ಉತ್ತರ ಪ್ರದೇಶದ ಆಲೀಘಡದ ಬೀಗ ಮಾರಾಟದಿಂದ ಜೀವನ ಸಾಗಿಸಿ ಮಕ್ಕಳಿಗೆ ವಿದ್ಯಾಬ್ಯಾಸ ಕೊಡಿಸಿ ಮಗನನ್ನ ಇಂಜಿನಿಯರ್ ಮಾಡಿರುವ ಶಿವಮೊಗ್ಗದ ಲಾಕ್ ಕಲಂದರ್ ಸಾಬ್, ಚೈನಾ ಬೀಗದ ಪೈಪೋಟಿಯಲ್ಲಿ ನಲುಗುತ್ತಿರುವ ಆಲೀಘಡ, ದಿಂಡಿಗಲ್ ಮತ್ತು ನಮ್ಮ ಶರಾವತಿ ನದಿ ದಂಡೆಯ ಮಾವಿನ ಕುರ್ವೆ ಬೀಗದ ಗೃಹ ಕೈಗಾರಿಕೆಗಳು.
#ಬೀಗ_ಮಾರಾಟದಿಂದ_ಜೀವನ_ಪ್ರಾರಂಬಿಸಿ_ಮಗನನ್ನು_ಇಂಜನಿಯರ್_ಮಾಡಿದ_ಸಾದಕ
#ಚೈನಾದೇಶದ_ಬೀಗಗಳಿಂದ_ಸಾಂಪ್ರದಾಯಿಕ_ದೇಶಿಬೀಗ_ತಯಾರಕ_ಆಲೀಘಡ_ಮತ್ತು_ಮಾವಿನಕುವೆ೯ಗೆ_ಕಂಟಕ.
ಹಳೇ ಕಾಲದ ಆಭರಣದ ಪೆಟ್ಟಿಗೆಗಳು ಈ ಕಾಲಕ್ಕೆ ಆಂಟಿಕ್ ವಸ್ತುಗಳು, ಹಿತ್ತಾಳೆ - ತಾಮ್ರ-ಕಬ್ಬಿಣ- ಮರದಲ್ಲಿ ತಯಾರಿಸುತ್ತಿದ್ದ ವಿಶ್ವಕರ್ಮಿಯರು ಇದಕ್ಕೆ ಒಳಗಿಂದ ಅಳವಡಿಸುತ್ತಿದ್ದ ಬೀಗಗಳು ಈಗಲೂ ವಿಸ್ಮಯ ಉಂಟು ಮಾಡುವ೦ತಹ ಕೌಶಲ್ಯವಿರುವ ಡಿಂಗ್ ಡಾಂಗ್ ಗಂಟೆ ನಿನಾದ ಉಂಟು ಮಾಡುವ ಅಥವ ಪೆಟ್ಟಿಗೆ ಮಾಲಿಕನಿಗೆ ಮಾತ್ರ ರಹಸ್ಯ ಗೊತ್ತಿರುವ ತಂತ್ರಜ್ಞಾನದ ನಮ್ಮ ಶರಾವತಿ ನದಿ ತೀರದ ಮಾವಿನ ಕುರ್ವೆ ದ್ವೀಪದ ಬೀಗಗಳು.
ಉತ್ತರ ಪ್ರದೇಶದ ಆಲೀಘಡದ ಗೃಹ ಕೈಗಾರಿಕಾ ಬೀಗಗಳು ಮತ್ತು ತಮಿಳು ನಾಡಿನ ದಿಂಡಿಗಲ್ ಲಾಕ್ ಗಳು ಜಗತ್ ಪ್ರಸಿದ್ದವಾಗಿದ್ದ ಬೀಗಗಳು.
ಈಗ ಚೈನಾ ದೇಶದ ಬೀಗಗಳು ಇವುಗಳಿಗೆ ಪೈಪೋಟಿ ನೀಡಿ ಮಾರಾಟದ ಬಹುಪಾಲು ಅದರದ್ದೇ ಸಿಂಹಪಾಲು ಆಗಿದೆ.
ನಮ್ಮ ದೇಶದ ಗೋದ್ರೇಜ್ ಕಂಪನಿ ಬೀಗಗಳು ಉತ್ಕೃಷ್ಣ ತಂತ್ರಜ್ಞಾನದ್ದಾಗಿ ಕ್ಲಾಸ್ ಬೀಗದ ಮಾರಾಟ ವಿಭಾಗದಲ್ಲಿ ಮುಂದಿದೆ.
