ಚಂಪಕ ಸರಸ್ಸುವಿನ ಶಿಲಾ ಮಯ ಆನೆಯ ಸುಂದರ ಚಿತ್ರ ಕ್ಲಿಕ್ಕಿಸಿದ ನಿವೃತ್ತ ಅಬಕಾರಿ ಅಧಿಕಾರಿ ಚೋರಡಿ ದತ್ತಾತ್ರೇಯರ ಕುಟುಂಬ.
#ಡೇರ್_ಅಂಡ್_ಡೆವಿಲ್_ಅಬಕಾರಿ_ಅಧಿಕಾರಿ_ಆಗಿದ್ದ_ದತ್ತಾತ್ರೇಯಸ್ವಾಮಿ.
#ನಾಣ್ಯ_ಸಂಗ್ರಹಾಕಾರರೂ_ಇತಿಹಾಸದ_ಬಗ್ಗೆ_ಹೆಚ್ಚಿನ_ಆಸಕ್ತಿ.
#ಇವರ_ಪತ್ನಿ_ಕುವೆಂಪು_ವಿಶ್ವವಿದ್ಯಾಲಯದ_ಸಿಂಡಿಕೇಟ್_ಸದಸ್ಯರು_ಜಿಲ್ಲಾ_ಮಹಿಳಾ_ಈಡಿಗ_ಸಮಾಜದ_ಅಧ್ಯಕ್ಷರು.
ನಾನು ಬರೆದ ಕಾದಂಬರಿ ತರಿಸಿಕೊಂಡು ಕೆಲವೇ ಗಂಟೆಯಲ್ಲಿ ಓದಿದ್ದರಂತೆ ಹಾಲಿ ಶಿವಮೊಗ್ಗ ತಾಲ್ಲೂಕಿನ ಚೋರಡಿಯಲ್ಲಿ ಕೃಷಿಯೊಂದಿಗೆ ನಿವೃತ್ತ ಜೀವನ ಮಾಡುತ್ತಿರುವ ದತ್ತಾತ್ರೇಯ ದಂಪತಿಗಳು.
ಈ ಕಾದಂಬರಿಯ ಕೇಂದ್ರವಾದ ರಾಣಿ ಚಂಪಕಳ ಸ್ಮರಣೆಗಾಗಿ ಕೆಳದಿ ರಾಜ ವೆಂಕಟಪ್ಪ ನಾಯಕರು ನಿರ್ಮಿಸಿದ ಚಂಪಕ ಸರಸ್ಸುವಿಗೆ ಇತ್ತೀಚಿಗೆ ಬೇಟಿ ನೀಡಿದ್ದರು ಮತ್ತು ಚಿತ್ರಿಕರಿಸಿದ್ದ ಕೆಲ ಸುಂದರ ಚಿತ್ರ ಕಳಿಸಿದ್ದಾರೆ.
ಇದರಲ್ಲಿ ಚಂಪಕ ಸರಸ್ಸುವಿನ ಎರೆಡು ಸುಂದರ ಆನೆಗಳಲ್ಲಿ ಒಂದು ಆನೆಯ ಪೋಟೋ ಮಾತ್ರ ಈವರೆಗೆ ತೆಗೆದ ಆನೆ ಚಿತ್ರಗಳಲ್ಲಿ ಇದು ವಿಶೇಷ ಅನ್ನಿಸುವಂತ ನವೀನ ಕೋನದಲ್ಲಿ ತೆಗೆದದ್ದು ನೋಡಿ ಆಶ್ಚಯ೯ ಆಯಿತು.
ನಾನು ಊರಲ್ಲಿಲ್ಲದ್ದರಿಂದ ಇವರ ನನ್ನ ಬೇಟಿ ಆಗಲಿಲ್ಲ, ದತ್ತಾತ್ರೇಯರು ಅಬಕಾರಿ ಇಲಾಖೆಯಲ್ಲಿದ್ದಾಗ ಡೇರ್ ಡೆವಿಲ್ ಅಧಿಕಾರಿ ಅಂತಾನೆ ಹೆಸರು ಪಡೆದಿದ್ದರು, ನಕಲಿ ಬ್ರಾಂಡಿ ಮಾಡುವವರಿಗೆ ಸಿಂಹಸ್ವಪ್ನ ಆಗಿದ್ದರು ಯಾರದೇ ಪ್ರಭಾವಕ್ಕೂ ಒಳಗಾಗದ ಡೊಂಟ್ ಕೇರ್ ಸ್ವಭಾವ ಇವರದ್ದು.
ಚೋರಡಿಯಲ್ಲಿ ಇವರು ಅತ್ಯುತ್ತಮ ಅಡಿಕೆ ತೋಟವನ್ನು ತೀರ್ಥಹಳ್ಳಿಯ ಪ್ರಗತಿ ಪರ ಕೃಷಿ ಸಂಶೋದಕರಾಗಿದ್ದ ಪುರುಶೋತ್ತಮರ ಮಾರ್ಗದರ್ಶನದಲ್ಲಿ ಮಾಡಿದ್ದಾರೆ ಇಲ್ಲೇ ನಿವೃತ್ತ ಜೀವನ ನಡೆಸಿದ್ದಾರೆ.
ಓದು ಬರಹದ ಜೊತೆ ಇವರ ನಾಣ್ಯ ಸಂಗ್ರಹದ ಹವ್ಯಾಸವೂ ಇದೆ, ಇವರ ನಾಣ್ಯ ಸಂಗ್ರಹದಲ್ಲಿ ಅಮೂಲ್ಯ ಮತ್ತು ಅಪರೂಪದ ನಾಣ್ಯಗಳಿದೆ.
ಇವರ ಪತ್ನಿ ಶ್ರೀಮತಿ ಗೀತಾಂಜಲಿ ಕೂಡ ಸದಾ ಕ್ರಿಯಾಶೀಲರು ಶಿವಮೊಗ್ಗ ಜಿಲ್ಲಾ ಈಡಿಗ ಸಮಾಜದ ಮಹಿಳಾ ಅಧ್ಯಕ್ಷರಾಗಿದ್ದು ಈಗ ಪ್ರತಿಷ್ಠಿತ ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಆಗಿದ್ದಾರೆ.
ಗೀತಾಂಜಲಿಯವರ ಅಜ್ಜ ಸಾಹುಕಾರ್ ಆನಂದ್ ಮಾಸ್ತರು ಆನಂದಪುರಂನವರು, ಇವರ ತಂದೆ ಸತ್ಯನಾರಾಯಣ್ ಆನಂದಪುರಂ ನಲ್ಲಿ ಜನಾನುರಾಗಿ ಆಗಿದ್ದರು, ಇವರೆಲ್ಲರ ಪ್ರಾಥಮಿಕ ವಿದ್ಯಾಬ್ಯಾಸ ಆನಂದಪುರದಲ್ಲೇ ಆಗಿದ್ದು ದತ್ತಾತ್ರೇಯರು ಒ0ದು ರೀತಿಯಲ್ಲಿ ಆನಂದಪುರಂನ ಅಳಿಯರಂತೆ.
Comments
Post a Comment