#ಮಲೆನಾಡು_ಗಿಡ್ಡ_ಗೋವಿನ_ತಳಿ
#ಈ_ಬಗ್ಗೆ_ನಾನು_ಬರೆದ_ಲೇಖನಕ್ಕೆ
#ಪ್ರತಿಕ್ರಿಯೆ_ಬರೆದಿರುವ_ಕಾರ್ಗಲ್
#ನವೀನ್_ಕುಮಾರ್_ಜೈನ್
#kargal #malenadu #malenadugidda
ಪೇಸ್ ಬುಕ್ ಗೆಳೆಯರಾದ ನವೀನ್ ಕುಮಾರ ಜೈನ್ ಶರಾವತಿ ನದಿ ಮುಳುಗಡೆ ಸಂತ್ರಸ್ಥರು ಅವರ ಕುಟುಂಬದಲ್ಲಿನ ಮಲೆನಾಡು ಗಿಡ್ಡ ಗೋವುಗಳ ನಿಜ ಕಥೆ ಓದಿ ನಾನು ಕಣ್ಣೀರಾದೆ ನೀವೂ ಓದಿ ಅವರ ಬರುವಣಿಗೆ ಶೈಲಿ ಕೂಡ ಇಷ್ಟವಾಯಿತು...
.... ತಮ್ಮ ಲೇಖನ ಎಷ್ಟು ಕಟುಸತ್ಯ ಎನ್ನುವುದಕ್ಕೆ ನಮ್ಮ ಹಿರಿಯರು ಹೇಳುತಿದ್ದ ಕಥೆಗಳು ಉತ್ತಮ ಉದಾಹರಣೆ
ಮುಳುಗಡೆಯ ಸಂದರ್ಭದಲ್ಲಿ ತಾವು ನೆಲೆಸಿದ ಮನೆ ಮಠ ಜಮೀನು ಜಾನುವಾರು ಬಿಟ್ಟು ಬರುವಾಗ ಆದ ನೋವುಗಳನ್ನು ನಮ್ಮ ಅಜ್ಜ ಅಜ್ಜಿ ಹೇಳುತ್ತ ಕಣ್ಣಿರು ಹಾಕುತ್ತಿದ ಆ ದಿನಗಳು ಮರೆಯಲು ಸಾಧ್ಯವಿಲ್ಲ.
ನಮ್ಮ ಅಜ್ಜಿ ಹೇಳುವ ಹಾಗೆ ಆಣೇಕಟ್ಟು ಕಟ್ಟಲು ಪ್ರಾರಂಭವಾಗಿ ಮುಗಿಯುವವರೆಗೆ ನಮ್ಮ ಮನೆ ಮುಳುಗುವುದಿಲ್ಲ ನಮ್ಮ ಮನೆ ಮುಳುಗುವುದಿಲ್ಲ ಎಂದು ಕಾಲ ಕಳೆಯುತ್ತಿದ್ದ ನಮ್ಮ ಹಿರಿಯರಿಗೆ ನೀರು ಗದ್ದೆ ತೋಟ ನುಂಗಿ ಮನೆ ಬಾಗಿಲಿಗೆ ನೀರು ಬಂದಾಗಲೇ ಅಪಾಯದ ಅರಿವಾಗಿದ್ದು,
ನೀರು ತುಂಬಿದ ಹಾಗೆ ಅಧಿಕಾರಿಗಳಿಗೂ ಎಚ್ಚರವಾಗಿ ಮನೆಗೂಂದರಂತೆ ಲಾರಿಗಳನ್ನು ಕಳುಹಿಸಿ ಇಗಿಂದಿಗಲೇ ಜಾನುವಾರುಗಳ ಸಮೇತ ಜಾಗ ಖಾಲಿ ಮಾಡಲು ತಾಕಿತು ಮಾಡಿದರಂತೆ.
