ಆನಂದಪುರಂ ಇತಿಹಾಸ, ಭಾಗ - 61, ಆನಂದಪುರಂನ ಪುರಾತನ ಗಣಪತಿ ದೇವಾಲಯ ಏನಾಯಿತು? ಯಡೇಹಳ್ಳಿಯ ಕೆಂಡದ ಮಾಸ್ತಿಯಮ್ಮ ದೇವಾಲಯದ ಆವರಣ ಪುರಾತನ ಗಣಪತಿ ದೇವಾಲಯ ಆಗಿತ್ತಾ? ಕೆಳದಿ ಸೇನಾಧಿಕಾರಿ ವೀರ ಮರಣ ಹೊಂದಿದಾಗ ಸತಿ ಸಹಗಮನದ ಸ್ಥಳ ಉಪ್ಪಾರ ಸಮಾಜದ ಆರಾದ್ಯ ದೇವಾಲಯವಾಗಿದೆ.
#ಆನಂದಪುರಂ_ಇತಿಹಾಸ
#ಭಾಗ_61
#ಆನಂದಪುರಂನಲ್ಲಿದ್ದ_ಐತಿಹಾಸಿಕ_ಗಣಪತಿ_ದೇವಸ್ಥಾನ_ಏನಾಯಿತು?
#ಕೆಳದಿ_ಅರಸರು_ಕಾಲದಲ್ಲಿ_ಕೋಟೆಕಾರರ_ಪ್ರಕಾರ_ಗಣಪತಿ_ದೇವಸ್ಥಾನ_ಇರಲೇ_ಬೇಕಿತ್ತು.
#ಡಾ_ಎನ್_ಎಸ್_ವಿಶ್ವಪತಿಶಾಸ್ತ್ರೀಗಳ_ಪ್ರಕಾರ_ಕೇರಳದ_ಪಯ್ಯನೂರಿನ_ನಂಬೂದರಿಗಳ_ಅಷ್ಟಮಂಗಲದಲ್ಲೂ_ಉಲ್ಲೇಖ.
#ಕೆಳದಿ_ಸೈನ್ಯದ_ಅಧಿಕಾರಿ_ಬಿದನೂರಿನಲ್ಲಿ_ನಡೆದ_ಯುದ್ಧದಲ್ಲಿ_ವೀರಮರಣ_ಹೊಂದಿದ_ಸತಿಸಹಗಮನದ_ಪ್ರದೇಶ.
#ಉಪ್ಪಾರ_ಸಮಾಜದ_ಆರಾದನ_ಕೇಂದ್ರ_ಯಡೇಹಳ್ಳಿಯ_ಕೆಂಡದ_ಮಾಸ್ತಿಯಮ್ಮ_ದೇವಾಲಯ.
2006 ರವರೆಗೆ ಆನಂದಪುರಂ ಹೋಬಳಿಯಲ್ಲೇ ಗಣಪತಿ ದೇವಸ್ಥಾನ ಇರಲಿಲ್ಲ, 2006ರಲ್ಲಿ ಯಡೇಹಳ್ಳಿಯ ಹೊಸನಗರ ರಸ್ತೆಯಲ್ಲಿ ಐತಿಹಾಸಿಕ ಕೆಂಡದ ಮಾಸ್ತಮ್ಮ ದೇವರ ಗುಡಿ ಅವರಣದಲ್ಲಿ ಶ್ರೀ ವರಸಿದ್ಧಿವಿನಾಯಕ ಸ್ವಾಮಿ ದೇವಾಲಯ ನಿರ್ಮಾಣವಾಗಿ ನಿತ್ಯ ಪೂಜೆ, ಸಂಕಷ್ಟಹರ ಚತುರ್ಥಿ ದಿನ ಗಣಹೋಮ, ಸಂಕಷ್ಟಹರ ಪೂಜೆ ಚಂದ್ರ ದರ್ಶನದ ನಂತರ ಅನ್ನ ಸಂತರ್ಪಣೆ, ಪ್ರತಿ ವರ್ಷ ವಿನಾಯಕ ಚತುರ್ಥಿಯಂದು ಬ್ರಹ್ಮ ರಥೋತ್ಸವ, ಪಲ್ಲಕ್ಕಿ ಉತ್ಸವ, ಸಾಮೂಹಿಕ ಗಣಹೋಮ, ಸಾಮೂಹಿಕ ಅನ್ನ ಸಂತರ್ಪಣೆ (ಹೋಳಿಗೆ ತುಪ್ಪದೊಂದಿಗೆ) ಮತ್ತು ವಿಶೇಷವಾಗಿ ರಂಗ ಪೂಜೆ ನಡೆಯುತ್ತದೆ.
