#ಜOಬಿಟ್ಟಿಗೆ_ಕಲ್ಲು_ಕೆತ್ತುವ_ಯOತ್ರ_ಬಾಡಿಗೆಗೆ_ಬಂದಿದೆ. ಗುಜರಾತಿನ ಕರಾವಳಿಯಿ೦ದ ಕೇರಳ ಕರಾವಳಿವರೆಗೆ ಗೋವಾ ಕನಾ೯ಟಕ ರಾಜ್ಯ ಸೇರಿ ಈ ಕೆಂಪು ಕಲ್ಲು (ಜಂಬಿಟ್ಟಿಗೆ / ಇಂಗ್ಲೀಷ್ ನಲ್ಲಿ Latreat stone) ಸ್ಥಳಿಯವಾಗಿ ಸುಲಭವಾಗಿ ಸಿಗುವ ಕಲ್ಲು, ಇದರಿಂದ ಕೋಟಿ, ದೇವಸ್ಥಾನ, ಕೊಳ, ಸೇತುವೆ, ಕೆರೆ ಕಟ್ಟಿ ಮತ್ತು ಬಾವಿಗಳನ್ನ ಒ೦ದು ಕಾಲದಲ್ಲಿ ನಿಮಿ೯ಸಿದ್ದನ್ನು ನೋಡುತ್ತೇವೆ. ಈಗ ದೈಹಿಕ ಶ್ರಮ ಮಾಡುವುದು ಕಡಿಮೆ ಆದ ಮೇಲೆ ಈ ಕಲ್ಲಿನ ಬಳಕೆ ಕ್ರಮೇಣ ಕಡಿಮೆ ಆಗುತ್ತಿದೆ, ಇದರ ಬಾರ 30 kg ಗೂ ಹೆಚ್ಚಾದ್ದರಿಂದ ಕಟ್ಟಡ ಕಟ್ಟುವವರೂ ಕೂಡ ಇದನ್ನ ಇಷ್ಟ ಪಡುವುದು ಕಡಿಮೆ ಆಗಿದೆ. ಕಚ್ಚಾ ಕಲ್ಲು ತಂದ ನಂತರ ಈ ಕಲ್ಲಿನ ನಾಲ್ಕು ಮುಖ ಸರಿಯಾಗಿ ಕೆತ್ತಿ ಸಮತಟ್ಟು ಮಾಡುವ ಕೆಲಸ ಇದೆ, ಇದನ್ನ ಸರಿಯಾದ ಅನುಭವಿ ಕೆಲಸಗಾರ ಮಾಡಿದರೆ ಮಾತ್ರ ಕಟ್ಟಡ ಭದ್ರ ಮತ್ತು ಸಿಮೆಂಟ್ ಮರಳು ಮಿತವ್ಯಯ ಇಲ್ಲದಿದ್ದರೆ ಕಟ್ಟಡ ಸರಿ ಆಗುವುದಿಲ್ಲ ಈಗ ಈ ಕಲ್ಲು ಕೆತ್ತುವ ನುರಿತ ಕೆಲಸಗಾರರ ಕೊರತೆ ಕೂಡ ಈ ಕಲ್ಲಿನ ಬಳಕೆ ಕಡಿಮೆಗೆ ಕಾರಣವಾಗಿದೆ. ನನ್ನ ಕಟ್ಟಡದಲ್ಲಿ ಹೊಸ ತಂತ್ರಜ್ಞಾನದ ಲೈಟ್ ವೈಟ್ ಬ್ರಿಕ್ಸ್ ಬಳಸಿದ್ಧರಿಂದ ನಮ್ಮ ಊರಲ್ಲೇ ಸಿಗುವ ಜಂಬಿಟ್ಟಿಗೆ ಖರೀದಿಸಿರಲಿಲ್ಲ ಆದರೆ ಲಿಪ್ಟ್ ರೂಂ ಅದ೯ ಜಂಬಿಟ್ಟಿಗೆಯಲ್ಲಿ ಕಟ್ಟಿದ್ದರಿಂದ ಒಂದು ಲಾರಿ ಜಂಬಿಟ್ಟಿಗೆ ತರಿಸಿದ್ದೆ ಆದರೆ ಇದನ್ನ ಕೆತ್ತಿ ...