ಲಂಡನ್ ನ ಶ್ರೀಮಂತ ನಗರಿ ಪ್ಲೀಟ್ ನ ಕೌನ್ಸಿಲರ್ ಆಗಿ ಆಯ್ಕೆ ಆದ ಕನ್ನಡಿಗ ಅನಿವಾಸಿ ಭಾರತೀಯ ಕುಮಾರ್ ಕುಂಟಿಕಾನಮಠ ಇವರಿಗೆ ಸಮಸ್ತ ಕನ್ನಡಿಗರ ಅಭಿನಂದನೆಗಳು.
#ದೂರದ_ಇಂಗ್ಲೇಂಡ್_ಶ್ರೀಮ೦ತ_ನಗರ_ಪ್ಲೀಟ್_ಸಿಟಿ_ಕೌನ್ಸಿಲರ್_ಆಗಿ_ಆಯ್ಕೆ
#ಶ್ರೀರಾಮಕಥಾಮಂಜರಿ_ಶ್ರೀಕೃಷ್ಣಕಥಾಮಂಜರಿ_ಬರೆದ_ಕುಂಟಿಕಾನಮಠ_ಬಾಲಕೃಷ್ಣಭಟ್_ಪುತ್ರ
#ಕಲಾರಾದಕ_ಉದ್ಯಮಿ_ಹಠಗಾರ_ಅನಿವಾಸಿ_ಭಾರತೀಯ
#ಕುಮಾರ್_ಕುಂಠಿಕಾನಮಠ
ನಿನ್ನೆ ಗೆಳಿಯರಾದ ಕುಮಾರ್ ಕುಂಟಿಕಾನಮಠ ದೂರದ ಇಂಗ್ಲೇಂಡ್ ನ ಶ್ರೀಮಂತ ನಗರ ಪ್ಲೀಟ್ ಸಿಟಿ ಕೌನ್ಸಿಲರ್ ಆದ ಸುದ್ದಿ ಕೇಳಿ ಅತ್ಯಂತ ಸಂತೋಷದಿಂದ ಅವರಿಗೆ ಅಭಿನಂದನೆ ಅರ್ಪಿಸಿದೆ ಮತ್ತು ಈ ಸಂತೋಷವನ್ನು ಪೇಸ್ ಬುಕ್ ಗೆಳೆಯರಿಗಾಗಿ ಮತ್ತೊಮ್ಮೆ ಹಂಚಿಕೊಳ್ಳುವ ಬಯಕೆ ನನ್ನದು.
ಪುರಾತನವಾದ ಕುಂಟಿಕಾನಮಠ ಕೇರಳದ ಕಾಸರಗೋಡಿನ ಸಮೀಪ ಇದೆ, ಇವರ ಕುಟುಂಬದ್ದೇ ಆದ ಈ ಮಠವನ್ನು ಇವರ ಜಾತಿಯ ಹೊಸನಗರದ ಮಠಾದೀಶರು ತಮ್ಮ ಶಿಷ್ಯರ ಭುಜ ಭಲ ಮತ್ತು ಅವರ ಹಣ ಬಲದಿಂದ ವಶಪಡಿಸಿಕೊಂಡಿದ್ದರು.
ಆ ಸಂದಭ೯ದಲ್ಲಿ ಇವರ ವಯೋವೃದ್ದರಾಗಿದ್ದ ಇವರ ತಂದೆ ಕನ್ನಡದಲ್ಲಿ ಶ್ರೀ ರಾಮಕಥಾ ಮಂಜರಿ ಮತ್ತು ಶ್ರೀ ಕೃಷ್ಣ ಕಥಾ ಮಂಜರಿ ಎಂಬ ಬೃಹತ್ ಗ್ರಂಥ ಬರೆದ ಬೆಂಗಳೂರಿನ ಎನ್.ಎಲ್.ಎನ್. ವಿದ್ಯಾಸಂಸ್ಥೆಯಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಕುಂಟಿಕಾನಮಠ ಬಾಲಕೃಷ್ಣ ಭಟ್ಟರ ಮೇಲೂ ಹಲ್ಲೆ ನಡೆಸಿದ್ದರಿಂದ ಈ ಕುಟುಂಬ ನೋವು ದುಃಖ ಅನುಭವಿಸಿತ್ತು.