ಟ್ರಸ್ಟ್ ಗೌರವಾದ್ಯಕ್ಷರಾಗಿ ಬೆಂಗಳೂರಿನ ಪ್ರಖ್ಯಾತ ಜೋತಿಷಿ ಡಾ.ಎನ್. ಎಸ್.ವಿಶ್ವಪತಿ ಶಾಸ್ತ್ರೀಗಳು (ದೇವೇಗೌಡರು ಪ್ರದಾನ ಮಂತ್ರಿ ಆಗುವುದಾಗಿ ಜೋತಿಷ್ಯ ಹೇಳಿದವರು) ಈ ದೇವಾಲಯದ ಪ್ರತಿಷ್ಠಾಪನೆಯಿಂದ ಈವರೆಗೆ ವಾಸ್ತು ಮತ್ತು ಎಲ್ಲಾ ದಾಮಿ೯ಕ ಕಾರ್ಯಕ್ರಮ ಇವರ ಸಲಹೆ ಮೇರೆಗೆ ನಿರಾತಂಕವಾಗಿ ನೇರವೇರುತ್ತಿದೆ.
ಇವರು ಆನಂದಪುರಂ ಹೋಬಳಿ ತ್ಯಾಗರ್ತಿಯ ಇನಾಂದಾರರಾದ ಗುರುಮೂರ್ತಿ ರಾಯರ ಅಳಿಯ ( ಗುರುಮೂರ್ತಿ ರಾಯರ ಪುತ್ರಿ ಶ್ರೀಮತಿ ಸುದಾ ಮಣಿ ಪತಿ) ಇವರು ಸುಂದರವಾದ ಪಂಚಲೋಹದ (ತಮಿಳುನಾಡಿನ ಪಂಪುಹಾರದಲ್ಲಿ ತಯಾರಾದ) ಉತ್ಸವ ಮೂರ್ತಿ ನೀಡಿದ್ದಾರೆ, ಇವರ ಅತ್ತೆ (ಗುರುಮೂರ್ತಿಯರ ಪತ್ನಿ) ಶ್ರೀಮತಿ ಗೋಪುರದ ಕಲಶ ನೀಡಿದ್ದಾರೆ.
ಈ ನೂತನ ದೇವಾಲಯ ನಿರ್ಮಾಣ ಮಾಡಿರುವುದು ಕೆಂಡದ ಮಾಸ್ತಿಯಮ್ಮ ಮತ್ತು ಮಕ್ಕಳ ಮಾಸ್ತಿಯಮ್ಮ ಎಂಬ ಎರಡು ದೇಗುಲಗಳ ಅವರಣದಲ್ಲಿ, ಈ ದೇಗುಲಗಳು ಆ ಕಾಲದಲ್ಲಿ ಬಿದನೂರಿನ ಸೈನ್ಯಾಧಿಕಾರಿಗಳಾಗಿದ್ದ ಉಪ್ಪಾರ ಸಮಾಜದವರದ್ದಾಗಿದೆ ಎಂಬ ಮಾಹಿತಿ ಇದೆ ಅದರಂತೆ ಉಪ್ಪಾರ ಸಮಾಜದ ಈ ಸೇನಾಧಿಕಾರಿ ಕುಟುಂಬದವರು ಎಲ್ಲೆಲ್ಲೊ ನೆಲೆಸಿದ್ದಾರೆ,ವರ್ಷಕೊಮ್ಮೆ ಇಲ್ಲಿಗೆ ಬಂದು, ಈ ದೇವಾಲಯದ ಎದುರು ಇದ್ದಿಲಿಂದ ನಿಗಿನಿಗಿಸುವ ಕೆಂಡ ಮಾಡಿ ಅದರ ಎದರು ಮೊಸರನ್ನ ನೈವೇದ್ಯ ಮಾಡಿ ಪೂಜೆ ಮಾಡಿ ಇಲ್ಲೇ ಆಹಾರ ತಯಾರಿಸಿ ಬೋಜನ ಮಾಡಿ ತೆರಳುತ್ತಾರೆ.
