#ಮಲೆನಾಡು_ಗಿಡ್ಡ_ದನದ_ತುಪ್ಪ_ಸಾಗರದಲ್ಲಿ
#ಬ್ರಾಸಂ_ಸಮೀಪದ_ಡಾ_ಮಂಜಪ್ಪ_ಬಿಲ್ಡಿಂಗ್
#ಈಗ_ಮಲೆನಾಡು_ಗಿಡ್ಡ_ರೈತ_ಉತ್ಪಾದಕರ_ಕಂಪನಿ
#ನಾಗೇಂದ್ರಸಾಗರ್_ಮತ್ತು_ರಾಧಾಕೃಷ್ಣಬಂದಗದ್ದೆ_ಮುಖ್ಯಪ್ರವರ್ತಕರು
#ಪ್ರಾಯೋಜಕರು_ಪಶುಪಾಲನ_ಮತ್ತು_ಪಶುವೈದ್ಯ_ಸೇವಾ_ಇಲಾಖೆ_ಶಿವಮೊಗ್ಗ.
#pureghee #malenadugidda #organicfarming #sagara #farmerscompany
ಅವಸಾನದ ಅಂಚು ತಲುಪಿರುವ ಮಲೆನಾಡು ಗಿಡ್ಡ ಗೋವಿನ ತಳಿ ಸಂರಕ್ಷಣೆ ಮಾಡಲು ಮಲೆನಾಡು ಗಿಡ್ಡ ರೈತ ಉತ್ಪಾದಕರ ಕಂಪನಿ ಶಿವಮೊಗ್ಗ ಜಿಲ್ಲೆಯ ಸಾಗರಪೇಟೆಯಲ್ಲಿ ಕಾರ್ಯಾರಂಭ ಮಾಡಿದೆ.
ಇದಕ್ಕಾಗಿ ಪ್ರಗತಿಪರ ಗೆಳೆಯರಾದ ನಾಗೇಂದ್ರ ಸಾಗರ್ ರಾಧಾಕೃಷ್ಣ ಬಂದಗದ್ದೆ ಕಟ್ಟಿಬದ್ಧರಾಗಿದ್ದಾರೆ, ಇವರ ಒಳ್ಳೆಯ ಉದ್ದೇಶಕ್ಕಾಗಿ ಸಾಗರದ ಖ್ಯಾತ ವೈದ್ಯರಾಗಿದ್ದ ಡಾಕ್ಟರ್ ಮಂಜಪ್ಪನವರ ಪುತ್ರ ಸಂಜಯ್ ಪಾಲಿಟೆಕ್ನಿಕ್ ಅಧ್ಯಾಪಕರಾದ ರವಿಪ್ರಕಾಶ್ ಜೋಸೆಫ್ ನಗರದ ಚರ್ಚ ರಸ್ತೆಯ ತಮ್ಮ ಹಳೆ ಮನೆಯನ್ನು ನೀಡಿದ್ದಾರೆ ಇದರ ಲ್ಯಾಂಡ್ ಮಾರ್ಕ್ ಬ್ರಾಸಂ ಹತ್ತಿರ.
ಇಲ್ಲಿ ಶುದ್ಧ ಮಲೆನಾಡು ಗಿಡ್ಡದ ತುಪ್ಪದ ಜೊತೆ ಗಾಣದಿಂದ ತಯಾರಿಸಿದ ಖಾದ್ಯ ತೈಲಗಳು, ಉಪ್ಪಿನಕಾಯಿ, ಹಪ್ಪಳ, ಅರಿಶಿಣ ಪುಡಿ, ಸೀಗೆಪುಡಿ, ಗೋದಿ ಹಿಟ್ಟು,
ಜೋಳದ ಹಿಟ್ಟು, ಅಕ್ಕಿ ಹಿಟ್ಟು, ರಾಗಿ ಹಿಟ್ಟು,ದೇಸಿ ತಳಿಯ ಕೆಂಪಕ್ಕಿ, ಸೆಮಿ ಪಾಲೀಶ್ ಅಕ್ಕಿ ಇತ್ಯಾದಿ ದೊರೆಯುತ್ತದೆ.
