ನೂತನ_ಮುಖ್ಯಮಂತ್ರಿ_ಡಿ_ಕೆ_ಶಿವಕುಮಾರ್_ಸರ್ಕಾರದಲ್ಲಿ_ಶಿವಮೊಗ್ಗ_ಜಿಲ್ಲೆಯ_ರಾಜಕಾರಣ. ಆರ್. ಎಂ. ಮಂಜುನಾಥ ಗೌಡರು, ಎಂ.ಶ್ರೀಕಾಂತ್ ಮತ್ತು ಗೋಣಿಮಾಲತೇಶರಿಗೆ ಸೂಕ್ತ ಸ್ಥಾನಮಾನ ಲಭಿಸೀತೆ? ... #ಯಡ್ಯೂರಪ್ಪ ಅವರ ಸರ್ಕಾರ ಇದ್ದಾಗ ಶಿವಮೊಗ್ಗ ಜಿಲ್ಲೆಯಲ್ಲಿ ಅವರ ಪಕ್ಷದ ಹೆಚ್ಚಿನ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಿದ್ದರು. ಕಾಂಗ್ರೇಸ್ ಪಕ್ಷದಲ್ಲಿ ಅವರ ಪಕ್ಷ ಅಧಿಕಾರಕ್ಕೆ ಬಂದಾಗೆಲ್ಲ ಒಬ್ಬರ ಕಾಲು ಒಬ್ಬರು ಎಳೆದು ಸರ್ಕಾರದಲ್ಲಿ ಯಾರೂ ಸೂಕ್ತ ಸ್ಥಾನಮಾನ ಪಡೆಯದಂತೆ ತಪ್ಪಿಸಲು ಹೋರಾಟಗಳೇ ನಡೆಯುತ್ತದೆ ಇದರಿಂದ ಪಕ್ಷದ ಸಂಘಟನೆಗೆ ಹೆಚ್ಚು ನಷ್ಟ ಉಂಟಾಗುತ್ತದೆ. ಉಪಮುಖ್ಯಮಂತ್ರಿ ಆಗಿದ್ದ ಡಿ.ಕೆ.ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ ಈಗ ಶಿವಮೊಗ್ಗ ಜಿಲ್ಲೆಯ ರಾಜಕಾರಣದಲ್ಲಿ ಏನೆಲ್ಲ ಬದಲಾಗ ಬಹುದು ಎಂಬ ಕುತೂಹಲ ಇದೆ. ಮೊದಲಿನಿಂದಲೂ ಡಿ.ಕೆ. ಶಿವಕುಮಾರ್ ಅವರ ಆಪ್ತರಾಗಿರುವ #ಆರ್_ಎಂ_ಮಂಜುನಾಥಗೌಡರು DCC ಬ್ಯಾಂಕ್ ಅಧ್ಯಕ್ಷರು ಮತ್ತು ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ. ಮುಂದೆ ಅವರು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಬೇಕು ಮತ್ತು ವಿಧಾನ ಪರಿಷತ್ ಸದಸ್ಯರಾಗಿ ಅವರನ್ನ ನೇಮಕ ಮಾಡ ಬೇಕು ಎಂದು ಅವರ ಅಭಿಮಾನಿಗಳು ಬಹಿರಂಗವಾಗಿ ಒತ್ತಾಯಿಸುತ್ತಿದ್ದಾರೆ. ಜಾತ್ಯಾತೀತ ಜನತಾದಳದ ಜಿಲ್ಲಾ ಅಧ್ಯಕ...