ಈ ಪದ್ಧತಿ ಅನೇಕ ತಲೆಮಾರಿನಿಂದ ನಡೆದು ಬಂದಿದೆ, ಅವರಿಗೆ ನೆನಪಲ್ಲಿ ಉಳಿದಿರುವುದು ತಮ್ಮ ರಕ್ತ ಸಂಬಂದಿ ಕೆಳದಿ ಅರಸರ ಸೈನ್ಯದಲ್ಲಿ ಸೇನಾಧಿಕಾರಿ ಆಗಿದ್ದ ಅವರು ಯುದ್ಧದಲ್ಲಿ ವೀರ ಮರಣ ಹೊಂದಿದ್ದರಿಂದ ಇಲ್ಲಿ ಸತಿ ಸಹಗಮನ ನಡೆದ ಸ್ಮಾರಕ ಇದು ಅನ್ನುತ್ತಾರೆ ಮತ್ತೊಂದು ವದಂತಿ ಟಿಪ್ಪು ಬಿದನೂರು ಅಕ್ರಮಿಸಿದಾಗ ಅಲ್ಲಿದ್ದ ಸೇನಾಧಿಕಾರಿ ಸಮಾದಿ ಇಲ್ಲಿಗೆ ಸ್ಥಳಾಂತರಿಸಲಾಯಿತು ಅಂತಲು ಕೆಲವರ ನಂಬಿಕೆ.
ಪ್ರಖ್ಯಾತ ಜೋತಿಷಿ ಡಾ.ಎನ್.ಎಸ್.ವಿಶ್ವಪತಿ ಶಾಸ್ತ್ರಿಗಳ ಜೋತಿಷದ ಪ್ರಖಾರ ಈ ಜಾಗದಲ್ಲಿ ಪುರಾತನ ಗಣಪತಿ ದೇವಸ್ಥಾನ ಇತ್ತು ಅದು ಯಾವುದೋ ಕಾರಣದಿಂದ ನಶಿಸಿದೆ ಈಗ ಅಲ್ಲೇ ಪುನರ್ ನಿರ್ಮಾಣ ಆಗಿದೆ ಎನ್ನುತ್ತಾರೆ, ಕೇರಳದ ಪಯ್ಯನೂರಿನ ಪ್ರಖ್ಯಾತ ನಂಬೂದರಿಗಳಾದ ಅಷ್ಟಮಂಗಲ ಪ್ರಶ್ನೆಯಲ್ಲೂ ಇದೇ ಅಭಿಪ್ರಾಯ ಬಂದಿದೆ ಮತ್ತು ಈ ಸ್ಥಳದಲ್ಲಿ ಅಪಾರ ಪ್ರಮಾಣದ ನಿಧಿ ಇದೆ ಅದನ್ನು ತೆಗೆಯಲು ವಿಫಲ ಪ್ರಯತ್ನ ನೂರಾರು ವರ್ಷದ ಹಿಂದೆ ನಡೆದಿತ್ತು ಅನ್ನುತ್ತಾರೆ ಹಾಗಾಗಿದ್ದರೆ ಈ ಜಾಗದಲ್ಲಿದ್ದ ಬೃಹತ್ ಗುಂಡಿ ನಿಧಿಗಾಗಿ ಅಗೆದಿದ್ದಾಗಿರಬಹುದು.
