ಭಾಗ -34, ಆನಂದಪುರಂ ಇತಿಹಾಸ, ಆನಂದಪುರಂನ ಶೈಕ್ಷಣಿಕ -ಸಾಂಸ್ಕೃತಿಕ ಮತ್ತು ಸಾಮಾಜಿಕ ಅಭಿವೃದ್ದಿಗೆ ಮಹತ್ತರ ಕೊಡುಗೆ ನೀಡಿದ ಡಾಕ್ಟರ್ ಸುಸೇನಾಥನ್
#ಭಾಗ_34. #ಆನಂದಪುರಂ_ಇತಿಹಾಸ. #ಆನಂದಪುರಂನ_ಶೈಕ್ಷಣಿಕ_ಸಾಮಾಜಿಕ_ಮತ್ತು_ಸಾಂಸ್ಕೃತಿಕ_ಕ್ಷೇತ್ರಕ್ಕೆ_ಅಪಾರ_ಕೊಡುಗೆ_ನೀಡಿದ_ಮಹಾನ್_ವ್ಯಕ್ತಿ. #ಡಾಕ್ಟರ್_ಸುಸೇನಾಥನ್ #ಸೌಮ್ಯ_ಶಿಸ್ತು_ತಾಳ್ಮೆ_ಪ್ರತಿರೂಪದವರು #ಆನಂದಪುರಂನ_ಅಗ್ರಹಾರದಲ್ಲಿ_ಎಲ್ಲರಿಗೂ_ಬೇಕಾದವರು. #ಆನಂದಪುರಂನ_ಶಾಲೆಗಳಲ್ಲಿ_ಬ್ಯಾಂಡ್_ತರಬೇತಿ_ನೀಡುತ್ತಿದ್ದರು. #ಸಂಗೀತ_ಸಾಧನ_ನುಡಿಸುವುದರಲ್ಲಿ_ಎತ್ತಿದ_ಕೈ. ಆನಂದಪುರಂನಲ್ಲಿ ಬದರಿನಾರಾಯಣ್ ಅಯ್ಯ೦ಗಾರರ ತಂದೆ ಜಮೀನ್ದಾರ್ ರಾಮಕೃಷ್ಣ ಅಯ್ಯಂಗಾರರು ಸಾರ್ವಜನಿಕರಿಗಾಗಿ ಕಟ್ಟಿಸಿದ್ದ ಸುಸಜ್ಜಿತ ಆಸ್ಪತ್ರೆ (ತಮ್ಮ ಪತ್ನಿ ಶ್ರೀಮತಿ ಕನಕಮ್ಮಾಳ್ ಸ್ಮಾರಕ) ಆ ಕಾಲದಲ್ಲೇ ಎಷ್ಟು ಸುಸಜ್ಜಿತ ಎಂದರೆ ಈ ಆಸ್ಪತ್ರೆ ಅವರಣದಲ್ಲಿ ವೈದ್ಯರು ಮತ್ತು ಮಹಿಳಾ ವೈದ್ಯರಿಗೆ ಎರೆಡು ಪ್ರತ್ಯೇಕ ಮನೆಗಳು, ರೋಗಿಗಳಿಗೆ ಆಹಾರ ತಯಾರಿಸಲು ಅಡುಗೆಮನೆ, ದಾಸ್ತಾನು ಕೊಠಡಿ, ನರ್ಸ್ ಕೌಟರ್ಸ್ಗಳು, ರೈಲ್ವೆ ಸ್ಟೇಷನ್ ಹತ್ತಿರ ಸಿಬ್ಬಂದಿಗಳಿಗಾಗಿ ಎರೆಡು ಹೆಚ್ಚುವರಿ ಮನೆಗಳು, ಶವ ಪರೀಕ್ಷೆಗಾಗಿ ಸಂತೆ ಮಾಕೆ೯ಟ್ ಮೂಲೆಯಲ್ಲಿ ಶವಾಗಾರ ಹೀಗಿದ್ದ ಆಸ್ಪತ್ರೆ ಒಳಗೆ ಸುಸಜ್ಜಿತ ಆಪರೇಷನ್ ಥಿಯೇಟರ್ ಕೂಡ ನಿರ್ಮಿಸಿದ್ದರು. ಉಚಿತ ಔಷದಕ್ಕಾಗಿ ಒ0ದು ಲಕ್ಷ ರೂಪಾಯಿ ನಿಶ್ಚಿತ ಠೇವಣಿ ಇಟ್ಟಿದ್ದರು (ಅದರ ಬಡ್ಡಿ ಹಣದಲ್ಲಿ ಹೆಚ್ಚುವರಿ ಔಷದಿ ಖರೀದಿಸಲಿಕ್ಕಾಗಿ), ಆನಂದಪುರಂ ಆಸ್ಪತ್ರೆಗೆ ಅತ್ಯುತ್ತಮ ಸಿಬ್ಬಂದ...