#ಶ್ರೀಯುತ_ದೇವರಾಜ್_ಜೋಗಿ_ನಿವೃತ್ತ_ಡಿಎಫ್ಓ
#90ರ_ದಶಕದಲ್ಲಿ_ನಮ್ಮ_ಭಾಗದಲ್ಲಿ_ದೊಡ್ಡ_ಹೆಸರು
#ಚೋರಡಿ_ರೇಂಜ್_ಫಾರೆಸ್ಟ್_ಆಫೀಸರ್_ಆಗಿ_ಇದ್ದರು
#ಆಗ_ಗಂದ_ಕಳ್ಳ_ಸಾಗಣಿಕೆದಾರರಿಗೆ_ಸಿಂಹಸ್ವಪ್ನ_ಆಗಿದ್ದರು.
#ದಕ್ಷ_ಅಧಿಕಾರಿ_ಮಾನವೀಯ_ಗುಣಗಳ_ಅಧಿಕಾರಿ_ಎಂಬ_ಹೆಸರಿತ್ತು
#ಇವರು_ಉತ್ತರ_ಭಾರತದ_ಗೋರಕಪುರದ_ಸಂತರಾದ
#ಮುಖ್ಯಮಂತ್ರಿ_ಆದಿತ್ಯನಾಥರ_ನಾಥಪಂತದ_ನಮ್ಮ_ರಾಜ್ಯದ
#ಅಖಿಲ_ಕರ್ನಾಟಕ_ನಾಥ_ಪಂತ_ಜೋಗಿ_ಸಮಾಜದ_ರಾಜ್ಯಾದ್ಯಕ್ಷರು
#YogiAdityanathji #devarajjogi #nathapantha #kadrimangalore #jogisamaj
ಶ್ರೀಯುತ ದೇವರಾಜ್ ಜೋಗಿ ನಿವೃತ್ತ ಡಿ ಎಫ್ ಓ ನಿನ್ನೆ ನನ್ನ ಅತಿಥಿಗಳಾಗಿದ್ದರು ಅವರು ಶಿವಮೊಗ್ಗದಿಂದ ಕುಂದಾಪುರದ ಅವರ ಊರಿಗೆ ವಾಪಸ್ ಆಗುವಾಗ ಬಂದಿದ್ದರು.
ದಕ್ಷ ಅಧಿಕಾರಿಗಳಾಗಿದ್ದ ಅವರು ಕಾನೂನು ಪಾಲನೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಸ್ಟ್ರಿಕ್ಟ್ ಆಫೀಸರ್ ಆಗಿದ್ರು ಅವರ ಜೊತೆ ನಮ್ಮ ಭಾಗದ ಫಾರೆಸ್ಟರ್ ಪುರುಷೋತ್ತಮ್ ಇದ್ದರು ಇವರೆಲ್ಲರೂ ಸೇರಿ ಆ ಕಾಲದ ಶ್ರೀಗಂದ ಕಳ್ಳ ಸಾಗಾಣಿಕೆದಾರರಿಗೆ ಸಿಂಹ ಸ್ವಪ್ನವಾಗಿದ್ದರು.
ಅತ್ಯಂತ ಮಾನವೀಯ ಗುಣಗಳುಳ್ಳ ಜನಸಾಮಾನ್ಯರ ಜೊತೆಗೆ ಬೆರೆಯುತ್ತಿದ್ದ ದೇವರಾಜ್ ಒಳ್ಳೆಯ ಅಧಿಕಾರಿಯಂಬ ಹೆಸರು ಪಡೆದಿದ್ದರು.
ನಿವೃತ್ತರಾದ ಮೇಲೂ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ ಇವರ ಸಹೋದರ ಕೂಡ ಡಿಎಫ್ ಓ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉತ್ತರ ಭಾರತದ ಮುಖ್ಯಮಂತ್ರಿಗಳಾದ ಆದಿತ್ಯನಾಥ ಜೋಗಿ ಅವರು ಇವರ ಜೋಗಿ ಸಮಾಜದ ಗೋರಕ್ಪುರದ ಸಂತರು ಈಗ ದೇವರಾಜ್ ಅವರು ಅಖಿಲ ಕರ್ನಾಟಕ ನಾಥ ಪಂಥ ಜೋಗಿ ಸಮಾಜದ ರಾಜ್ಯಾಧ್ಯಕ್ಷರಾಗಿದ್ದಾರೆ.
ಇವರ ಜೊತೆ ಪಶ್ಚಿಮ ಘಟ್ಟದ ಬಗ್ಗೆ ಆನಂದಪುರಂ
ಭಾಗದ ಕಾಡುಗಳ ಬಗ್ಗೆ ಮತ್ತು 2027ರಲ್ಲಿ ನಾಸಿಕ್ ಕುಂಭಮೇಳದಿಂದ ಹೊರಡುವ ಬಾರಾ ಪಂತ್ ಯಾತ್ರೆ ಬಗ್ಗೆ ತುಂಬಾ ಹೊತ್ತು ಚರ್ಚಿಸಿದವು.
Comments
Post a Comment