#1980ರ ಪೆಬ್ರವರಿ 16ರಲ್ಲಿ ನಡೆದ ಪೂಣ೯ ಸೂಯ೯ ಗ್ರಹಣ ನಾನು ಜೀವಮಾನ ಮರೆಯುವುದಿಲ್ಲ ಕಾರಣ ಬರಿಗಣ್ಣಲ್ಲಿ ಸೂಯ೯ ಗ್ರಹಣ ನೋಡಿ ನನ್ನ ಬಲಗಣ್ಣ ಅಕ್ಷಿಪಟಲ ಹರಿದು ಹೋಗಿತ್ತು# ಮೊದಲ ಚಿತ್ರ ಪತ್ರಕತ೯ ತಲವಾಟದ ರಾಘವೇ೦ದ್ರ ಶಮ೯ರು ತೆಗೆದ ಆತ್ಯುತ್ತಮ ಚಿತ್ರ, ಇನ್ನೊಂದು ಗ್ರಹಣ ಕಾಲದಲ್ಲಿ ಆನಂದಪುರದ ಬಸ್ ನಿಲ್ದಾಣದ ಎಲ್ಲಾ ಅಂಗಡಿ ಮಳಿಗೆ ಬಂದ್ ಆಗಿರುವುದು ಸೂಯ೯ ಗ್ರಹಣದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಭಯ ಹೆಚ್ಚಾಗುತ್ತಿದೆ, ಟಿವಿ, ಮೊಬೈಲ್ಗಳ ಈ ಮುಂದುವರಿದ ಆದುನಿಕ ಭಾರತದಲ್ಲಿ ವಿಜ್ಞಾನದ ಹೆಚ್ಚಿನ ತಿಳುವಳಿಕೆ ಉ೦ಟಾಗುತ್ತದೆ ಮತ್ತು ಮೂಡನಂಬಿಕೆಗಳು ನಶಿಸುತ್ತದೆ ಎಂಬ ಭರವಸೆ ಸುಳ್ಳಾಗಿದೆ. ಟಿವಿಗಳ ಚಾನಲ್ ಗಳ ಜೋತಿಷಿಗಳು ಹುಟ್ಟು ಹಾಕುವ ವಿವಿದ ಆಚರಣೆಯ ಹೆಸರಲ್ಲಿ ಬೀತಿ ಜನ ಸಾಮಾನ್ಯರ ಜೀವನ ಕ್ರಮದಲ್ಲಿ ಅನೇಕ ಮೌಡ್ಯಕ್ಕೆ ಕಾರಣವಾಗಿದೆ. 1980ರ ಪೆಬ್ರುವರಿ 16ರOದು ನಡೆದ ಖಗ್ರಾಸ ಸೂಯ೯ಗ್ರಹಣದ ದಿನ ನೆನಪಿಗೆ ಬಂತು ಅವತ್ತು ಶನಿವಾರ ಆದರೂ ಶಾಲಾ ಕಾಲೇಜುಗಳಿಗೆ ರಜಾ ನೀಡಿದ್ದರು, ದಕ್ಷಿಣ ಭಾರತದಲ್ಲಿ ಸಂಪೂಣ೯ ಗ್ರಹಣ ಗೋಚರ ಆಗುವುದರಿಂದ ದೇಶ ವಿದೇಶದ ಖಗೋಳ ವಿಜ್ಞಾನಿಗಳು ಬಂದಿದ್ದರು ಅವತ್ತಿನ ನಿತ್ಯ ಪತ್ರಿಕೆ ಮತ್ತು ರೇಡಿಯೋಗಳಲ್ಲಿ ಸೂಯ೯ ಗ್ರಹಣದ ಬಗ್ಗೆ ವೈಜ್ಞಾನಿಕ ಸಲಹೆ ಸಂವಾದಗಳು ಸುದ್ದಿ ಆಗುತ್ತಿತ್ತು. ಬರಿಗಣ್ಣಲ...