#ರಹಮತ್_ತರಿಕೆರೆಯವರ_ಕುಲುಮೆ_ಬಗ್ಗೆ_ಬರೆದ_ಲೇಖನ. #ಮಸಾಲ_ಚಾಯ್_ವ್ಲೋಗ್_ಕಳಸದ_ಕುಲುಮೆ #ನಮ್ಮ_ನೆರೆಮನೆಯ_ರಾಮಾಚಾರರ_ಕುಲುಮೆ. ಹಳ್ಳಿಯ ಕುಲುಮೆ ಅಂದರೆ ಆ ಕಾಲದ ಹಳ್ಳಿಯ ಕಾರ್ಖಾನೆ ಈಗ ನೆನಪು ಮಾತ್ರ. ನಮ್ಮ ಮನೆ ಪಕ್ಕದಲ್ಲೇ ರಾಮಾಚಾರರ ಕುಲುಮೆ ಅವರಿಗೆ ನಮ್ಮ ಊರಿನ ಶ್ರೀಮ೦ತ ಜಮೀನ್ದಾರರಾದ ರಾಮಕೃಷ್ಣ ಅಯ್ಯಂಗಾರ್ (ಮ೦ತ್ರಿ ಆಗಿದ್ದ ಬದರಿನಾರಾಯಣ ಅಯ್ಯಂಗಾರ್ ತ೦ದೆ ) ಅವರ 5-6 ಸಾವಿರ ಕೃಷಿ ಭೂಮಿಗೆ ಇಂತಹ ಒ0ದೆರೆಡು ಕುಲುಮೆ ಇರಲೇ ಬೇಕಾಗಿತ್ತು, ಆದ್ದರಿಂದ ನಮ್ಮೂರ ಕುಲುಮೆಗೆ ಒಂದು ರೀತಿ ರಾಜಾಶ್ರಯ ಇತ್ತು. ನಮ್ಮಲ್ಲಿ ಬೆರಣಿ ಬಳಕೆ ಇರಲಿಲ್ಲ, ವಿಶೇಷ ಹದ ನೀಡಲು ಪ್ರತಿ ದಿನ ಹುತ್ತದ ಮಣ್ಣು ತರುತ್ತಿದ್ದರು ಜೊತೆಗೆ ಕತ್ರಿ ಹಿಡಿಗೆ ಹಾಕುವ ಮರ, ಬೆಳಿಗ್ಗೆ ಕುಲುಮೆ ಸ್ಟಚ್ಚಾ ಮಾಡುವುದು ಬೂದಿ ತೆಗೆಯುವುದು ಕಿಟ್ಟ ತೆಗೆಯುವುದು ನಂತರ ಪೂಜೆ ಆಮೇಲೆ ಇದ್ದಿಲು ಹಾಕಿ ಮನೆಯಿ೦ದ ಒಲೆಯ ನಿಗಿ ನಿಗಿ ಕೆಂಡ ತಂದು ಅಗ್ನಿ ಯಜ್ಞ ಪ್ರಾರಂಭ ಆದರೆ ಸೂಯ೯ ಮುಳುಗುವ ತನಕ ನಿರಂತರ ತಿದಿ ಒತ್ತುತ್ತಾ ಇರುತ್ತಿದ್ದರು. ಶಾಲೆಯಿ೦ದ ಬಂದ ನಂತರ ನಾವೆಲ್ಲ ತಿದಿ ಎಳೆಯಲು ಅವರ ಮಕ್ಕಳ ಜೊತೆ ಪೈಪೋಟಿ, ಆಗೆಲ್ಲ ಕುಲುಮೆ ಎಂದರೆ ಹಳ್ಳಿಯ ಏಕೈಕ ಕಾಖಾ೯ನೆ. ಆಗೆಲ್ಲ ಕೃಷಿಕರ ಏಕೈಕ ಸಾಗಾಣಿಕೆ ವಾಹನ ಎತ್ತಿನಗಾಡಿ ಅದನ್ನು ಸುಗ್ಗಿ ಆಗುತ್ತಲೇ ದುರಸ್ತಿ ಆಗಲೇ ಬೇಕು ಏಕೆಂದರೆ ಬಿಸಿಗೆಯಲ್ಲೇ, ಉರವಲು ಕಟ್ಟ...