ರಾಟ್ ವೀಲರ್ ತಳಿ ಸಾಕುವ ಆಸೆ ಬಹು ವರ್ಷದ್ದು ಇದಕ್ಕೆ ತಯಾರಿ ಮಾಡಿಕೊಂಡು ಮೂರು ವರ್ಷ ಆಗಿತ್ತು, ಊಟಿಯಲ್ಲಿ ಕೆನಲ್ ಪಾರಂ ಇರುವ ವಿದೇಶದಲ್ಲಿ ಉದ್ಯೋಗದಲ್ಲಿರುವ ಜಗನ್ ರೂ ಸ್ಥಳಕ್ಕೆ ಬಂದು ಸಲಹೆ ನೀಡಿದ ಪ್ರಕಾರ ಮನೆ ಸುತ್ತಲೂ ಗೇಟ್ ಇತ್ಯಾದಿ ಅಳವಡಿಸಿದ್ದೆ.
ಈ ವರ್ಷ ಪುನಃ ಕೊರಾನಾ ಲಾಕ್ ಡೌನ್ ಶುರುವಾಗುವಾಗಲೆ ಮಗಳು ಅಳಿಯ ಬೆಂಗಳೂರಿಂದ ನಂಬಿಕಸ್ಥ ಕೆನಲ್ ಪಾರಂನಿಂದ 25 ದಿನದ ಶಂಭುವನ್ನು ಹುಟ್ಟಿದ ದಾಖಲೆ ಅದರ ವಂಶವಾಹಿಯ ಮಾಹಿತಿಯ ದಾಖಲೆಯೊಂದಿಗೆ ತಂದು ಕೊಟ್ಟರು.
ಸರಿಯಾಗಿ ತರಬೇತಿ ಸಣ್ಣವನಿಂದಲೆ ನೀಡದಿದ್ದರೆ ಅನೇಕ ಅನಾಹುತಕ್ಕೆ ಕಾರಣ ಆಗುವುದು ಸತ್ಯ, ಇದಕ್ಕೆ ಉದಾಹರಣೆ ನಮ್ಮ ಗೆಳೆಯರದ್ದೆ ನೋಡಿ,ಅವರ ಗೆಳೆಯರು ಸುಮಾರು ಆರು ತಿಂಗಳ ಈ ಜಾತಿ ನಾಯಿ ಸಾಕಿದವರಿಗೆ ಸುದಾರಿಸಲಾಗಲೇ ಇಲ್ಲ ಕಾರಣ ತರಬೇತಿ ನೀಡಲಾಗಲಿಲ್ಲ ಅದನ್ನು ನಮ್ಮ ಗೆಳೆಯರು ತಂದರು ತಂದ ದಿನವೇ ಪಕ್ಕದ ಮನೆಯ ಎಮ್ಮೆ ಕರು ಸಾಯಿಸಿತಂತೆ ಆದ್ದರಿಂದ ವಾಪಾಸ್ ಕೊಟ್ಟರು ಅಂತ, ಮೈಸೂರಿನ ಅಶ್ವದಳದ ಪ್ರಸಿದ್ದ ವೈದ್ಯರೂ ಇವುಗಳನ್ನು ಸಾಕು ಪ್ರಾಣಿ ಎ೦ದು ಒಪ್ಪುವುದಿಲ್ಲ ಸರಿಯಾಗಿ ತರಬೇತಿ ನೀಡಿ ಅಂತ.
ಈ ರೀತಿಯ ಎಚ್ಚರಿಕೆ ಸ್ವಲ್ಪ ಭಯ ಉಂಟು ಮಾಡಿದ್ದು ಸುಳ್ಳಲ್ಲ ಆದರೆ ಇದು ನಮಗೆ ನೀಡಿದ ಅತ್ಯುತ್ತಮ ಸಲಹೆಯೇ ಆದ್ದರಿಂದ ನನ್ನ ಶಂಭುವಿಗೆ ನನ್ನ ಮಗ ಈ ಆರು ತಿಂಗಳು ನೀಡಿದ ತರಬೇತಿ ಫಲ ನೀಡಿದೆ.
ಮುಂದಿನ ವರ್ಷ ಶಂಭುವಿಗೆ ಜೊತೆಗಾತಿ ತರುವ ಮನಸ್ಸು ಬಂದಿದೆ.
Comments
Post a Comment