Skip to main content

Posts

Showing posts with the label it's taste and aroma is very tasty

Blog number 1735. ಕೊಲ್ಹಾರದಲ್ಲಿ ಮಾರಾಟ ಅಗುವ ಗಟ್ಟಿ ಕೆನೆ ಮೊಸರ ಮಣ್ಣಿನ ಕುಡಿಕೆಗಳಿಗೆ ಬಹು ಬೇಡಿಕೆ ಇದರ ರುಚಿ ಮತ್ತು ಘಮ ವಿಶಿಷ್ಟ.

#ಕೊರ್ತಿ_ಕೊಲ್ಹಾರ_ಮೊಸರು #ಕೆನೆಮೊಸರು_ಮಣ್ಣಿನ_ಕುಡಿಕೆಗಳಲ್ಲಿ #ವಿಜಯಪುರ_ಜಿಲ್ಲೆ_ಬಸವನಬಾಗೇವಾಡಿ_ವಿಧಾನಸಭಾ_ಕ್ಷೇತ್ರದ_ಕೊಲ್ಹಾರ #ಈ_ಮೊಸರು_ಜಗತ್ಪ್ರಸಿದ್ದ_ದೇಶ_ವಿದೇಶಗಳ_ಗಣ್ಯರು_ಇದನ್ನು_ಸವಿದಿದ್ದಾರೆ. #ನಂದಿನಿ_ಡೈರಿ_ಇದನ್ನು_ಮಾರುಕಟ್ಟಿಗೆ_ಬಿಟ್ಟಿದೆ. https://youtu.be/mBfGIesUXOM?feature=shared    ಕೃಷ್ಣಾ ನದಿಗೆ ಆಲಮಟ್ಟಿ ಡ್ಯಾಂ ನಿರ್ಮಾಣಕ್ಕೆ ಮೊದಲು ಹುಮನಾಬಾದ್ ಹುಬ್ಬಳ್ಳಿ ರಸ್ತೆ ಪಕ್ಕದ ಕೊಲ್ಹಾರ ಊರು ಮುಳುಗಡೆಯಿಂದ ಸ್ಥಳಾಂತರವಾಗಿದೆ ಈಗ ತಾಲ್ಲೂಕು ಕೇಂದ್ರವಾಗಿರುವ ಕೊಲ್ಹಾರದಲ್ಲಿನ ಕೃಷ್ಣ ಮೇಲ್ದಂಡೆ ವೃತ್ತದಲ್ಲಿ ಇಲ್ಲಿನ ಸಿಗ್ನೇಚರ್ ಬ್ರಾಂಡ್ ಕೆನೆ ಮೊಸರು ಮಣ್ಣಿನ ಕುಡಿಕೆಗಳಲ್ಲಿ ಭರಪೂರ ವ್ಯಾಪಾರ ವಹಿವಾಟು ನಡೆಸುತ್ತಿದೆ.    ಮುಳುಗಡೆ ಆದ ಮೂಲ ಕೊಲ್ಹಾರದಲ್ಲಿ ಅನೇಕ ದಶಕಗಳಿಂದ ಈ ಭಾಗದ ರೈತ ಮಹಿಳೆಯರು ಬುಟ್ಟಿಗಳಲ್ಲಿ ಮೊಸರಿನ ಕುಡಿಕೆಗಳನ್ನು ಜೊಡಿಸಿ ಕೊಂಡು ತಲೆ ಮೇಲೆ ಹೊತ್ತು ಈ ಭಾಗದಲ್ಲಿ ಸಂಚರಿಸುತ್ತಿದ್ದ ಸಾರಿಗೆ ಸಾಗಾಣಿಕೆ ಲಾರಿಗಳ ಡ್ರೈವರ್ ಗಳಿಗೆ ಮಾರಾಟ ಮಾಡಿ ದಿನದ ಸಂಪಾದನೆ ಮಾಡುತ್ತಿದ್ದರು.   ವಿಜಯನಗರ ಜಿಲ್ಲೆಯ ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದ ಕೊಲ್ಹಾರ ತಾಲ್ಲೂಕು ಕೇಂದ್ರ ಇಲ್ಲಿನ ಸುಮಾರು 3500 ಎಮ್ಮೆಗಳಿಂದ ಅಂದಾಜು 500 ಕುಟುಂಬಗಳು ಈ ಮೊಸರು ಉತ್ಪಾದನೆಯಲ್ಲಿ ತೊಡಗಿದೆ ಇವರಿಗಾಗಿಯೇ ಮಣ್ಣಿನ ಕುಡಿಕೆ ತಯಾರಿಸಿ ಕೊಡು...