Skip to main content

Posts

Showing posts with the label Malendu Gidda Endangered species of cows

Blog number 2292. ಶರಾವತಿ ನದಿ ಮುಳುಗಡೆಯಿಂದ ಕಳೆದು ಕೊಂಡ ಮಲೆನಾಡು ಗಿಡ್ಡ ಗೋವುಗಳು

#ಮಲೆನಾಡು_ಗಿಡ್ಡ_ಗೋವಿನ_ತಳಿ #ಈ_ಬಗ್ಗೆ_ನಾನು_ಬರೆದ_ಲೇಖನಕ್ಕೆ #ಪ್ರತಿಕ್ರಿಯೆ_ಬರೆದಿರುವ_ಕಾರ್ಗಲ್ #ನವೀನ್_ಕುಮಾರ್_ಜೈನ್ #kargal #malenadu #malenadugidda    ಪೇಸ್ ಬುಕ್ ಗೆಳೆಯರಾದ ನವೀನ್ ಕುಮಾರ ಜೈನ್ ಶರಾವತಿ ನದಿ ಮುಳುಗಡೆ ಸಂತ್ರಸ್ಥರು ಅವರ ಕುಟುಂಬದಲ್ಲಿನ ಮಲೆನಾಡು ಗಿಡ್ಡ ಗೋವುಗಳ ನಿಜ ಕಥೆ ಓದಿ ನಾನು ಕಣ್ಣೀರಾದೆ ನೀವೂ ಓದಿ ಅವರ ಬರುವಣಿಗೆ ಶೈಲಿ ಕೂಡ ಇಷ್ಟವಾಯಿತು... .... ತಮ್ಮ ಲೇಖನ ಎಷ್ಟು ಕಟುಸತ್ಯ ಎನ್ನುವುದಕ್ಕೆ ನಮ್ಮ ಹಿರಿಯರು ಹೇಳುತಿದ್ದ ಕಥೆಗಳು ಉತ್ತಮ ಉದಾಹರಣೆ  ಮುಳುಗಡೆಯ ಸಂದರ್ಭದಲ್ಲಿ ತಾವು ನೆಲೆಸಿದ ಮನೆ ಮಠ ಜಮೀನು ಜಾನುವಾರು ಬಿಟ್ಟು ಬರುವಾಗ ಆದ ನೋವುಗಳನ್ನು ನಮ್ಮ ಅಜ್ಜ ಅಜ್ಜಿ ಹೇಳುತ್ತ ಕಣ್ಣಿರು ಹಾಕುತ್ತಿದ ಆ ದಿನಗಳು ಮರೆಯಲು ಸಾಧ್ಯವಿಲ್ಲ.     ನಮ್ಮ ಅಜ್ಜಿ ಹೇಳುವ ಹಾಗೆ ಆಣೇಕಟ್ಟು ಕಟ್ಟಲು ಪ್ರಾರಂಭವಾಗಿ ಮುಗಿಯುವವರೆಗೆ ನಮ್ಮ ಮನೆ ಮುಳುಗುವುದಿಲ್ಲ ನಮ್ಮ ಮನೆ ಮುಳುಗುವುದಿಲ್ಲ ಎಂದು ಕಾಲ ಕಳೆಯುತ್ತಿದ್ದ ನಮ್ಮ ಹಿರಿಯರಿಗೆ ನೀರು ಗದ್ದೆ ತೋಟ ನುಂಗಿ ಮನೆ ಬಾಗಿಲಿಗೆ ನೀರು ಬಂದಾಗಲೇ ಅಪಾಯದ ಅರಿವಾಗಿದ್ದು,     ನೀರು ತುಂಬಿದ ಹಾಗೆ ಅಧಿಕಾರಿಗಳಿಗೂ ಎಚ್ಚರವಾಗಿ ಮನೆಗೂಂದರಂತೆ ಲಾರಿಗಳನ್ನು ಕಳುಹಿಸಿ ಇಗಿಂದಿಗಲೇ ಜಾನುವಾರುಗಳ ಸಮೇತ ಜಾಗ ಖಾಲಿ ಮಾಡಲು ತಾಕಿತು ಮಾಡಿದರಂತೆ.    ಹಾಗೆ ತಾಕಿತು ಮಾಡಿದ ...