Skip to main content

Posts

Showing posts with the label SHIVAPURA SUBBANNA NAYAK A LEGEND OF RICE INDUSTRY OF

ಭಾಗ -32,ಕರಾವಳಿ ಮತ್ತು ಕೇರಳದಲ್ಲಿ ಆನಂದಪುರಂನ ಕುಚುಲಕ್ಕಿ ಮತ್ತು ಅವಲಕ್ಕಿಗೆ ಬ್ರಾಂಡ್ ನೇಮ್ ಬಂದಿದ್ದು ಗಾಂದೀ ಚಿಂತನೆಯ ಶಿವಪುರ ಸುಬ್ಬಣ್ಣ ನಾಯಕರಿಂದ

#ಭಾಗ_32 #ಕಡು_ಬಡತನದಿಂದ_ಸಾಗಿ_ಯಶಸ್ವಿ_ಉದ್ದಿಮೆದಾರರಾದ_ಶಿವಪುರ_ಸುಬ್ಬಣ್ಣ_ನಾಯಕರು #ಆನಂದಪುರಂ_ಹೆಸರು_ಉತ್ಕೃಷ್ಟ_ಅಕ್ಕಿ_ಅವಲಕ್ಕಿ_ತಯಾರಿಯಲ್ಲಿ_ಪ್ರಸಿದ್ಧಿ_ಪಡೆಯಲು_ಇವರ_ಶ್ರಮವಿದೆ. #ಸ್ಥಳಿಯ_ಗ್ರಾಮೀಣ_ಹೆಣ್ಣು_ಮಕ್ಕಳಲ್ಲಿ_ಆತ್ಮವಿಶ್ವಾಸದ_ತರಬೇತಿ_ನೀಡಿದವರು #ಗಾಂಧೀಜಿ_ಸ್ವದೇಶಿ_ಚಿಂತನೆಯ_ಜಾರಿ_ಮಾಡಿದ_ಗಾಂದೀ_ಅಭಿಮಾನಿ #ಅಯ್ಯಂಗಾರರ_ಅಕ್ಕಿಗಿರಣಿ_ಖರೀದಿಸಿದವರು        ಆನಂದಪುರಂ ಕುಚಲಕ್ಕಿ ಮತ್ತು ಅವಲಕ್ಕಿಯಲ್ಲಿ ಗುಣಮಟ್ಟದ ಪ್ರಶಂಸೆ ಮತ್ತು ಬ್ರಾಂಡಿಂಗ್ ಆಗಲು ಇಲ್ಲಿನ ರೈತ ಬಂದು ಗ್ರಾಮೋದ್ಯೋಗದ ಶಿವಪುರ ಸುಬ್ಬಣ್ಣ ನಾಯಕರು ಕಾರಣಕರ್ತರು.        1970 ರ ದಶಕದಲ್ಲಿ ಆನಂದಪುರಂನ ಬದರಿನಾರಾಯಣ್ ಅಯ್ಯಂಗಾರ್ ಮತ್ತು ವೆಂಕಟಾಚಲ ಆಯ್ಯಂಗಾರರ ಅವರ ತಂದೆ ಹೆಸರಿನ ರಾಮಕೃಷ್ಣ ಆಯ್ಯಂಗಾರ್ ಅಕ್ಕಿ ಗಿರಣಿ ಆ ಕಾಲದಲ್ಲಿ ದೊಡ್ಡ ಮಟ್ಟದಲ್ಲೇ ವ್ಯವಹರಿಸುತ್ತಿತ್ತು.   ಆನಂದಪುರಂ ಆಸ್ಪತ್ರೆ ಪಕ್ಕದ ರೈಲ್ವೆ ಸ್ಟೇಷನ್ ರಸ್ತೆಯಿಂದ ಮಾರಿಕಾಂಬ ದೇವಾಲಯದವರೆಗೆ ಸುಮಾರು ಮೂರು ಎಕರೆ ಪ್ರದೇಶದಲ್ಲಿ ಅಕ್ಕಿ ಗಿರಣಿ, ಗೋದಾಮು ಹೊರಭಾಗದಲ್ಲಿ ಸುಮಾರು 50 ಕಾರ್ಮಿಕರ ಕ್ವಾರ್ಟಸ್೯ಗಳು ಇತ್ತು, ಆ ಕಾಲದಲ್ಲಿ ಸರ್ಕಾರ ಲೇವಿ ಭತ್ತ ರೈತರಿಂದ ಸಂಗ್ರಹಿಸುವ ಕಾನೂನು ಇದ್ದಿದ್ದರಿಂದ ಇದು ಈ ಭಾಗದ ಲೇವಿ ಭತ್ತ ಸಂಗ್ರಹ. ಕೇಂದ್ರವೂ ಆಗಿತ್ತು. ...