ಮಲೆನಾಡಿನಲ್ಲಿ ವಿಸ್ತರಿಸುತ್ತಿರುವ ಮೆಕ್ಕೆಜೋಳದ ಬೆಳೆ, ದಕ್ಷಿಣ ಮೆಕ್ಸಿಕೋದಲ್ಲಿ ಹತ್ತು ಸಾವಿರ ವರ್ಷದ ಹಿಂದೆಯೇ ಬಳಸುತ್ತಿದ್ದರು. ವಿಶ್ವದ ಮೆಕ್ಕೆಜೋಳ ಬೇಳೆಯುವ ದೇಶದಲ್ಲಿ ಭಾರತಕ್ಕೆ ನಾಲ್ಕನೆ ಸ್ಥಾನವಿದೆ.
#ಪಾಪ್_ಕಾರ್ನ್_ಕಂಡು_ಹಿಡಿದವರು_ರೆಡ್_ಇಂಡಿಯನ್_ಅಮೇರಿಕಾದ_ಮೂಲನಿವಾಸಿಗಳು
#ಪಶ್ಚಿಮಘಟ್ಟದಲ್ಲಿ_ಹೆಚ್ಚುತ್ತಿರುವ_ಮೆಕ್ಕೆ_ಜೋಳ
ಈ ವರ್ಷದ ಏಪ್ರಿಲ್ ತಿಂಗಳಿಂದ ಬೀಳುತ್ತಿರುವ ಮಳೆ ಮುಂದಿನ ತಿಂಗಳು ಅಕ್ಟೋಬರ್ ವರೆಗೆ ಮುಂದುವರಿದರೆ ಅರ್ಧ ವರ್ಷ ಮಳೆಗಾಲ ಅಂದರೆ ಆರು ತಿಂಗಳೂ ಮಳೆ ಆದ೦ತೆ, ಈ ಮಳೆ ಈ ವರ್ಷದ ಮಲೆನಾಡಿನ ಜೋಳದ ಬೆಲೆ ಇಳುವರಿ ಏನು ಮಾಡುತ್ತದೆ ಗೊತ್ತಿಲ್ಲ.
ಅತಿ ಕಡಿಮೆ ಮಳೆ ಪ್ರದೇಶದ ಬೆಳೆ ಮೂಲ ಅಮೇರಿಕಾದ ದಕ್ಷಿಣ ಮೆಕ್ಸಿಕೊ, ಈ ಮೆಕ್ಕೆ ಜೋಳ 10 ಸಾವಿರ ವರ್ಷದ ಹಿಂದೆ ಇದ್ದ ಬಗ್ಗೆ ಸಂಶೋದನೆ ದೃಡಪಡಿಸಿದೆ.
ಅಮೇರಿಕಾ ಖಂಡದ ಮೂಲ ನಿವಾಸಿಗಳಾದ ರೆಡ್ ಇಂಡಿಯನ್ ರು ಪಾಪ್ ಕಾನ್೯ ಕಂಡು ಹಿಡಿದವರು!
ಈಗ ಇಡೀ ವಿಶ್ವದ ಮೆಕ್ಕೆಜೋಳದ ಶೇ 36 ಭಾಗ ಇಡೀ ಅಮೇರಿಕಾದಲ್ಲಿ ಬೆಳೆಯುತ್ತಾರೆ, ಯುರೋಪಿನಿಂದ ಅಮೇರಿಕಾಕ್ಕೆ ವಲಸೆ ಹೋದ ಯುರೋಪಿಯನ್ನರಿಂದ ಕ್ರಿಶ14 - 15 ರಲ್ಲಿ ಯುರೋಪಿಗೆ ಪರಿಚಯ ಆಗಿ ಈಗ ವಿಶ್ವದಾದ್ಯಂತ ಆಹಾರೋದ್ಯಮ, ಪಶು ಆಹಾರ, ಸ್ಟಾರ್ಚ್, ಎಥೆನಾಲ್, ಸಿರಪ್ ಮತ್ತು ಪಾಪ್ಕಾರ್ನ್ ಗಾಗಿ ವಿಶ್ವ ದಾದ್ಯಂತ ಬೇಡಿಕೆ ಪಡೆದಿದೆ.
ಭಾರತ ದೇಶ ಕೂಡ ವಿಶ್ವದ ಅತಿ ಹೆಚ್ಚು ಮೆಕ್ಕೆಜೋಳದಲ್ಲಿ ನಾಲ್ಕನೇ ಸ್ಥಾನಗಳಿಸಿದೆ, ನಮ್ಮ ದೇಶದಲ್ಲಿ ಆಂದ್ರ ಪ್ರದೇಶ ಅತಿ ಹೆಚ್ಚು ಮೆಕ್ಕೆಜೋಳ ಬೆಳೆಯುವ ರಾಜ್ಯ ಆಗಿದೆ ಇದರ ನಂತರದ ಸ್ಥಾನ ನಮ್ಮ ಕರ್ನಾಟಕ ಮತ್ತು ಬಿಹಾರ ಅಂತೆ.
ಅತಿ ಹೆಚ್ಚು ಮಳೆ ಬೀಳುವ ಪಶ್ಚಿಮ ಘಟ್ಟದಲ್ಲಿ ಮೆಕ್ಕೆಜೋಳ ಬೆಳೆಯುತ್ತಿರಲಿಲ್ಲ ಆದರೆ ಈಗ ಈ ಪ್ರದೇಶದಲ್ಲಿ ಕಡಿಮೆ ಮಳೆ ಮತ್ತು ಕಾಡು ನಾಶದಿಂದ ಮಲೆನಾಡಿನ ಖುಷ್ಕಿ ಜಮೀನು ಮೆಕ್ಕೆಜೋಳದ ಬೆಳೆಗೆ ಕ್ರಮೇಣ ಪ್ರಸಿದ್ದಿ ಪಡೆಯುತ್ತಿದೆ.
ವಿಟಮಿನ್ C ಹೆಚ್ಚಿರುವ ಆ೦ಟಿ ಆಕ್ಸಿಡೆಂಟ್ ಅಂಶ ಇರುವ ಮೆಕ್ಕೆಜೋಳ ಬೇಯಿಸಿ ತಿನ್ನುವ ಅಥವ ಗ್ರಿಲ್ ಮಾಡಿ ಅದಕ್ಕೆ ಮಸಾಲೆ ಮತ್ತು ಲಿಂಬೆಯ ರಸ ಸವರಿ ತಿನ್ನುವ ಖಯಾಲಿ ಈಗ ಎಲ್ಲೆಡೆ ಹೆಚ್ಚಾಗಿದೆ, ಬೀದಿ ಬದಿಯ ಗಾಡಿಗಳ ಸಾಲು ಸಾಲೇ ಇದಕ್ಕಾಗಿ ಇದೆ.
ನಿನ್ನೆ ಗೆಳೆಯ ಗೇರ್ ಬೀಸ್ ಚೆನ್ನಪ್ಪ ತಂದ ಮೆಕ್ಕೆಜೋಳ ನಮ್ಮ ಅಡುಗೆ ಮನೆಯಲ್ಲಿ ಗ್ರಿಲ್ ಕಾನ್೯ ಮಾಡಿ ಸಂಜೆಯ ಕಾಫಿಯೊಂದಿಗೆ ಸವಿದ ನೆನಪು ನಿಮ್ಮೊಂದಿಗೆ.
ನೀವು ಇದನ್ನು ತಯಾರಿಸಿ ಸವಿಯ ಬಾರದೇಕೆ ಇದು ಮೆಕ್ಕೆಜೋಳದ ಸೀಸನ್
Comments
Post a Comment