#ನನ್ನ_ಪ್ರೀತಿಯ_ಶಂಭೂರಾಮನ_ಇವತ್ತಿನ_ಫಲಾಹಾರ #ರಾಮ_ಫಲ. #ರಾಟ್_ವೀಲರ್_ಗಳು_ಮಾಂಸ_ಬಿಟ್ಟು_ಹಣ್ಣು_ತರಕಾರಿ_ತಿನ್ನುವುದಿಲ್ಲ_ಎಂಬುದಕ್ಕೆ_ಅಪವಾದ #ನಾವು_ಬೆಳೆಯುವ_ಬೆಳೆಸುವ_ಪರಿಸರವೇ_ನಮ್ಮ_ನಡೆ_ನುಡಿ_ಆಹಾರ_ಪದ್ಧತಿಗೆ_ಕಾರಣ #ಎಲ್ಲಾ_ಹಣ್ಣುಗಳೂ_ತಿನ್ನುವ_ಆದರೆ_ಕೆಲ_ಹಣ್ಣು_ಕೊಡಬಾರದ್ದರಿಂದ_ನೀಡುವುದಿಲ್ಲ. #ಆಯಾ_ಕಾಲದ_ಹಣ್ಣು_ಸಂಗ್ರಹಿಸಿ_ತಿನ್ನುವ_ನನ್ನ_ಖಯಾಲಿಗೆ #ಶಂಭೂರಾಮನ_ಸಾಥ್. https://youtu.be/w5k4WbPaarA?feature=shared ನನ್ನ ಮತ್ತು ನನ್ನ ಪ್ರೀತಿಯ ಶಂಭೂರಾಮನ ಬೆಳಗಿನ ವಾಕಿಂಗ್ ನಂತರ ನಾವಿಬ್ಬರು ಮನೆಗೆ ಬಂದು ಅವತ್ತಿನ ಕೆಲ ಹಣ್ಣುಗಳನ್ನು ಸೇವಿಸುವುದು ಅಭ್ಯಾಸ ಆಗಿದೆ ಇವತ್ತು ರಾಮ ಫಲ ಹಣ್ಣಾಗಿತ್ತು ಅದನ್ನು ಇಡಿಯಾಗಿ ಶಂಭೂರಾಮನಿಗೆ ನೀಡಿ ನಾನು ಒಂದು ಕಿತ್ತಳೆ ಮತ್ತು ಮೂಸುಂಬಿ ಹಣ್ಣು ತಿಂದೆ. ತಾಳಗುಪ್ಪ ಸಮೀಪದ #ಬೆಳ್ಳೆಣ್ಣೆ_ಶಂಭೂಲಿಂಗೇಶ್ವರ ನ ಪ್ರೀತ್ಯಾರ್ಥವಾಗಿ ಇವನಿಗೆ ಮಗ ಶ೦ಭೂ ಅಂತ ನಾಮಕರಣ ಮಾಡಿದ್ದ ಮುಂದಿನ ರಾಮ ನಾನು ಸೇರಿಸಿದೆ ಹಾಗಾಗಿ ಇವನು ಶಂಭೂ ರಾಮನಾಗಿದ್ದಾನೆ. ಇವನನ್ನು ಜೊತೆಗೆ ಕರೆದು ಕೊಂಡು ಕಲ್ಬುರ್ಗಿ ಜಿಲ್ಲೆಯ ಅಪ್ಜಲ್ಪುರ ತಾಲ್ಲೂಕಿನ ಗಾಣಗಾಪುರ ದತ್ತ ಮುಂದಿರಕ್ಕೆ ದರ್ಶನಕ್ಕೆ ಹೋಗುವ ಯಾತ್ರೆ ಸಂಕಲ್ಪ ಮಾಡಿದ್ದೇವೆ. ಭಗವಾನ್ ದತ್ತರು ಶ್ವಾನಗಳು ಯಾವುದೇ ರೀತಿಯ ಆಸೆಗಳಿಲ್ಲದೆ ಯಾವ...