ಹಾಗೆ ತಾಕಿತು ಮಾಡಿದ ತಕ್ಷಣ ಎಲ್ಲಿಗೆ ಹೋಗಬೇಕು ಏನು ಮಾಡಬೇಕು ತಾವು ಸಾಕಿದ ಮುವತ್ತು ನಲವತ್ತು ಜಾನುವಾರು ಕಥೆ ಏನು ಇಷ್ಟೊಂದು ಜಾನುವಾರುಗಳನ್ನು ಒಂದು ಲಾರಿಯಲ್ಲಿ ಸಾಗಿಸಲು ಸಾಧ್ಯವೇ. ಒಂದು ವೇಳೆ ಸಾಗಿಸಿದರೊ ಎಲ್ಲಿಗೆ?.
ಯೋಚಿಸಿ ಜಾನುವಾರುಗಳನ್ನು ಸಾಗಿಸಲು ಸಾಧ್ಯವಿಲ್ಲ ಎಂದು ಅರಿವಾದಾಗ ಕೊಟ್ಟಿಗೆಗೆ ಹೋಗಿ ತಮ್ಮ ಪ್ರತಿ ಜಾನುವಾರುಗಳ ಹೆಸರು ಹೇಳಿ ಕೈ ಮುಗಿದು ನಾವು ಎಲ್ಲಾದರೂ ನೆಲೆನಿಂತು ನಿಮ್ಮನ್ನು ಕರೆದುಕೊಂಡು ಹೊಗುವೆವು ಅಲ್ಲಿಯ ವರೆಗೆ ನಿಮ್ಮನ್ನು ನೀವು ಕಾಪಾಡಿಕೊಳ್ಳಿ ಎಂದು ಹೇಳಿ ಕಟ್ಟದ ಹಗ್ಗ ಬಿಚ್ಚಿ ಕಣ್ಣಿರು ಹಾಕುತ್ತ ಹೊರಟು ನಿಂತಾಗ ತಮ್ಮನ್ನು ಬಿಟ್ಟು ಹೋಗುತ್ತಿರುವ ಲಾರಿಗಳ ಮುಂದೆ ಜಾನುವಾರುಗಳು ಕಣ್ಣಿರು ಹಾಕುತ್ತ ನಿಂತಿರುವ ದೃಶ್ಯ ವಿವರಿಸುತ್ತಿದರೆ ನಮಗೂ ಕಣ್ಣಲಿ ನೀರು ಬರುತ್ತಿದ್ದವು.
ಹಾಗೆ ಜಾನುವಾರುಗಳನ್ನು ಬಿಟ್ಟು ಬಂದು ಎಲ್ಲೋ ಒಂದು ಜಾಗದಲ್ಲಿ ನೆಲೆ ನಿಂತು ಹದಿನೈದು ದಿನಗಳ ನಂತರ ತಮ್ಮ ಜಾನುವಾರುಗಳನ್ನು ಹೊಡೆದುಕೊಂಡು ಬರಲು ಹೊದಾಗ ಅಲ್ಲಿಯ ಕಥೆ ಕರುಣಾಜನಕ
ಎಷ್ಟು ಜಾನುವಾರುಗಳು ತಮ್ಮನ್ನು ಬಿಟ್ಟು ಹೋದ ಒಡೆಯನನ್ನು ನೆನೆದು ಆಹಾರ ಸೇವಿಸದೆ ಪ್ರಾಣ ಬಿಟ್ಟಿದ್ದು ಅಳಿದು ಉಳಿದ ಕೆಲವು ಜಾನುವಾರುಗಳು ಇವರನ್ನು ಕಂಡ ತಕ್ಷಣ ಕಣ್ಣಿರು ಸುರಿಸುತ್ತಾ ಇವರ ಜೊತೆಗೆ ಸುಮಾರು ನಲವತ್ತು ನಲವತ್ತೈದು ಕಿಲೋ ಮೀಟರ್ ನೆಡೆದು ಬಂದವಂತೆ
ಹಾಗೆ ಬಂದ ಜಾನುವಾರುಗಳ ಸಂತತಿ ಇಂದಿಗೂ ನಮ್ಮಲ್ಲಿ ಇದೆ.
Comments
Post a Comment