#ದಮ೯ಪ್ಪ_ಸಾಹೇಬರೆಂದರೆ_ರಾಜಕುಮಾರ್_ಇದ್ದ೦ತೆ. ಅವರ ಜೀವನ ಅಷ್ಟು ಶಿಸ್ತುಬದ್ದ. 1978ರಲ್ಲಿ ನನ್ನನ್ನು ಸಾಗರದ ಮುನ್ಸಿಪಲ್ ಹೈಸ್ಕೂಲ್ ಗೆ 8ನೇ ತರಗತಿ ಇಂಗ್ಲೀಷ್ ಮೀಡಿಯಂ ಗೆ ನನ್ನ ತಂದೆ ಸೇರಿಸಿದ್ದರು, ಅಲ್ಲಿದ್ದ ಮ್ಯಾನೇಜರ್ ನಮ್ಮೂರ ಸಮೀಪದ ನಂದಿಗದ ಗುಂಡಪ್ಪನವರು (ಸಾಗರದ ಗೋಪಾಲರ ದೊಡ್ಡಪ್ಪ) ಬಿಟ್ಟರೆ ಬೇರಾರು ಗೊತ್ತಿರಲಿಲ್ಲ. 7 ನೇ ತರಗತಿ ತನಕ ಇಂಗ್ಲೀಷ್ ಮೀಡಿಯಂ ಓದಿದವರು 8ನೇ ತರಗತಿಗೆ ಇಲ್ಲಿಗೆ ಮತ್ತು ಅನುಕೂಲಸ್ಥರು ಪ್ರಭಾವಿಗಳು ಖಾಸಾಗಿ ಶಾಲೆ ಆದ ಶಿವಲಿಂಗಪ್ಪ ಹೈಸ್ಕೂಲ್ ಗೆ ಸೇರಿಸುತ್ತಿದ್ದರು. ನಮ್ಮ ಊರಿನ ಹೈಸ್ಕೂಲ್ ಶಿಕ್ಷಕರು ನಮ್ಮ ತಂದೆಗೆ ಸಾಗರದ ಮುನ್ಸಿಪಲ್ ಹೈಸ್ಕೂಲ್ ಸೇರಿಸಲು ಸಲಹೆ ನೀಡಿ ಅವರ ಮಗನನ್ನ ಈ ಖಾಸಾಗಿ ಶಾಲೆಗೆ ಸೇರಿಸಿದ್ದರ ಉದ್ದೇಶ ಅನೇಕ ವರ್ಷದ ನಂತರ ಗೊತ್ತಾಯಿತು. ಹಳ್ಳಿಯಲ್ಲಿ ಮಾತೃ ಬಾಷೆ ಕನ್ನಡ ಮಾದ್ಯಮದಲ್ಲಿ ಓದಿ ಶಾಲೆಗೆ ಪ್ರಥಮರಾಗುತ್ತಿದ್ದ ನನಗೆ ಸಾಗರದ 8ನೇ ತರಗತಿ ಒಂದು ರೀತಿ ಉಸಿರುಕಟ್ಟಿಸುತ್ತಿತ್ತು, ಇಂಗ್ಲೀಷ್ ಮಾಧ್ಯಮದಲ್ಲೇ ಒಂದನೇ ತರಗತಿಯಿಂದ ಓದಿ ಬಂದವರ ನಡುವೆ 5 ನೇ ತರಗತಿಯಿಂದ ಮಾತ್ರ ಒಂದು ವಿಷಯ ಇಂಗ್ಲೀಷ್ ಕಲಿಯಲು ಪ್ರಾರ೦ಬಿಸಿ 8 ನೇ ತರಗತಿಗೆ ದಿಡೀರ್ ಇಂಗ್ಲೀಷ್ ಮಾಧ್ಯಮಕ್ಕೆ ಬಂದಿದ್ದು ನನಗೆ ಕೀಳರಮಿ ಉಂಟು ಮಾಡಿತ್ತು. ಮನೆಯ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಆ ಪರಿಸ್ಥಿತಿಯಲ್ಲಿ ನನ್ನದು ಅಂಗಿ ಚಡ್ಡಿ ಮತ್ತು ಹವಾಯಿ ಚಪ...