#ಕೆರೆಗೆ_ಹಾರ_ಭಾಗಿರಥಿ_ಕಲ್ಲನಹಳ್ಳಿ_ಮಲ್ಲನಗೌಡನ_ಕಿರಿ_ಸೊಸೆ #ಗಂಡ_ಮಾದೇವ_ದಂಡಿನಲ್ಲಿರುತ್ತಾನೆ #ನೀರಿಲ್ಲದ_ಕೆರೆಗೆ_ಭಾಗಿರಥಿ_ಹಾರವಾಗುತ್ತಾಳೆ #ಸತಿಭಕ್ತಿಯಿಂದ_ತನ್ನ_ಜೀವ_ತ್ಯಾಗ_ಮಾಡುವ_ಪತಿ #ಇಂತಹ_ಅನೇಕ_ಕೆರೆಗೆ_ಹಾರದ_ಜನಪದ_ಕಥೆಗಳಿದೆ #ಶಿಕಾರಿಪುರದ_ಸಮೀಪದ_ಮದಗದ_ಕೆರೆಗೂ_ಇಂತಹ_ಕಥೆ_ಇದೆ. #ಮಾಯದಂತ_ಮಳೆ_ಬಂತಮ್ಮ_ಎಂಬ_ಪ್ರಸಿದ್ಧ_ಹಾಡು_ಜನ_ಮಾನಸದಲ್ಲಿದೆ. ಕೆರೆಗೆ ಹಾರ ಪದ್ಯ ಶಾಲಾ ದಿನದಿಂದಲೂ ಇವತ್ತಿನ ಈ ಕ್ಷಣದಲ್ಲೂ ನೆನೆಪಿಸಿಕೊಂಡರೆ ಕಣ್ಣು ನೀರಾಗದೇ ಇರುವುದಿಲ್ಲ. ಕಲ್ಲನಹಳ್ಳಿ ಮಲ್ಲನಗೌಡ ಊರ ಜನರಿಗಾಗಿ ಕಟ್ಟಿಸಿದ ಕೆರೆ ನೀರು ತುಂಬುವುದಿಲ್ಲ ಇದಕ್ಕೆ ಪರಿಹಾರ ಮಲ್ಲನಗೌಡನ ಹಿರಿ ಸೊಸೆ ಕೆರೆಗೆ ಹಾರವಾಗಿ ನೀಡಿದರೆ (ಬಲಿ) ಕೆರೆ ತುಂಬುವುದಾಗಿ ಜ್ಯೋತಿಷಿಗಳು ತಿಳಿಸುತ್ತಾರೆ ಆದರೆ ಹಿರಿಸೊಸೆ ಹಾರವಾಗಿ ನೀಡಲು ಕುಟುಂಬದ ಹಿರಿತನ ಅಡ್ಡಿಯಾಗುತ್ತದೆ ಅದರಂತೆ ಕಲ್ಲನಹಳ್ಳಿ ಮಲ್ಲನಗೌಡನ ಕಿರಿ ಸೊಸೆ ಭಾಗೀರಥಿ ಕೆರೆಗೆ ಹಾರವಾಗುತ್ತಾಳೆ. ಕೆರೆ ತುಂಬುತ್ತದೆ ದೂರದಲ್ಲಿ ಸೈನ್ಯದಲ್ಲಿದ್ದ ಭಾಗೀರಥಿ ಪತಿ ಮಾದೇವನಿಗೆ ದುಃಸ್ವಪ್ನಗಳು ಬೀಳುತ್ತದೆ ಇದರಿಂದ ಆತಂಕಗೊಂಡ ಮಾದೇವ ಗಡಿಬಿಡಿಯಲ್ಲಿ ಜೀನು ಹಾಕದ ಬತ್ತಲೆ ಕುದುರೆ ಏರಿ ಬರುತ್ತಾನೆ ಅಲ್ಲಿ ಮಾದೇವನ ತಾಯಿ ನಿನ್ನ ಪತ್ನಿ ಭಾಗಿರಥಿ ತವರಿಗೆ ಹೋಗಿದಾಳೆಂದು ತಿಳಿಸಿದಾಗ, ಭಾಗಿರಥಿಯ ತವರಿಗೆ ಹೋಗುತ್ತಾನೆ ಅಲ್ಲಿ ಮಾದೇವನ ಅತ್ತೆ ಅವಳು ಗೆಳತಿ ಮ...