ಮುಂದಿನ ದಿನಗಳಲ್ಲಿ ಸಾವಯವ ತರಕಾರಿ, ಸೊಪ್ಪು ಮತ್ತು ಹಣ್ಣು ಮತ್ತಿತರ ವಸ್ತುಗಳನ್ನು ಮಾರಾಟಕ್ಕಿಡುವ ಉದ್ದೇಶ ಈ ಸಂಸ್ಥೆಯದಾಗಿದೆ.
ಮಲೆನಾಡು ಗಿಡ್ಡದ ಗೋತಳಿ ಅವಸಾನದ ಅಂಚಿನಲ್ಲಿದೆ, ಸಣ್ಣ ಗಾತ್ರದ ಈ ಹಸುಗಳು ನೀಡುವ ಅತ್ಯಲ್ಪ ಹಾಲಿನಿಂದ ತುಪ್ಪ ತಯಾರಿಸುವುದು ಸುಲಭ ಅಲ್ಲ.
ಅದು ದುಬಾರಿ ಕೂಡ ಬೇರೆ ಕಡೆ ಮಲೆನಾಡು ಗಿಡ್ಡದ ತುಪ್ಪದ ಬೆಲೆ ಕಿಲೋಗೆ ರೂ.3,000 ತನಕ ಇದೆ ಆದರೆ ಇಲ್ಲಿ ಮಲೆನಾಡು ಗಿಡ್ಡದ ತುಪ್ಪ ಕೆಜಿಗೆ 1700 ರಂತೆ ರೈತರಿಂದ ನೇರವಾಗಿ ಖರೀದಿಸಿ ಲಾಭವಿಲ್ಲದೆ ಮಾರಾಟಕ್ಕಿಟ್ಟಿದ್ದಾರೆ.
ನಾನು ಇವತ್ತು ಇಲ್ಲಿ ಅಪರೂಪದ ಅಕ್ಕಿ ತಳಿಯಾದ, ಒಂದು ಕಾಲದಲ್ಲಿ ಮಲೆನಾಡಿನ ಜನಪ್ರಿಯವಾಗಿದ್ದ ಸಣ್ಣವಾಳ್ಯ ಅಕ್ಕಿ (ಸೆಮಿ ಪಾಲಿಶ್) ಮತ್ತು ಕೆಂಪಕ್ಕಿ ಖರೀದಿಸಿದೆ ಜೊತೆಗೆ ಗಾಣದ ಎಳ್ಳು ಎಣ್ಣೆ ಹಾಗೂ ಮಲೆನಾಡು ಗಿಡ್ಡದ ತುಪ್ಪ ಖರೀದಿಸಿದೆ.
ಎಲ್ಲಾ ವಸ್ತುಗಳು ಸೂಪರ್ ಕ್ವಾಲಿಟಿ ಹೊಂದಿದೆ ನನಗೆ ತೃಪ್ತಿ ತಂದಿದೆ.
ಮಲೆನಾಡು ಗಿಡ್ಡದ ತುಪ್ಪ ಬೇಕಾದರೆ ಮೊದಲೇ ಆರ್ಡರ್ ಮಾಡಬೇಕು ಈ ಶುದ್ಧ ತುಪ್ಪದ ರುಚಿ ಮತ್ತು ಘಮ ನೋಡಿ ಒಂದು ಕೆಜಿ ಮಲೆನಾಡು ಗಿಡ್ಡ ತುಪ್ಪಕ್ಕಾಗಿ ಆರ್ಡರ್ ಮಾಡಿದ್ದೇನೆ.
ಈ ಸಂಸ್ಥೆಯ ಬಗ್ಗೆ ಇಲ್ಲಿ ಮಾರಾಟಕ್ಕೆ ಸಿಗುವ ವಸ್ತುಗಳ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಮತ್ತು ಈ ಸಂಸ್ಥೆಯ ಜೊತೆ ಕೈಜೋಡಿಸಿ ಸಹಕರಿಸುವ ಆಸಕ್ತಿ ಇರುವವರು ನೇರವಾಗಿ ಈ ಸಂಸ್ಥೆಯ ಮುಖ್ಯ ಪ್ರವರ್ತಕರಾದ ನಾಗೇಂದ್ರ ಸಾಗರ್ ಅವರ ಫೋನ್ ನಂಬರ್ 9449501613 ಸಂಪರ್ಕಿಸಬೇಕಾಗಿ ವಿನಂತಿಸುತ್ತೇನೆ.
Comments
Post a Comment