ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.
ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.
ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.
ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.
ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ್ರಾ ದೇಣಿಗೆಯಲ್ಲಿ ಅವ್ಯವಹಾರ ಆಗಿದೆ ಎಂಬ ದೂರು ನೀಡಲಾಗಿತ್ತೆ೦ದು ಕೆಳದಿ ಸಂಶೋದಕರಾದ ಡಾII ವೆಂಕಟೇಶ್ ಜೋಯಿಸ್ ಬರೆದ ಲೇಖನ ಇಲ್ಲಿ ಲಗತ್ತಿಸಲಾಗಿದೆ.
ಅದೇನೆ ಇರಲಿ ಸಾಗರದ ಮಾರಿಕಾಂಬಾ ಜಾತ್ರೆ ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿದೆ, 10 ದಿನ ನಡೆಯುವ ಈ ಜಾತ್ರೆಗೆ ಪ್ರತಿದಿನ ಲಕ್ಷಕ್ಕೂ ಹೆಚ್ಚು ಜನ ಸೇರುತ್ತಾರೆ, ದೇವರ ಪೂಜೆ ದಾಮಿ೯ಕ ಕಾಯ೯ಕ್ರಮ, ಸಾಂಸ್ಕೃತಿಕ ಕಾಯ೯ಕ್ರಮದ ಜೊತೆಯಲ್ಲಿ ಸಾವ೯ಜನಿಕರಿಗೆ ಅತಿ ಹೆಚ್ಚು ಮನರಂಜನೆ ಅಮುಸ್ಮೆಂಟ್ ಪಾಕ್೯ಗಳಿಂದ.
ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯೂ ಇರುತ್ತದೆ, ಸಾಗರ ಪಟ್ಟಣದ ಎಲ್ಲಾ ಜಾತಿ ವಗ೯ದವರಿಗೂ ಈ ಜಾತ್ರೆ ಸಂಭ್ರಮ, ಅದಿಕ ವೆಚ್ಚದ್ದಾಗಿದೆ.
ಶೂದ್ರವಗ೯ದಲ್ಲಿ 3 ವಷ೯ಕ್ಕೆ ಒಮ್ಮೆ ಸಂಬಂದಿಗಳನ್ನ ಕರೆದು ಮಾಂಸದ ಔತಣ ಉಣಬಡಿಸುವ, ಜಾತ್ರೆಯಲ್ಲಿ ಅವರನ್ನೆಲ್ಲ ತಿರುಗಾಡಿಸಿ ದೇವಿ ಮೂತಿ೯ ದಶ೯ನ ಪೂಜೆ ಮಾಡಿಸಿ, ಜಾತ್ರೆಯಲ್ಲಿನ ಅಮೂಸ್ಮೆ೦ಟ್ ಪಾಕ್೯ನಲ್ಲಿ ತೊಟ್ಟಿಲು, ಬಾವಿಯಲ್ಲಿ ಓಡಿಸುವ ಬೈಕ್, ಕಾರ್ ಸಾಹಸ ಹೀಗೆ ಹತ್ತು ಹಲವು ರೀತಿಯ ಮನರಂಜನೆ ನೋಡಿ ಅಲ್ಲಿ ದೊರೆಯುವ ತಿಂಡಿ ತಿನಿಸು ಸವಿದು, ಅಂಗಡಿ ಮಳಿಗೆಗಳಲ್ಲಿ ಮಾರಾಟಕ್ಕಿಟ್ಟ ಆಟಿಕೆಗಳನ್ನ ಮಕ್ಕಳಿಗೆ ಕೊಡಿಸಿ, ಬಳೆ ಸರ ಇತ್ಯಾದಿ ಅಲOಕಾರಿಕ ವಸ್ತುಗಳನ್ನ ಹೆಂಗಳೆಯರಿಗೆ ಕೊಡಿಸಿ ಜಾತ್ರೆಯನ್ನ ಅಸ್ವಾದಿಸುತ್ತಾರೆ.
ಇದಕ್ಕಾಗಿ ಈ ವಷ೯ದ ಜಾತ್ರಾ ಪ್ರತಿ ಕುಟುಂಬದ ಕನಿಷ್ಠ ವೆಚ್ಚ 10 ಸಾವಿರದಿಂದ ಲಕ್ಷಕ್ಕೂ ಹೆಚ್ಚು ಎನ್ನುತ್ತಾರೆ, ಮುಸ್ಲಿ೦ ಕ್ರಿಶ್ಚಿಯನ್ನರ ಕುಟುಂಬದಲ್ಲೂ ಈ ಜಾತ್ರಾ ಸಂಭ್ರಮಕ್ಕೆ ನೆಂಟರು ಬರುತ್ತಾರೆ ಅವರಿಗೂ ಮೂರು ವಷ೯ಕ್ಕೆ ಒಮ್ಮೆ ದುಬಾರಿ ವೆಚ್ಚದಿದೆ.
ಜಾತ್ರ ಸಮೀತಿ ಶ್ರೀಮಂತವಾಗಿದ್ದು ವ್ಯವಸ್ಥಿತವಾಗಿ ಜಾತ್ರೆ ನಡೆಸುವುದರಿಂದ ಯಾವುದೇ ಅನಾಹುತ ನಡೆಯುವುದಿಲ್ಲ ಐತಿಹಾಸಿಕ ಚರಿತ್ರೆಯ ಈ ಮಾರಿಕಾಂಬಾ ಜಾತ್ರೆ ಒಂದು ರೀತಿ ಸಾಗರದ ಉತ್ಸವವಾಗಿದೆ, ಜಾತ್ರೆಯಿoದ ಜಾತ್ರೆಗೆ ಸಂಭ್ರಮ ಹೆಚ್ಚಾಗುತ್ತಿದೆ.
ಈ ಸಾರಿಯ ಜಾತ್ರೆಗೆ ನೂತನ ಮೈಸೂರು ಅರಸರು ಬಂದು ದೇವಿಯ ದಶ್೯ನ ಪಡೆದಿದ್ದು ಒಂದು ವಿಶೇಷವಾಗಿತ್ತು.
Comments
Post a Comment