಕೆ ಅನುಮತಿ ನೀಡಲು ಯಾವುದೇ ಅದಿಕಾರವಿಲ್ಲ.
ಇದಕ್ಕೆ ಸಂಬಂಧಿಸಿದ ಮುಖ್ಯ ಕಾನೂನು ಮತ್ತು ಕಾರ್ಯಾಚರಣೆಯ ನಿಯಮಗಳು ಹೀಗಿವೆ ...
1.#ಆಹಾರ_ಸುರಕ್ಷತಾ_ಕಾಯಿದೆ ಮತ್ತು FSSAI ನಿಯಮಗಳು
ಕೇಂದ್ರ ಸರ್ಕಾರದ ನಿಯಮ (Regulation 2.3.4): ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ತಂದಿರುವ ನಿಯಮಾವಳಿಗಳ ಪ್ರಕಾರ, ಯಾವುದೇ ಆಹಾರ ಪದಾರ್ಥಗಳಲ್ಲಿ ತಂಬಾಕು ಅಥವಾ ನಿಕೋಟಿನ್ ಅನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಗುಟ್ಕಾವನ್ನು ಆಹಾರ ಪದಾರ್ಥದ ವ್ಯಾಪ್ತಿಗೆ ತರಲಾಗಿರುವುದರಿಂದ ಅದಕ್ಕೆ ಅನುಮತಿ ನೀಡಲು ಬರುವುದಿಲ್ಲ.
2. #ಸುಪ್ರೀಂ_ಕೋರ್ಟ್_ಆದೇಶ
ಸುಪ್ರೀಂ ಕೋರ್ಟ್ ದೇಶಾದ್ಯಂತ ಆರೋಗ್ಯದ ಹಿತದೃಷ್ಟಿಯಿಂದ ಗುಟ್ಕಾ, ನಿಕೋಟಿನ್/ತಂಬಾಕು ಮಿಶ್ರಿತ ಪಾನ್ ಮಸಾಲಾ ಹಾಗೂ ಜಗಿಯುವ ತಂಬಾಕು ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ.
ದೇಶದ ಯಾವುದೇ ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶವು ಈ ಉನ್ನತ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಅನುಮತಿ ನೀಡಲು ಸಾಧ್ಯವಿಲ್ಲ.
3. #ರಾಜ್_ಸರ್ಕಾರದ ಅಧಿಕಾರ ವ್ಯಾಪ್ತಿ
ಆಹಾರ ಸುರಕ್ಷತಾ ಮತ್ತು ಮಾನದಂಡಗಳ ಕಾಯಿದೆ (FSS Act, 2006) - ಸೆಕ್ಷನ್ 30(2)(a): ಈ ಕಾಯಿದೆಯಡಿ ರಾಜ್ಯ ಸರ್ಕಾರದ ಆಹಾರ ಸುರಕ್ಷತಾ ಆಯುಕ್ತರಿಗೆ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಹಾನಿಕಾರಕ ಆಹಾರ ಉತ್ಪನ್ನಗಳನ್ನು ನಿಷೇಧಿಸುವ ಅಧಿಕಾರ ನೀಡಲಾಗಿದೆಯೇ ಹೊರತು, ನಿಷೇಧಿತ ನಿಕೋಟಿನ್/ತಂಬಾಕು ಪದಾರ್ಥಗಳಿಗೆ ಅನುಮತಿ ನೀಡುವ ಅಧಿಕಾರವಿಲ್ಲ.
ಕರ್ನಾಟಕ ಸರ್ಕಾರ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರಸ್ತುತ ಸಾರ್ವಜನಿಕ ಆರೋಗ್ಯದ ಕಾಳಜಿಯಿಂದ ಗುಟ್ಕಾ ಮತ್ತು ನಿಕೋಟಿನ್ ಹೊಂದಿರುವ ಪಾನ್ ಮಸಾಲಾಗಳ ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿವೆ.
#arecanut #gutka #campco #cancerious #WHO
#IARC #cologian #suprimcourtofindia #govtofindia
Comments
Post a Comment