ಕೆಳದಿ ಅರಸರ ಕಾಲದಲ್ಲಿ ಕೋಟೆಗಾರರಾಗಿದ್ದ ರಾಮಕ್ಷತ್ರಿಯರ ಅಭಿಪ್ರಾಯದಂತೆ ಕೋಟೆ ಒಳಗೆ ಆಂಜನೇಯ ದೇವಾಲಯ, ಕೋಟೆ ಹೊರಭಾಗದಲ್ಲಿ ದೇವಿ ದೇವಸ್ಥಾನ ಮತ್ತು ಗಣಪತಿ ದೇವಾಲಯ ಇರಲೇ ಬೇಕು ಅನ್ನುತ್ತಾರೆ ಆ ಪ್ರಕಾರ ಆನಂದಪುರಂ ಕೋಟೆ ಒಳಗೆ ಕೋಟೆ ಆಂಜನೇಯ ದೇವಸ್ಥಾನ, ಕೋಟೆ ಹೊರಬಾಗದಲ್ಲಿ ಕಡಲೇ ಹಂಕ್ಲು ಮಾರಿಕಾಂಬಾ ದೇವಾಲಯ ಇದೆ ಆದರೆ ಗಣಪತಿ ದೇವಸ್ಥಾನ ಮಾತ್ರ ಎಲ್ಲೂ ಇರದಿದ್ದರಿಂದ ಹಾಲಿ 15 ವರ್ಷದ ಹಿಂದೆ ಯಡೇಹಳ್ಳಿಯಲ್ಲಿ ನಿರ್ಮಿಸಿರುವ ಶ್ರೀ ವರಸಿದ್ಧಿವಿನಾಯಕ ದೇವಸ್ಥಾನದ ಸ್ಥಳ ಪುರಾತನ ಗಣಪತಿ ದೇವಸ್ಥಾನದ ಸ್ಥಳ ಎಂಬ ನಂಬಿಕೆ ಇದೆ.
ಶ್ರೀ ವರಸಿದ್ಧಿವಿನಾಯಕ ಸ್ವಾಮಿ ದೇವಾಲಯದ ಟ್ರಸ್ಟ್ ಅಧ್ಯಕ್ಷರಾಗಿ ಸ್ಥಳಿಯ ಹೊಂಬುಜ ಲಾಡ್ಜ್ ಪಾಲುದಾರರಾದ ಕೆ.ನಾಗರಾಜ್, ಟ್ರಸ್ಟಿಗಳಾಗಿ ಕುಬೇರಪ್ಪ ಗೌಡರು, ಗಣಪತಿ ಮಾಸ್ತರ್, ಡ್ರೈವರ್ ನಾಗೇಂದ್ರಪ್ಪ, ಗೇರ್ ಬೀಸ್ ನಾಗರಾಜ್, ಲಾರಿ ಮಾಲಿಕ ಸೋಮಶೇಖರ್ ಇದ್ದಾರೆ, ಟ್ರಸ್ಟಿ ಕುಬೇರಪ್ಪ ಗೌಡರು ಪ್ರದಾನ ಪುರೋಹಿತರೂ ಆಗಿದ್ದಾರೆ.
ಟ್ರಸ್ಟಿ ಸೋಮಶೇಖರ್ ಮತ್ತು ನಾಗೇಂದ್ರಪ್ಪ ಪಾರುಪತ್ಯದಾರರಾಗಿ ಕೂಡ ದೇವಾಲಯದ ಎಲ್ಲಾ ದಾಮಿ೯ಕ ಕಾರ್ಯಕ್ರಮ ನಡೆಸುತ್ತಾರೆ, ಗಣಪತಿ ಮಾಸ್ತರರು ವ್ಯವಸ್ಥಾಪಕರಾಗಿ ಜವಾಬ್ದಾರಿ ಹೊಂದಿದ್ದಾರೆ.
ನಾಳೆ ಭಾಗ-62.
Comments
Post a Comment