ಮೊನ್ನೆ ಶಿವಮೊಗ್ಗದ ಬೀಗ ಮಾರಾಟದ ಕಲಂದರ್ ಸಾಬ್ ಬಂದಿದ್ದರು ನಾನು ಇವರ ಬೀಗ ಖರೀದಿದಾರಲ್ಲಿ ಒಬ್ಬ ಮತ್ತು ದೊಡ್ಡ ಖರೀದಿದಾರ ನೀವು ಅಂತ ಇವರು ಹೇಳುತ್ತಾರೆ ಅದಕ್ಕೆ ಕಾರಣ ನನ್ನ ಸಂಸ್ಥೆಯಲ್ಲಿ 70 ಕ್ಕೂ ಹೆಚ್ಚಿನ ಬೀಗ ಬಳಕೆಯಲ್ಲಿದೆ ಇವುಗಳು ಮಳೆ ಗಾಳಿಗೆ ತುಕ್ಕು ಹಿಡಿದು ಹಾಳಾದಾಗ ಅಥವ ಬೀಗದ ಕೈ ಕಳೆದು ಹೋದಾಗ ಅನಿವಾರ್ಯವಾಗಿ ಬದಲಿಸಲು ಹತ್ತಿಪ್ಪತ್ತು ಸ್ಪೇರ್ ಆಗಿ ಇಟ್ಟುಕೊಳ್ಳುತ್ತೇನೆ ಕಲಂದರ್ ಸಾಹೇಬರ ಹತ್ತಿರ ಈವರೆಗೆ 500 ಕ್ಕೂ ಹೆಚ್ಚು ಬೀಗ ಖರೀದಿದಾರ ನಾನು.
ಕಲಂದರ್ ಸಾಹೇಬರು ಅಯನೂರು ಸಮೀಪದ ಚಿನ್ಮನೆಯವರು ಸುಮಾರು 30 ವರ್ಷದ ಹಿಂದೆ ಆಲೀಘಡದ ಬೀಗ ಮಾರಾಟಗಾರರ ಸಹಾಯಕರಾಗಿ ಸೇರಿ ಗೋವಾ, ಆಂಧ್ರ ಮತ್ತು ಕರ್ನಾಟಕದ ಎಲ್ಲಾ ಊರು ತಿರುಗಾಡಿ ಬೀಗ ಮಾರಾಟ ಮಾಡುತ್ತಿದ್ದವರು ಈಗ ಪೈಪೋಟಿ ಎದುರಿಸಲಾರದೇ ಶಿವಮೊಗ್ಗ ಜಿಲ್ಲೆ ಮಾತ್ರ ಇವರ ಕಾರ್ಯಕ್ಷೇತ್ರ ಮಾಡಿಕೊಂಡಿದ್ದಾರೆ.
ಎಲ್ಲದಕ್ಕಿಂತ ಇವರು ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದು. ಒಬ್ಬ ಮಗ ಮೆಕ್ಯಾನಿಕಲ್ ಇಂಜೀನಿಯರ್ ಓದಿದ್ದಾರೆ, ಇನ್ನೋವ೯ ಪುತ್ರ ಪಿಯುಸಿ ವಿಜ್ಞಾನ ಓದುತ್ತಿದ್ದಾರೆ, ಮಗಳು ಕೂಡ. "ಸಾರ್ ಬೀಗ ಮಾರಾಟದಿಂದ ಈ ವರೆಗೆ ಜೀವನ ಮಾಡಿಕೊಂಡು ಮಕ್ಕಳಿಗೆ ಓದಿಸಿದೆ ಅವರೂ ಜವಾಬ್ದಾರಿಯಿಂದ ಓದಿದ್ದು ದೇವರ ದಯೆ" ಅನ್ನುತ್ತಾರೆ.
ಮುಂದಿನ ಸಾರಿ ಬರುವಾಗ ಮಾವಿನ ಕುವೆ೯ ಬೀಗ ತನ್ನಿ ಅಂದಿದ್ದೇನೆ ಹೆರಿಟೇಜ್ ಮಾವಿನ ಕುರ್ವೆ ಬೀಗ ಲಾಡ್ಜ್ ಗೆ ಬಳಸುವ ಉದ್ದೇಶ ಕೂಡ ಇದೆ.
ನನ್ನ ಅನುಭವದಲ್ಲಿ ಚೈನಾ ಬೀಗಕ್ಕಿಂತ ಕಲಂದರ್ ಸಾಹೇಬರು ತರುವ ಆಲೀಘಡದ ಬೀಗ ಅತ್ಯುತ್ತಮ ಗುಣಮಟ್ಟದ್ದು ಮತ್ತು ಕಲಂದರ್ ಸಾಹೇಬರ ನೂರು ರೂಪಾಯಿ ಬೀಗ ಅಂಗಡಿಯಲ್ಲಿ ನಾನೂರು ರೂಪಾಯಿ! ಹಾಗಾಗಿ ನಾನು ಕಲಂದರ್ ಸಾಹೇಬರನ್ನ ನೆಚ್ಚಿಕೊಂಡಿದ್ದೇನೆ ಇನ್ನೊಂದು ಕಾರಣ ಅವರ ಡೋರ್ ಡೆಲಿವರಿ ವ್ಯವಸ್ಥೆ ಕೂಡ.
ನಿಮಗೆ ಬೀಗ ಬೇಕಾದರೆ ಅವರ ಸಂಪರ್ಕ್ ಪೋನ್ ಸಂಖ್ಯೆ 9945211406ಗೆ ಕರೆ ಮಾಡಬಹುದು ನಿಮ್ಮ ಬಜೆಟ್ ಗೆ ತಕ್ಕ ಬೀಗ ಅವರಲ್ಲಿ ಸಿಗುತ್ತದೆ.
Comments
Post a Comment