Skip to main content

Posts

Showing posts with the label House Number 3 Krishnamenan Marg Delh was Ex Minister George Fernandes govt bungalow but main gate of house was disappeared why?i

Blog number 1943. ನಂ 3 ಕೃಷ್ಣಮೆನನ್ ಮಾರ್ಗ ದೆಹಲಿಯ ಜಾರ್ಜ್ ಪನಾ೯ಂಡೀಸರ ಮನೆ ಈ ಮನೆಯ ಗೇಟು ನಾಪತ್ತೆ ಆಗಿದ್ದ ಪ್ರಕರಣಕ್ಕೆ ಕಾರಣ ಗೊತ್ತಾ? ಅದು ಜಾರ್ಜರು ಆಡಳಿತಶಾಹಿಯ ಅಂದಾನುಕರಣೆಗೆ ನೀಡಿದ ಪ್ರಹಾರ ಮತ್ತು ದಾಖಲಿಸಿದ ಪ್ರತಿಭಟನೆಯ ಹೊಸ ಮಾದರಿ.

#ದೇಶದ_ರಕ್ಷಣಾ_ಮಂತ್ರಿ_ಆಗಿದ್ದಾಗಲೂ #ದೆಹಲಿಯ_ಜಾಜ್೯ಪರ್ನಾಂಡೀಸರ_ಮನೆಯ_ಮೈನ್_ಗೇಟ್_ಯಾಕೆ_ಇರಲಿಲ್ಲ? #ಸುಮಾರು_ಇಪ್ಪತ್ತೊಂಬತ್ತು_ವರ್ಷ_ಗೇಟ್_ಇಲ್ಲದ_ಮನೆಯಲ್ಲಿ_ಜಾರ್ಜ್_ವಾಸವಾಗಿದ್ದರು. #ಇದಕ್ಕೊಂದು_ಕಾರಣವಿದೆ_ಅಲ್ಲೊಂದು_ಪ್ರತಿಭಟನೆ_ಇದೆ #ರೈಲ್ವೆಮಂತ್ರಿ_ರಕ್ಷಣಾಮಂತ್ರಿ_ಆದರೂ_1990_ರಿಂದ_2019_ಜನವರಿ_ಕೊನೆಯವರೆಗೆ_ಗೇಟು_ಇರಲೇ_ಇಲ್ಲ #ನಾನು_ಕಾಗೋಡು_ಹೋರಾಟದ_ನೇತಾರ_ಗಣಪತಿಯಪ್ಪ_ಗೆಳೆಯ_ಅಮೀರ್_2001ರಲ್ಲಿ_ಜಾರ್ಜ್_ಮನೆಯ_ಇಲ್ಲದ_ಗೇಟಿನ_ಎದರು_ತೆಗೆದ_ಪೋಟೋ     ಅದು 1990 ಆಗ ಜಾಜ್೯ ಬಿಹಾರದಿಂದ ಲೋಕಸಭೆಗೆ ಆಯ್ಕೆ ಆಗಿದ್ದರು, ತುತು೯ ಪರಿಸ್ಥಿತಿ ನಂತರದ ಸಕಾ೯ರದಲ್ಲಿ ಕೇಂದ್ರ ಮಂತ್ರಿ ಆಗಿದ್ದಾಗಿಂದ ಅವರು ವಾಸಿಸುತ್ತಿದ್ದು ನಂ 3 , ಕೃಷ್ಣ ಮೆನನ್ ಮಾಗ್೯ ನವದೆಹಲಿ.  ಒಂದು ದಿನ ಜಾಜ್೯ರು ತಮ್ಮ ನೀಲಿ ಬಣ್ಣದ ಪಿಯಟ್ ಕಾರು ಚಲಾಯಿಸಿಕೊಂಡು ಪಾಲಿ೯ಮೆಂಟ್ ನಿಂದ ಬಂದಾಗ ಜಾಜ್೯ರ ಮನೆ ಗೇಟು ಹಾಕಿತ್ತು, ಪ್ರತಿ ದಿನ ಬೆಳಿಗ್ಗೆ 6ಕ್ಕೆ ಗೇಟು ತೆರೆದರೆ ಮಧ್ಯದಲ್ಲಿ ಹಾಕುವುದಿಲ್ಲ ಹೀಗೇಕೆ ಎಂದು ವಿಚಾರಿಸಿದಾಗ ಅವರಿಗೆ ತಿಳಿದು ಬಂದದ್ದು ಏನೆಂದರೆ ಇವರ ಬಂಗಲೆಯ ಎದುರಿನಲ್ಲಿ ನಂ.6. ರ ಬಂಗಲೆ ಅವತ್ತಿನ ಕೇಂದ್ರ ಗೃಹ ಮಂತ್ರಿ S. B. ಚೌಹಾಣರದ್ದು ಅವರ ರಕ್ಷಣೆಯ ಹೊಣೆ ಹೊತ್ತ ಬ್ಲಾಕ್ ಕಮ್ಯಾ೦ಡೊಗಳು ಗೃಹ ಸಚಿವರು ಮನೆಯಿಂದ ಹೋಗಿ ಬರುವ ಸಮಯದಲ್ಲಿ ಸುತ್ತಮುತ್ತದ ಎಲ್ಲಾ ಬಂಗಲೆಗಳ ಗೇಟ್ ಮುಚ್ಚಿ ಬಿ...