Blog number 1051. ದೇವನೂರು ಮಹಾದೇವ ಮೈಸೂರು ದಸರಾ ಉದ್ಘಾಟನೆಯ ಆಮಂತ್ರಣ ಸ್ವೀಕರಿಸಲಿಲ್ಲ ಆದರೆ 2016ರ ಕುವೆಂಪು ರಾಷ್ಟ್ರಪ್ರಶಸ್ತಿ ಸ್ವೀಕರಿಸಿದರು.
29 ಡಿಸೆಂಬರ್ 2016ರಂದು ನಮ್ಮ ಜಿಲ್ಲೆಯ ಕುವೆಂಪು ಮನೆ ಕುಪ್ಪಳ್ಳಿಯಲ್ಲಿ ಸಾಹಿತಿ ಸಾಮಾಜಿಕ ಹೋರಾಟಗಾರ ದೇವನೂರು ಮಹಾದೇವರಿಗೆ ಕುವೆಂಪು ರಾಷ್ಟ್ರ ಪ್ರಶಸ್ತಿ ನೀಡಲಾಯಿತು. 2016 ನವೆ೦ಬರ 4ರಂದು ನಾನು ಅದರೊಂದಿಗೆ ಪೋನ್ನಲ್ಲಿ ಮಾತಾಡಿದಾಗ ಅವರು ಕುವೆಂಪು ಪ್ರಶಸ್ತಿ ಸ್ವೀಕರಿಸುವುದಾಗಿ ತಿಳಿಸಿದ್ದರು. ಕುವೆಂಪು ಚಿಂತನೆ, ಆಚಾರ, ವಿಚಾರ ಮತ್ತು ಬರವಣಿಗೆಗೆ ಅತ್ಯಂತ ಸಮೀಪ ಅನ್ನಿಸುವ ದೇವನೂರು ಮಹಾದೇವರಿಗೆ ಕುವೆಂಪು ಪ್ರಶಸ್ತಿ ನೀಡಲು ತೀಮಾ೯ನ ತೆಗೆದುಕೊಂಡು ಪ್ರಶಸ್ತಿ ನೀಡಿದ ಸಂಬಂದ ಪಟ್ಟ ಸಮಿತಿಗೆ 100ಕ್ಕೆ 100 ಅಂಕ ನೀಡುತ್ತೇನೆ. ಈ ಪ್ರಶಸ್ತಿ ಸ್ಥಾಪಿಸಿದ ದಾನಿ ಚಂದ್ರಶೇಖರ್ ಕುಟುಂಬಕ್ಕೆ ಮಲೆನಾಡಿನ ಕುವೆಂಪು ಹಾಗೂ ತೇಜಸ್ವಿ ಅಭಿಮಾನಿಗಳ ಪರವಾಗಿ ಕೃತಜ್ಞತೆ ಮತ್ತು ಅಭಿನಂದನೆ ಈ ಮೂಲಕ ಸಲ್ಲಿಸುತ್ತೇನೆ. 4- ನವೆಂಬರ್ -2016. ಇವತ್ತು ಬೆಳಿಗ್ಗೆ ದೇವನೂರು ಮಹದೇವರಿಂದ ಪೋನ್ ಬಂದಿತ್ತು, ಮೈಸೂರಿನ ಗೆಳೆಯ ಕರುಣಾಕರ್ ಈ ಬಗ್ಗೆ ಮೊದಲೇ ತಿಳಿಸಿದ್ದರು.ಹಲೋ ನಾನು ದೇವನೂರು ಮಹಾದೇವ ಅಂದ ತಕ್ಷಣ ನಮಸ್ಕಾರ ಸಾರ್ ಒಂದು ನಿಮಿಷ ಅಂತ ಹೇಳಿ ರೆಕಾಡ೯ರ್ ಆನ್ ಮಾಡಿದೆ ನಂತರ ನಡೆದ ನಮ್ಮ ಸಂಬಾಷಣೆ........ ನೀವು ಬರೆದ ಕುಸುಮಬಾಲೆ ನನಗೆ ಓದಿ ಅಥ೯ ಮಾಡಿಕೊಳ್ಳಲಾಗಲೇ ಇಲ್ಲ ಅಂದೆ, ಅದು ಒಂದು ಕಥೆ ಬೇರೆ ಯಾರಿಂದಲಾ...