Skip to main content

Posts

Showing posts with the label SANTHOSH RICEMILL SUBBA RAO

ಆನಂದಪುರದ ಘನತೆ ಹೆಚ್ಚಿಸಿದ್ದ ಸಂತೋಷ್ ರೈಸ್ ಮಿಲ್ ಸುಬ್ಬರಾವ್

#ದುಗ೯ಮ ಹಳ್ಳಿಯಲ್ಲಿ ಜನಿಸಿ ದೊಡ್ಡ ಉದ್ದಿಮೆದಾರರಾಗಿ ಆನಂದಪುರಂನ ಘನತೆ ಹೆಚ್ಚಿಸಿದ್ದ ಸುಬ್ರಾವ್#   ಆನಂದಪುರಂನ ಸಂತೋಷ್ ರೈಸ್ ಇಂಡಸ್ಟ್ರಿಸ್ ಬೃಹತ್ ಅಕ್ಕಿ ಅವಲಕ್ಕಿ ಗಿರಣಿ ಮತ್ತು ಸಂತೋಷ್ ಆಗ್ರೋ ಎಂಬ ಬೃಹತ್ ಕೋಲ್ಡ್ ಸ್ಟೋರೇಜ್ ಗಳ ಮಾಲಿಕರಾದ ಶ್ರೀ ಸುಬ್ಬ ರಾವ್ ಇವತ್ತು ಇಹಲೋಕ ತ್ಯಜಿಸಿದ್ದಾರೆ.   ಇವರ ಜೀವನದ ಹಾದಿ ಅತ್ಯಂತ ದುಗ೯ಮ, ಸಾಗರ ತಾಲ್ಲೂಕಿನ ಆನ೦ದಪುರಂ ಹೋಬಳಿಯ ಬಳ್ಳಿ ಬೈಲು ಗ್ರಾಮದ ಕೊಂಗನಾಸಳ್ಳಿ ಎಂಬ ಹಳ್ಳಿಯ ಮಧ್ಯಮ ಹವ್ಯಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ಇವರು ಆನಂದಪುರಂನಲ್ಲಿ ವಿದ್ಯಾ ಮಂತ್ರಿ ಬದರಿನಾರಾಯಣ್ ಅಯ್ಯOಗಾರ್ ಕುಟುಂಬದವರು ಪ್ರಾರಂಬಿಸಿದ ಪಿಯುಸಿ ತರಗತಿಯ ಪ್ರಥಮ ಬ್ಯಾಚ್ ನಲ್ಲಿ ಸೈನ್ಸ್ ನಲ್ಲಿ ಉತ್ತಿಣ೯ರಾದ ಏಕೈಕ ವಿದ್ಯಾಥಿ೯ ಸುಬ್ಬ ರಾವ್.    ಕೊಂಗನಾಸಳ್ಳಿಯಿ೦ದ ಆನಂದಪುರಕ್ಕೆ ರಸ್ತೆ ಇರಲಿಲ್ಲ, ದಟ್ಟ ಕಾಡು ಹಾಗಾಗಿ ಸುಬ್ಬರಾವ್ ಆನಂದಪುರದ ಅಗ್ರಹಾರದ ರಾಮ ಮಂದಿರ ಮತ್ತು ಅದರ ಸಮೀಪ ಬಾಡಿಗೆ ಕೊಠಡಿಯಲ್ಲಿ ವಿದ್ಯಾಭ್ಯಾಸ ಮಾಡಿದವರು.   ಊರಿನ ಹಿರಿಯರಾದ ಅದ್ಯಾಪಕರಾದ ಶ್ರೀ ಬೋಜರಾಜ್ ಅಯ್ಯOಗಾರ್, ಆನಂದಪುರದ ಅಭಿವೃದ್ಧಿಗೆ ಕಾರಣಕತ೯ರಾದ ಗಾಂಧಿವಾದಿ ಶಿಕ್ಷಕ  ಎಸ್.ಆರ್.ಕೃಷ್ಣಪ್ಪ ಇವರಿಗೆ ಅನೇಕ ರೀತಿ ಸಹಕಾರ ನೀಡಿದವರು. ಪಿಯುಸಿ ಓದುವಾಗ ನಮ್ಮ ಅಣ್ಣ ಕೆ.ನಾಗರಾಜ್ ಇವರ ಕ್ಲಾಸ್ ಮೇಟ್ ಹಾಗಾಗಿ ಕೆಲ ಸಂಜೆ ನಮ್ಮ ಮನೆಗೆ  ಇವರು ಬರುತ್...