ಭದ್ರಾವತಿ_ಮಾಜಿ_ಶಾಸಕ_ಅಪ್ಪಾಜಿಗೌಡರ_ನೆನಪುಗಳು
ಶಿವಮೊಗ್ಗ ಜಿಲ್ಲೆಯಲ್ಲಿ ಪಕ್ಷೇತರವಾಗಿ ಶಾಸಕರಾಗಿದ್ದ ತಾಕತ್ತು ಅವರದ್ದು.
ಇವತ್ತು ಅವರ ಆರನೇ ಪುಣ್ಯ ತಿಥಿ ಸಂದಭ೯ದಲ್ಲಿ ಅವರ ಸ್ಮರಣೆಯ ಲೇಖನ ಇದು
1994 ರಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ವಿದಾನ ಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಅಪ್ಪಾಜಿ ಗೌಡರೆಂಬ ಯಂಗ್ ಮ್ಯಾನ್ ಗೆದ್ದಿದ್ದರೆಂಬ ಸೋಜಿಗದ ಸುದ್ದಿ ಕೇಳಿದ್ದೆ ಆದರೆ ಅವರ ಪರಿಚಯ ಮತ್ತು ಬೇಟಿ ಆಗಿರಲಿಲ್ಲ.
ನಾನು 1995ರಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸದಸ್ಯನಾದಾಗ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಅವರ ಪರಿಚಯ ಬೇಟಿ ಆಯಿತು.
ಆಗ ಇವರ ಭದ್ರಾವತಿ ವಿದಾನ ಸಭಾ ಕ್ಷೇತ್ರದ ಶ್ರೀಮತಿ ಬಲ್ಕೀಷ್ ಬಾನು ಜಿ.ಪಂ. ಅಧ್ಯಕ್ಷೆ ಆಗಿದ್ದರು.
ನನ್ನ ಎಲ್ಲಾ ಜನಪರ ಹೋರಾಟಕ್ಕೆ ಜಿ.ಪಂ.ಸಭೆಯಲ್ಲಿ ಶಾಸಕರಾಗಿದ್ದ ಅಪ್ಪಾಜಿ ಗೌಡರು ಬೆಂಬಲಿಸಿ ಮಾತಾಡುತ್ತಿದ್ದದ್ದು ಈಗ ನೆನಪು.
ಕೆಲ ವರ್ಷದ ಹಿಂದೆ ಶಿವಮೊಗ್ಗ ಜಿಲ್ಲಾ ಜೆಡಿಎಸ್ ಪಕ್ಷದ ಅಧ್ಯಕ್ಷರಾದ ಎಂ.ಶ್ರೀಕಾಂತರ ಜೊತೆ ಅವರ ಮನೆಗೆ ಹೋದಾಗ ಒಂದೆರೆಡು ಗಂಟೆ ಈ ಹಳೇ ನೆನಪುಗಳ ಮಾತಾಡಿದ್ದೆವು.
ಕೊರಾನ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ 3- ಸೆಪ್ಟಂಬರ್- 2020 ರಂದು ಅಪ್ಪಾಜಿ ಗೌಡರು ಇಹಲೋಕ ತ್ಯಜಿಸಿದರು, ಇವತ್ತು ಅವರ ಆರನೇ ಪುಣ್ಯ ತಿಥಿ.
#bhadravathi #Appajigowda #MLA #coronavirus2020
Comments
Post a Comment