Blog number 1017. ಶಿಕಾರಿಪುರದ ಸಮಾಜವಾದಿ, ರೈತ ಮುಖಂಡ ಅಂಗಡಿ ಷಣ್ಮುಖಪ್ಪ 86 ರ ವಯೋಮಾನದಲ್ಲಿ ಬರೆದ ಪುಸ್ತಕದಲ್ಲಿ ಶಿವಮೊಗ್ಗ ಜಿಲ್ಲೆಯ 1960 ರ ದಶಕದ ನಂತರದ ಅನೇಕ ಹೋರಾಟಗಳ ಮಾಹಿತಿ ಅಡಗಿದೆ
#ನಮ್ಮ_ಜಿಲ್ಲೆಯ_ರೈತ_ಮುಂದಾಳು_ಶಿಕಾರಿಪುರದ_ಷಣ್ಮುಖಪ್ಪರ_ಪುಸ್ತಕ #ಮೌನಿ_ಸಮಾಜವಾದಿಯ_ಅಂತರಾಳ #ಜಿಲ್ಲೆಯ_ಅನೇಕ_ಹೋರಾಟ_ಚಳವಳಿಯಲ್ಲಿ_ಭಾಗವಹಿಸಿದ_ಷಣ್ಮುಖಪ್ಪರ_ಜೀವನ_ಚರಿತ್ರೆ. #ಶಿಕಾರಿಪುರದಲ್ಲಿ_ಪ್ರಥಮ_ಗ್ರಂಥಾಲಯ_ತೆರೆದವರು. #ಜಿಲ್ಲೆಯ_ಹೋರಾಟದ_ಅನೇಕ_ಮಾಹಿತಿಗಳು_ಈ_ಪುಸ್ತಕದಲ್ಲಿದೆ. ಸಾಗರದ ರೈತ ಮುಖಂಡರಾದ ವಸಂತ ಕುಮಾರರ ಸಲಹೆಯಂತೆ ಶಿಕಾರಿಪುರದ ರೈತ ಮುಖಂಡರಾದ A.ಷಣ್ಮುಖಪ್ಪ ನವರು ಇತ್ತೀಚೆಗೆ ಪ್ರಕಟಿಸಿರುವ ಡಾ.ರಾಮಮನೋಹರ ಲೋಹಿಯ ಚಿಂತನೆಯ #ಮೌನಿ_ಸಮಾಜವಾದಿಯ_ಅಂತರಾಳ ಪುಸ್ತಕ ಕಳಿಸಿದ್ದರು ಅದರಲ್ಲಿ ಪೂರ್ತಿ ಓದಿ ಪ್ರತಿಕ್ರಿಯೆ ನೀಡಿ ಎಂಬ ಠಸ್ಸೆ ಕೂಡ ಒತ್ತಿದ್ದಾರೆ. ಹಿಂಬುಟದಲ್ಲಿ ತಮ್ಮ 86ನೆ ವಯಸ್ಸಲ್ಲಿ ಅವರಿಗೆ ಅವರ ಜೀವನದ ನಿಸ್ವಾರ್ಥ ಸಾಮಾಜಿಕ ಸೇವೆ ಬರೆಯುವ ತವಕ ಉಂಟಾಯಿತಂತೆ ಆದ್ದರಿಂದ ಈ ಪುಸ್ತಕ ಬರೆದು ಪ್ರಕಟಿಸಿದ್ದಾರೆ. ಅವರ ಬಲಗಣ್ಣು ಆಪರೇಷನ್ ಆಗಿದ್ದು ಮತ್ತು ಅವರ ಸಮಕಾಲಿನವರು ಯಾರೂ ಬದುಕಿಲ್ಲ, ಪ್ರಯಾಣ ಮಾಡುವಂತಿಲ್ಲ ಆದ್ದರಿಂದ ಆದಷ್ಟು ಮಟ್ಟಿಗೆ ಬರೆದಿದ್ದೇನೆ ಎಂದಿದ್ದು ನೋಡಿ ಅವರ ಪುಸ್ತಕ ಓದಲು ಹೆಚ್ಚು ಆಸಕ್ತಿ ಉಂಟಾಯಿತು. ಓದುತ್ತಾ ಇವರು ಸಾಮಾನ್ಯರಲ್ಲ ಅನ್ನುವುದು ಗೊತ್ತಾಯಿತು. ಆ ಕಾಲದಲ್ಲಿ ಅವರ ಸುತ್ತಮುತ್ತ ಬಡ್ಡಿ ವ್ಯಾಪರಸ್ಥರೆ ತುಂಬಿದ್ದರು ಆದರೆ ಇವರಿಗೆ ಅದರ ಬಗ್ಗೆ ಆಸಕ್ತಿ ಉಂಟಾಗದೇ...