ಭಾಗ - 46, ಆನಂದಪುರಂ ಇತಿಹಾಸ, ಹುಲಿ ಮಾಂಸ ತಿಂದ, ಆನಂದಪುರಂಗೆ ಅತಿ ದೊಡ್ಡ ಕಟ್ಟಡ ಕಟ್ಟಿದ ಆ ಕಾಲದ ಆನಂದಪುರಂನ ಆಂಗ್ರಿ ಯಂಗ್ ಮ್ಯಾನ್ ನಲ್ಲಪ್ಪ.
#ಭಾಗ_46. #ಆನಂದಪುರಂ_ಇತಿಹಾಸ #ನಲ್ಲಪ್ಪ_ಒಂದು_ಕಾಲದ_ಆನಂದಪುರಂ_ಆಂಗ್ರಿ_ಯಂಗ್_ಮ್ಯಾನ್. #ಆನಂದಪುರಂ_ಹೆದ್ದಾರಿಯಲ್ಲಿನ_ಆಕಾಲದ_ಬೃಹತ್_ಕಟ್ಟಡದ_ನಿರ್ಮಾತೃ. #ಹುಲಿ_ಮಾ೦ಸ_ತಿಂದು_ತೇಗಿದ_ಸಾಹಸಿ. #ಕೋಪಿಷ್ಟ_ಅಷ್ಟೇ_ಹೃದಯವಂತ_ವ್ಯಕ್ತಿ ನಲ್ಲಪ್ಪ ದೂರದ ಚಿಕ್ಕಬಳ್ಳಾಪುರ ತಾಲ್ಲೂಕಿನ ಸೋಗನಹಳ್ಳಿಯಿಂದ ಆನಂದಪುರಂಗೆ ಕ್ಷೌರಿಕ ವೃತ್ತಿಗೆ ಬಂದ ತೆಲುಗು ಮಾತೃ ಭಾಷೆಯ ಕುಟುಂಬದವರು. ಹುಟ್ಟು ಸಾಹಸಿ, ಯಾವುದಕ್ಕೂ ಯಾರಿಗೂ ಹೆದರದ ಆದರೆ ಮಾನವೀಯ ಗುಣಗಳುಳ್ಳ ಹೃದಯವಂತರು. ಇವರಿಗಿಂತ ಮೊದಲು ಆನಂದಪುರಂನ ಮೂಲ ಕ್ಷೌರಿಕರು ಕನ್ನಡ ಮಾತೃ ಭಾಷೆಯ ಮಲಂದೂರಿನ ಮಂಜಣ್ಣ ಮತ್ತು ಪಕೀರಣ್ಣ ಸಹೋದರರು ಇದ್ದರು. ನಲ್ಲಪ್ಪನವರ ಜೊತೆ ಅವರ ತಮ್ಮ ಕೊಂಡಪ್ಪರ ಕುಟುಂಬವನ್ನು ಕರೆತರುತ್ತಾರೆ ನಂತರ ನಾರಾಯಣಪ್ಪರ ಕುಟುಂಬ ಕೂಡ ನಲ್ಲಪ್ಪನವರೆ ಕರೆ ತರುತ್ತಾರೆ. ಆ ಕಾಲದಲ್ಲಿ ಚೆನ್ನಪ್ಪ ಶೆಟ್ಟರ (ಮಲ್ಲೇಶಿ ತಂದೆ) ಮನೆಯೇ ಅತ್ಯಂತ ದೊಡ್ಡ ಮನೆ ಮತ್ತು ಅವರು ತಲ ತಲಾಂತರದಿಂದ ಆನಂದಪುರಂನ ಹಳೆಯ ಲೇವಾದೇವಿದಾರರು. ಆದರೆ ದೂರದ ಚಿಕ್ಕಬಳ್ಳಾಪುರದಿಂದ ಬಂದು ಆನಂದಪುರಂನಲ್ಲಿ ನೆಲೆಸಿ ಆನಂದಪುರಂನ ಬೆಂಗಳೂರು ಹೊನ್ನಾವರ ರಸ್ತೆಯ ಮುಖ್ಯ ರಸ್ತೆಯಲ್ಲಿ ಚೆನ್ನಪ್ಪ ಶೆಟ್ಟರ ಮನೆಗಿಂತ ಎರೆಡು ಪಟ್ಟು ದೊಡ್ಡದಾದ ಮನೆ, ಸಲೂನ್ ಮತ್ತು ಬಾಡಿಗೆ ರೂಂಗಳ ದೊಡ್ಡ ಕಟ್ಟಡ ಕಟ್ಟಿದ್ದರು. ...