Skip to main content

Posts

Showing posts with the label Once upon a time ALIGHAR LOCKS

ಉತ್ತರ ಪ್ರದೇಶದ ಆಲೀಘಡದ ಬೀಗ ಮಾರಾಟದಿಂದ ಜೀವನ ಸಾಗಿಸಿ ಮಕ್ಕಳಿಗೆ ವಿದ್ಯಾಬ್ಯಾಸ ಕೊಡಿಸಿ ಮಗನನ್ನ ಇಂಜಿನಿಯರ್ ಮಾಡಿರುವ ಶಿವಮೊಗ್ಗದ ಲಾಕ್ ಕಲಂದರ್ ಸಾಬ್, ಚೈನಾ ಬೀಗದ ಪೈಪೋಟಿಯಲ್ಲಿ ನಲುಗುತ್ತಿರುವ ಆಲೀಘಡ, ದಿಂಡಿಗಲ್ ಮತ್ತು ನಮ್ಮ ಶರಾವತಿ ನದಿ ದಂಡೆಯ ಮಾವಿನ ಕುರ್ವೆ ಬೀಗದ ಗೃಹ ಕೈಗಾರಿಕೆಗಳು.

#ಅತ್ಯುತ್ತಮ_ನಿತ್ಯಬಳಕೆ_ಬೀಗಗಳ_ಡೋರ್_ಡೆಲಿವರಿ_ಮಾಡುವ_ಶಿವಮೊಗ್ಗದ_ಕಲಂದರ್_ಸಾಬ್. #ಬೀಗ_ಮಾರಾಟದಿಂದ_ಜೀವನ_ಪ್ರಾರಂಬಿಸಿ_ಮಗನನ್ನು_ಇಂಜನಿಯರ್_ಮಾಡಿದ_ಸಾದಕ #ಚೈನಾದೇಶದ_ಬೀಗಗಳಿಂದ_ಸಾಂಪ್ರದಾಯಿಕ_ದೇಶಿಬೀಗ_ತಯಾರಕ_ಆಲೀಘಡ_ಮತ್ತು_ಮಾವಿನಕುವೆ೯ಗೆ_ಕಂಟಕ.   ಹಳೇ ಕಾಲದ ಆಭರಣದ ಪೆಟ್ಟಿಗೆಗಳು ಈ ಕಾಲಕ್ಕೆ ಆಂಟಿಕ್  ವಸ್ತುಗಳು, ಹಿತ್ತಾಳೆ - ತಾಮ್ರ-ಕಬ್ಬಿಣ- ಮರದಲ್ಲಿ ತಯಾರಿಸುತ್ತಿದ್ದ ವಿಶ್ವಕರ್ಮಿಯರು ಇದಕ್ಕೆ ಒಳಗಿಂದ ಅಳವಡಿಸುತ್ತಿದ್ದ ಬೀಗಗಳು ಈಗಲೂ ವಿಸ್ಮಯ ಉಂಟು ಮಾಡುವ೦ತಹ ಕೌಶಲ್ಯವಿರುವ ಡಿಂಗ್ ಡಾಂಗ್ ಗಂಟೆ ನಿನಾದ ಉಂಟು ಮಾಡುವ ಅಥವ ಪೆಟ್ಟಿಗೆ ಮಾಲಿಕನಿಗೆ ಮಾತ್ರ ರಹಸ್ಯ ಗೊತ್ತಿರುವ ತಂತ್ರಜ್ಞಾನದ ನಮ್ಮ ಶರಾವತಿ ನದಿ ತೀರದ ಮಾವಿನ ಕುರ್ವೆ ದ್ವೀಪದ ಬೀಗಗಳು.   ಉತ್ತರ ಪ್ರದೇಶದ ಆಲೀಘಡದ ಗೃಹ ಕೈಗಾರಿಕಾ ಬೀಗಗಳು   ಮತ್ತು ತಮಿಳು ನಾಡಿನ ದಿಂಡಿಗಲ್ ಲಾಕ್ ಗಳು ಜಗತ್ ಪ್ರಸಿದ್ದವಾಗಿದ್ದ ಬೀಗಗಳು.    ಈಗ ಚೈನಾ ದೇಶದ ಬೀಗಗಳು ಇವುಗಳಿಗೆ ಪೈಪೋಟಿ ನೀಡಿ ಮಾರಾಟದ ಬಹುಪಾಲು ಅದರದ್ದೇ ಸಿಂಹಪಾಲು ಆಗಿದೆ.   ನಮ್ಮ ದೇಶದ ಗೋದ್ರೇಜ್ ಕಂಪನಿ ಬೀಗಗಳು ಉತ್ಕೃಷ್ಣ ತಂತ್ರಜ್ಞಾನದ್ದಾಗಿ ಕ್ಲಾಸ್ ಬೀಗದ ಮಾರಾಟ ವಿಭಾಗದಲ್ಲಿ ಮುಂದಿದೆ.   ಮೊನ್ನೆ ಶಿವಮೊಗ್ಗದ ಬೀಗ ಮಾರಾಟದ ಕಲಂದರ್ ಸಾಬ್ ಬಂದಿದ್ದರು ನಾನು ಇವರ ಬೀಗ ಖರೀದಿದಾ...