Blog number 950. ಸರ್ವರಿಗೂ 2022ರ ಗೌರಿ-ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು, ಜಾತಿ ಆಚರಣೆ ಮನೆಯ ಒಳಗಿರಲಿ ಪ್ರೀತಿ ಎಲ್ಲರ ಮೇಲಿರಲಿ, ದಯೆಯೇ ಧರ್ಮದ ಮೂಲ ಮತ್ತು ದೇವರು ಸನ್ಮಾರ್ಗ ತೋರಿಸುತ್ತಾರೆಂಬ ನಂಬಿಕೆ ನಮ್ಮೆಲ್ಲರದ್ದು ಆಗಿರಲಿ.
#ಗೌರಿ_ಗಣೇಶ_ಚತುರ್ಥಿ_ಶುಭಾಷಯಗಳು. #ವರ_ಸಿದ್ದಿ_ಅನುಗ್ರಹಿಸು_ವರಸಿದ್ದಿ_ವಿನಾಯಕ #ವಿಘ್ನಗಳ_ನಿವಾರಿಸು_ವಿನಾಯಕ. #GOD_SHOWS_GOODWAYS. ಗೌರಿ ಗಣೇಶ ಹಬ್ಬದ ಶುಭಾಶಯಗಳು ಎಲ್ಲರಿಗೂ ಹಾರೈಸುತ್ತೇನೆ, ನನ್ನ ಪೂರ್ವಜರ ಪುಣ್ಯದಿಂದ 16 ವರ್ಷದ ಹಿಂದೆ ನಮ್ಮ ಊರಲ್ಲಿ ಶ್ರೀವರಸಿದ್ಧಿ ವಿನಾಯಕ ದೇವರ ದೇವಸ್ಥಾನ ನಿರ್ಮಿಸಿ ಊರಿಗೆ ಸಮರ್ಪಿಸುವ ಪುಣ್ಯದ ಕೆಲಸ ನನಗೆ ದೇವರೇ ದಯಪಾಲಿಸಿದ್ದು. ನಿಮಾ೯ಣದ ವಾಸ್ತು, ಕೃಷ್ಣ ಶಿಲಾ ವರಸಿದ್ಧಿವಿನಾಯಕ ದೇವರ ಶಿಲ್ಪ ಕೋಲಾರದ ಶಿವಾರಪಟ್ಟಣದ ರಾಷ್ಟ್ರ ಪ್ರಶಸ್ತಿ ವಿಜೇತ ಶಿಲ್ಪಿಯಿಂದ ಮಾಡಿಸಿ, ನಮ್ಮ ಹಳ್ಳಿಯಲ್ಲಿ ಪ್ರತಿಷ್ಟಾಪಿಸಿ, ದೇವಾಲಯದ ಉದ್ಘಾಟನ ದಿನ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ ದಂಪತಿ ಮತ್ತು ನಮ್ಮ ಊರ ಹಿರಿಯ ಗನ್ನಿಸಾಹೇಬರಿಂದ ದೇವಾಲಯದ ಗೋಪುರದ ಕಲಶಕ್ಕೆ ಕಲಶಾಭಿಷೇಕ ಮಾಡಿಸಿ ಇವತ್ತಿನವರೆಗೆ ನಿರ್ವಿಘ್ನವಾಗಿ ಭಕ್ತಿಯಿಂದ ಭಕ್ತರು ಪೂಜಿಸುವಂತ ನಮ್ಮ ಹಳ್ಳಿಯ ಶ್ರೀವರ ಸಿದ್ಧಿ ವಿನಾಯಕ ದೇವಸ್ಥಾನದ ನೇತೃತ್ವವಹಿಸಿದ್ದ ಬೆಂಗಳೂರಿನ ವಿಜಯನಗರದ ಪ್ರಖ್ಯಾತ ಜೋತಿಷಿ ಡಾ.ಎನ್.ಎಸ್.ವಿಶ್ವಪತಿ ಶಾಸ್ತ್ರೀಗಳಿಗೆ ಯಾವತ್ತೂ ಸ್ಮರಿಸುತ್ತಾ ಅವರ ಆಶ್ರೀವಾದ ಬೇಡುತ್ತೇನೆ ಈಗ ಅಮೇರಿಕಾದಲ್ಲಿ ಪುತ್ರನ ಮನೆ ಗೃಹ ಪ್ರವೇಶಕ್ಕೆ ದಂಪತಿಗಳು ಹೋಗಿದ್ದಾರೆ. ದೇವಾಲಯದ ಕಲಶ ನೀಡಿದವರು ತ್ಯಾಗರ್ತಿಯ...