Skip to main content

Posts

Showing posts with the label Moola Mukambika temple of Kodachadri hills.

ಮೂಲ ಮೂಕಾಂಬಿಕ ದೇವಿಯ ಸಾನ್ನಿಧ್ಯ ಕೊಡಚಾದ್ರಿ ತಾಣ, ಅಲ್ಲಿನ ಪುರಾಣ ಕಾಲದ ದೇಶಿ ಕಬ್ಬಿಣದ ಕಂಬ ಮೂಕಾಸುರನ ಹತ್ಯೆ ಮಾಡಿದ ತ್ರಿಶೂಲ ಎ೦ಬ ನಂಬಿಕೆ ಇದೆ, ಇಲ್ಲಿ ನಡೆಯುವ ಶಕ್ತಿ ಪೂಜೆಗೆ ಸಾವಿರಾರು ವರ್ಷದ ನಂಟಿದೆ, ಉತ್ತರ ಪ್ರದೇಶದ ಗೋರಕನಾಥಪುರದ ನಾಥಪಂಥದ ನಿಕಟ ಸಂಬಂದ ಇರುವ ಕೊಡಚಾದ್ರಿ

#ಪುರಾಣ_ಕಾಲದ_ಇತಿಹಾಸ_ಇರುವ_ಮೂಲಮೂಕಾಂಬಿಕ_ಸ್ಥಳ #ಕೊಡಚಾದ್ರಿಯ_ಮೂಲಮೂಕಾಂಬಿಕ_ಸನ್ನಿದಾನದಲ್ಲಿನ_ಶಕ್ತಿಪೂಜೆ. #ಸಾವಿರಾರು_ವರ್ಷದಿಂದ_ಈ_ಪರಂಪರಾ_ಪೂಜಾ_ನಡೆಸಿಕೊಂಡು_ಬಂದಿರುವ_ಬಳೆಗಾರ_ಜೋಗಿ_ವಂಶಸ್ಥರು. #ಮೂಲಮೂಕಾಂಬಿಕ_ದೇವಾಲಯದ_ಎದುರಿನ_ಪ್ರಾಚೀನ_ಕಾಲದ_ದೇಶಿಕಬ್ಬಿಣದ_ಕಂಬ.     ಶಿವಮೊಗ್ಗ ಜಿಲ್ಲೆಯ ಕೊಡಚಾದ್ರಿ ಬೆಟ್ಟದಲ್ಲಿರುವ ಮೂಲ ಮೂಕಾಂಬಿಕ ದೇವರ ಸನ್ನಿದಿಗೆ ಪುರಾಣದ ಇತಿಹಾಸ ಇದೆ ಆದರೆ ಇದು ನಮ್ಮ ರಾಜ್ಯದ ಕನ್ನಡಿಗರಿಗಿಂತ ಕೇರಳ ಮತ್ತು ತಮಿಳುನಾಡಿಗರಿಗೆ ಹೆಚ್ಚು ಗೊತ್ತು.   ಕೊಲ್ಲೂರು ಮೂಕಾಂಬಿಕ ದರ್ಶನಕ್ಕೆ ಬಂದವರು ಕೊಡಚಾದ್ರಿ ಮೂಲ ಮೂಕಾಂಬಿಕ ದೇವಿ ದಶ೯ನ ಮಾಡಿ ಅಲ್ಲಿರುವ ಬಾರಾಪಂಥ ಯೋಗಿಗಳ ಸಿದ್ಧ ಪೀಠ ಮತ್ತು ಅದರ ಎದುರಿನ ಪುರಾತನ ಕಬ್ಬಿಣದ ಸ್ಥಂಭ ಮತ್ತು ಶಿಖರದ ಮೇಲಿನ ಸವ೯ಜ್ಞ ಪೀಠ ನಂತರ ಶಂಕರಾಚಾಯ೯ರು ತಪಸ್ಸುಗೈದ ಚಿತ್ರ ಮೂಲದ ಗುಹೆಯಲ್ಲಿ ಧ್ಯಾನ ಮಾಡಿ ವಾಪಾಸ್ ಬರುತ್ತಾರೆ.    ಈಗ ಇಲ್ಲಿಗೆ ಸವ೯ ಋತು ರಸ್ತೆ ಇಲ್ಲವಾದರೂ ಸಾದಾರಣ ರಸ್ತೆ ಜೀಪುಗಳಲ್ಲಿ ಪ್ರಯಾಣಿಸಲು ಸಾಧ್ಯವಿದೆ ಆದರೆ ಈ ಮೂಲ ಮೂಕಂಬಿಕ ದೇವಸ್ಥಾನದ ಅಚ೯ಕರಾದ ಬಳೆಗಾರ ಜೋಗಿ ಸಮಾಜದ ಕುಟುಂಬಕ್ಕೆ 800 ವರ್ಷದ ಇತಿಹಾಸ ಇದೆ ಆಗೆಲ್ಲ ರಸ್ತೆ ಇಲ್ಲ ವಾಹನ ಇಲ್ಲ ಆದರೂ ಇವರು ನಿರಂತರ ಪೂಜೆ ನಡೆಸಿಕೊಂಡು ಬಂದವರು, ನಾರಾಯಣ ಜೋಗಿ ಮತ್ತು ಕಾವೇರಮ್ಮ ದಂಪತಿ, ಅವರ ಅಳಿಯ ರಾಮ ಜೋಗಿ ಮತ್ತು ಮಗಳು ಸುಶೀಲಮ್...