Blog number 1945.ಮಹಾತ್ಮಾ ಗಾಂಧೀಜಿ ಜಗತ್ತಿನ ಅಹಿಂಸಾವಾದಿಗಳಿಗೆ ನೀಡಿದ ಹೋರಾಟದ ಅಸ್ತ್ರ ಸತ್ಯಾಗ್ರಹ ಇವತ್ತು ಮಹಾತ್ಮಾ ಗಾಂಧಿ ವಿರೋದಿಸುವರೂ ಬಳಸುವ ಅಸ್ತ್ರ ಈ ಮೂಲಕ ಮಹಾತ್ಮ ಗಾಂಧಿ ದಾರಿಯಲ್ಲಿ ಸಾಗುವ ಅವರ ವಿರೋದಿಗಳು ಇದು ಸತ್ಯಮೇವಾ ಜಯತೆ ಅಲ್ಲವೇ?
#ಮಹಾತ್ಮಾಗಾಂಧೀಜಿ_ಜಗತ್ತಿಗೆ_ನೀಡಿದ_ಪ್ರತಿಭಟನೆಯ_ಅಸ್ತ್ರ #ಅಹಿಂಸಾ_ಮಾಗ೯ದ_ಸತ್ಯಾಗ್ರಹ_ಇದಕ್ಕೆ_ಕಾರಣವಾಗುವ_ಅವರ_ಜೀವನದ_ಅನೇಕ_ಘಟನೆಗಳು #ಡರ್ಬಾನ್_ನ್ಯಾಯಾಲಯದಲ್ಲಿ_1893ರ_ಘಟನೆ #ಗಾಂಧೀಜಿ_ಪೇಟಾ_ಧರಿಸಿದ್ದರಿಂದ_ಕೋರ್ಟ್_ಪ್ರವೇಶ_ನಿರಾಕರಿಸಲಾಗಿತ್ತು #ಇದನ್ನು_ಪ್ರತಿಭಟಿಸಿ_ಗಾಂಧೀಜಿ_ನ್ಯಾಯಾಲಯದಿಂದ_ಹೊರನಡೆಯುತ್ತಾರೆ. #ಗಾಂಧೀಜಿ_ವಿರೋಧಿಸುವವರೂ_ಗಾಂಧೀಜಿಯ_ಈ_ಅಸ್ತ್ರ_ಬಳಸಿ_ಗಾಂಧೀ_ಹಾದಿಯಲ್ಲಿ_ನಡೆಯುತ್ತಾರೆ. #ಇದು_ಸತ್ಯ_ಮೇವ_ಜಯತೆ #ಗಾಂಧೀಜಿ_ವಿರೋಧಿಸಿ_ಕೆಟ್ಟದಾಗಿ_ಪೋಸ್ಟ್_ಮಾಡಿದ್ದ_ಯುವಕ #ಗಾಂಧೀಜಿ_ಆತ್ಮಚರಿತ್ರೆ_ಓದೇ_ಇಲ್ಲ #ಗಾಂಧೀಜಿ_ಇಹಲೋಕ_ತ್ಯಜಿಸಿದ_55_ವರ್ಷದ_ನಂತರ_ಜನಿಸಿದಾತ. 1893 ರಲ್ಲಿ ಗಾಂಧೀಜಿ ದಕ್ಷಿಣ ಆಫ್ರಿಕಾದ ಶ್ರೀಮಂತ ವರ್ತಕರಾದ ದಾದಾ ಅಬ್ದುಲ್ಲಾ & ಕಂಪನಿ ನಟಾಲ್ ಇವರ ವ್ಯಾಜ್ಯ ಬಗೆಹರಿಸಲು ಅವರ ಆಹ್ವಾನದ ಮೇರೆಗೆ ಆಫ್ರಿಕಾಗೆ ಹೋಗುತ್ತಾರೆ. ಡರ್ಬಾನ್ ನ ನ್ಯಾಯಾಲಯಕ್ಕೆ ದಾದಾ ಅಬ್ದುಲ್ಲಾರ ಜೊತೆಗೆ ಹೋಗಿ ನ್ಯಾಯಾಲಯದಲ್ಲಿ ವಕೀಲರಿಗೆ ಮೀಸಲಿಟ್ಟ ಆಸನದಲ್ಲಿ ಕುಳಿತು ಕೊಳ್ಳುತ್ತಾರೆ. ಅಲ್ಲಿನ ಮ್ಯಾಜಿಸ್ಟ್ರೇಟರ್ (ಯುರೋಪಿಯನ್ ) ಗಾಂಧೀಜಿಗೆ ನಿಮ್ಮ ಪೇಟಾ (ಟರ್ಬನ್) ಹೊರಗಿಟ್ಟು ಬನ್ನಿ ಅನ್ನುತ್ತಾರೆ, ಗಾಂಧೀಜಿಗೆ ಇದು ತಕ್ಷಣ ಅರ್ಥವಾಗುವುದಿಲ್ಲ, ಮ್ಯಾಜಿಸ್ಟ್ರೇಟರ್ ತಮ್ಮ ಕೈ ಬೆರಳು ಗಾಂಧೀಜಿಗೆ ತೋರಿಸಿ ನಿಮಗೆ ಹೇಳುತ್ತಿರುವುದಾಗಿ ತಿಳಿಸಿದಾಗ ಗಾಂಧೀಜಿ ಸುತ್ತಲೂ ನ...