ಸದರಿ ಮಠಕ್ಕೆ ಲಕ್ಷಾಂತರ ದೇಣಿಗೆ ನೀಡಿದ್ದ ಕುಮಾರ್ ಲ೦ಡನ್ನಿಂದ ಸ್ವಾಮಿಗೆ ಪೋನಾಯಿಸಿದರೆ ಪೋನಿಗೆ ಸಿಗದ ಸ್ವಾಮಿ ನಂತರ ಇವರಿಗೆ ಬೆದರಿಕೆ ನೀಡಿದರು.
ಕರ್ನಾಟಕದ ಕಲಾವಿದರನ್ನು ದೂರದ ಲಂಡನ್ ನಲ್ಲಿ ಆದರಿಸಿ ಅವರ ಕಲಾ ಪ್ರದರ್ಶನಕ್ಕೆ ಸಹಕರಿಸುವ ಕುಮಾರ್ ನ್ಯಾಯಕ್ಕಾಗಿ ಎಂತಹ ಹೋರಾಟಕ್ಕು ಸಿದ್ಧರು ಅದರಂತೆ ಕೇರಳದ ನ್ಯಾಯಾಲಯಕ್ಕೆ ಇದನ್ನು ಒಯ್ದರು ಅಂತಿಮವಾಗಿ ಗೆಲುವು ಇವರದ್ದಾಗಿ ಪುನಃ ಇವರ ಸುಪರ್ದಿಯಲ್ಲಿ ದೇವಾಲಯ ನವೀಕರಣ ಆಗುತ್ತಿದೆ, ದೌರ್ಜನ್ಯ ಮಾಡಿದ ಮಠ ಈ ಮಠದ ಆಭರಣ, ಹಣ ಮತ್ತು ಪಂಚಲೋಹದ ವಿಗ್ರಹ ಇನ್ನೂ ಹಿಂದುರುಗಿಸುವ ಮನಸ್ಸು ಮಾಡಿಲ್ಲ.
ಹಿಂದಿನ ಮುಖ್ಯಮಂತ್ರಿ ಯಡೂರಪ್ಪನವರು ಈ ಮಠದ ಅವರಣದಲ್ಲಿ ಇವರ ತಂದೆಯ ಸ್ಮರಣಾರ್ಥ ಸಭಾ ಭವನಕ್ಕೆ ಕರ್ನಾಟಕ ಸರ್ಕಾರದಿಂದ ಹಣ ಮಂಜೂರು ಮಾಡಿದ್ದಾರೆ.
ಯಡೂರಪ್ಪರ ಕುಟುಂಬಕ್ಕೆ ಇವರು ಆಪ್ತರು, ಯಡೂರಪ್ಪರ ಪುತ್ರ ಸಂಸದ ರಾಘವೇಂದ್ರ ಮತ್ತು ಕುಮಾರ್ ಪ್ರೌಡ ಶಾಲಾ ವಿದ್ಯಾಬ್ಯಾಸದಲ್ಲಿ ಸಹಪಾಠಿಗಳು.
ಸಾಹಿತ್ಯ ಸೇವೆ, ಕಲಾಸೇವೆ,ಸಮಾಜ ಸೇವೆ ಮತ್ತು ದಾರ್ಮಿಕ ಸೇವೆಯಲ್ಲಿ ಸದಾ ಮುಂದಿರುವ ಕುಮಾರ್ ಕುಂಟಿಕಾನಮಠರು ಈಗ ಲಂಡನ್ನಿನ ಪ್ಲೀಟ್ ನಗರದ ಕೌನ್ಸಿಲರ್ ಆಗಿ ಆಯ್ಕೆ ಆಗಿದ್ದಾರೆ ಮುಂದಿನ ದಿನದಲ್ಲಿ ಇಂಗ್ಲೇಂಡಿನ ಪಾರ್ಲಿಮೆಂಟ್ ಗೂ ಆಯ್ಕೆ ಆಗಿ ಕರ್ನಾಟಕ ರಾಜ್ಯದ ಕನ್ನಡಿಗರಿಗೆ ಹೆಮ್ಮೆ ಉಂಟು ಮಾಡುವ ಸಂದರ್ಭ ಬರಲಿ ಎಂದು ಅವರಿಗೆ ಶುಭ ಹಾರೈಸುತ್ತೇನೆ.
Comments
Post a Comment